ಹಿಸಾರ್ (ಮಧ್ಯಪ್ರದೇಶ): ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಾನು ಚಪ್ಪಲಿ ಧರಿಸುವುದಿಲ್ಲ ಎಂದು ಮಧ್ಯಪ್ರದೇಶದ ಆಟೋರಿಕ್ಷಾ ಚಾಲಕನೊಬ್ಬ ಶಪಥ ಮಾಡಿದ್ದಾನೆ.
ಹಿಸಾರ್‌ನ ಆರ್ಯನಗರ ಗ್ರಾಮದ ಮೂಲದ ರಾಜ್‌ಪಾಲ್ ಬರ್ಮಾ, ಭಾರತದಲ್ಲಿ ಹೆಣ್ಣು ಮಕ್ಕಳು ಹುಟ್ಟಿದ ದಿನದಿಂದಲೇ ಚಿತ್ರಹಿಂಸೆ ಮತ್ತು ಹಿಂಸಾಚಾರಕ್ಕೆ ಒಳಗಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ನ್ಯಾಯವೇ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೀಗಾಗಿ ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆವರೆಗೂ ನಾನು ಪಾದರಕ್ಷೆ ಧರಿಸುವುದಿಲ್ಲ ಎಂದು ಆಟೋ ಚಾಲಕ ಶಪಥ ಮಾಡಿದ್ದಾನೆ.
ಈ ಮೊದಲು ನಿರ್ಭಯಾ ಸಾಮೂಹಿಕ ಅತ್ಯಾಚಾರದ ಅಪರಾಧಿಗಳನ್ನು ಗಲ್ಲಿಗೇರಿಸಿದ ದಿನದಂದು, ರಾಜ್‌ಪಾಲ್ ಜನರಿಗೆ ಉಚಿತ ಆಟೋ ಪ್ರಯಾಣ ಸೇವೆ ನೀಡಿದ್ದರು. ಇದಲ್ಲದೇ ರಾಜ್‌ಪಾಲ್ ಮಹಿಳೆಯರು ಮತ್ತು ವಿಕಲಚೇತನರ ರಕ್ಷಾ ಬಂಧನ ದಿನದಂದು ಉಚಿತವಾಗಿ ಆಟೋ ಸೇವೆ ಒದಗಿಸುತ್ತಿದ್ದಾರೆ.