ನವದೆಹಲಿ: ನವದೆಹಲಿ: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ನೇಮಕ ಮಾಡಿರುವ ಮಧ್ಯಸ್ಥಿಕೆ ಸಮಿತಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವಲ್ಲಿ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂ ನೇಮಿತ ಮಧ್ಯಸ್ಥಿಕೆ ಸಮಿತಿಯ ಒಟ್ಟಾರೆ ಸ್ಥಿತಿಗತಿಯ ವರದಿಯನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆ ನಡೆಸಿತ್ತು.
ಇದೀಗ ಕೋರ್ಟ್ ಈ ಮಹತ್ವದ ವಿಚಾರವನ್ನು ನಿತ್ಯ ವಿಚಾರಣೆ ನಡೆಸಲಿದ್ದು, ಆಗಸ್ಟ್ 6ರಿಂದ ದಿನಂಪ್ರತಿ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಪೀಠ ಅಯೋಧ್ಯೆ ವಿವಾದವನ್ನು ವಿಚಾರಣೆ ನಡೆಸಲಿದೆ.