ETV Bharat / bharat

ರಾಮ ಮಂದಿರ ನಕ್ಷೆಯನ್ನು ಅಧಿಕೃತವಾಗಿ ಟ್ರಸ್ಟ್​​​ಗೆ ಹಸ್ತಾಂತರಿಸಿದ ಅಭಿವೃದ್ಧಿ ಪ್ರಾಧಿಕಾರ - ರಾಮ್​​ ಮಂದಿರ ಟ್ರಸ್ಟ್

ಟ್ರಸ್ಟ್​ ಮೂಲದ ಪ್ರಕಾರ ದೇವಾಲಯದ ನಿರ್ಮಾಣ ಪ್ರಾಚೀನ ಕಾಲದ ವಾಸ್ತುಶಿಲ್ಪ ಸೇರಿ ಅಂದಿನ ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ಭೂಕಂಪ, ಪಾಕೃತಿಕ ವಿಕೋಪದಂತಹ ಘಟನೆ ನಡೆದರೂ ದೇವಾಲಯಕ್ಕೆ ಹಾನಿಯಾಗಬಾರದು ಎಂಬ ಉದ್ದೇಶ..

Ayodhya authorities approve Ram temple building plan
ರಾಮ ಮಂದಿರ ನಕ್ಷೆಯನ್ನು ಅಧಿಕೃತವಾಗಿ ಟ್ರಸ್ಟ್​​​ಗೆ ಹಸ್ತಾಂತರಿಸಿದ ಅಭಿವೃದ್ಧಿ ಪ್ರಾಧಿಕಾರ
author img

By

Published : Sep 4, 2020, 3:06 PM IST

ಅಯೋಧ್ಯೆ (ಯುಪಿ): ಭಗವಾನ್ ರಾಮನ ಜನ್ಮಸ್ಥಳದಲ್ಲಿ ರಾಮ ದೇವಾಲಯದ ಅಡಿಪಾಯದ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಅಂಗೀಕರಿಸಿರುವ ರಾಮ ದೇವಾಲಯದ ನಕ್ಷೆಯನ್ನು ಅಧಿಕೃತವಾಗಿ ರಾಮ್​​ ಮಂದಿರ ಟ್ರಸ್ಟ್​ಗೆ ಹಸ್ತಾಂತರಿಸಿದೆ.

ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕ್ಯಾಂಪಸ್ ಅಭಿವೃದ್ಧಿಯ ವಿನ್ಯಾಸವನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ರಾಮ್ ದೇವಾಲಯದ ನಕ್ಷೆಯೊಂದಿಗೆ ಪ್ರದರ್ಶಿಸಿತ್ತು. ಅಲ್ಲದೆ ವಿನ್ಯಾಸದ ನಕ್ಷೆಯನ್ನು ಅಂತಿಮಗೊಳಿಸಿತ್ತು.

ಈ ಕುರಿತು ಮಾತನಾಡಿರುವ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್​​ ಮಾತನಾಡಿ, ದೇವಾಲಯ ಸಾವಿರಾರು ವರ್ಷ ಬಾಳಿಕೆ ಬರುವಂತೆ ಮಾಡಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕಾನೂನು ಪ್ರಕಾರವೇ ದೇವಾಲಯದ ಪ್ರತಿ ಕಾರ್ಯ ನಡೆಯಲಿದೆ. ಎಲ್ಲಾ ಪ್ರಮುಖ ಕೆಲಸಗಳು ಈಗಾಗಲೇ ಮುಕ್ತಯವಾಗಿವೆ. ದೇವಾಲಯ ಸ್ಥಾಪನೆಯ ಸ್ಥಳದ 60 ಅಡಿ ಆಳದ ಮಣ್ಣನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದಿದ್ದಾರೆ.

ಇದಲ್ಲದೆ, ದೇವಾಸ್ಥಾನ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಪ್ರತಿ ವಸ್ತುಗಳನ್ನು ಐಐಟಿಎಂ (ಇಂಡಿಯನ್​ ಇನ್ಸ್​​ಸ್ಟಿಟ್ಯೂಟ್​ ಆಫ್ ಮದ್ರಾಸ್​​​​) ಅಧ್ಯಯನ ನಡೆಸುತ್ತಿದೆ. ಅಲ್ಲದೆ ಆಗಸ್ಟ್ 20ರಂದು ಇಂಜಿನಿಯರ್​​​ಗಳು ಸ್ಥಳಪರಿಶೀಲನೆ ನಡೆಸಿ ಮಣ್ಣಿನ ಪರೀಕ್ಷೆ ನಡೆಸಿದ್ದಾರೆ ಎಂದಿದ್ದಾರೆ.

ಟ್ರಸ್ಟ್​ ಮೂಲದ ಪ್ರಕಾರ ದೇವಾಲಯದ ನಿರ್ಮಾಣ ಪ್ರಾಚೀನ ಕಾಲದ ವಾಸ್ತುಶಿಲ್ಪ ಸೇರಿ ಅಂದಿನ ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ಭೂಕಂಪ, ಪಾಕೃತಿಕ ವಿಕೋಪದಂತಹ ಘಟನೆ ನಡೆದರೂ ದೇವಾಲಯಕ್ಕೆ ಹಾನಿಯಾಗಬಾರದು ಎಂಬ ಉದ್ದೇಶ ಹೊಂದಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.