ETV Bharat / bharat

ಸ್ವಂತ ಮನೆಯನ್ನೇ ಕ್ವಾರಂಟೈನ್ ಕೇಂದ್ರ ಮಾಡಲು  ಮುಂದಾದ ಯುವಕ!

author img

By

Published : Jun 24, 2020, 4:11 PM IST

ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು, ಕೋವಿಡ್​​ ಶಂಕಿತರಿಗೆ ಹೋಂ ಕ್ವಾರಂಟೈನ್​ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ.

Aurangabad youth
Aurangabad youth

ಔರಂಗಾಬಾದ್​: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಾಗೂ ಕ್ವಾರಂಟೈನ್​ ಮಾಡಲು ಸರಿಯಾದ ಸೌಲಭ್ಯವಿಲ್ಲದೇ ಸರ್ಕಾರ ಕಷ್ಟಪಡುವಂತಾಗಿದೆ. ಇದರ ಮಧ್ಯೆ ಔರಂಗಾಬಾದ್​ನ ಯುವಕನೋರ್ವ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು ತನ್ನ ಮನೆ ಕ್ವಾರಂಟೈನ್​ ಸೆಂಟರ್​ ಆಗಿ ಬಳಸಿಕೊಳ್ಳುವಂತೆ ತಿಳಿಸಿದ್ದಾನೆ.

ನಾಲ್ಕು ರೂಂ ಹೊಂದಿರುವ ಮನೆಯನ್ನ ಕೋವಿಡ್​ ಶಂಕಿತರಿಗೋಸ್ಕರ ಮೀಸಲಿಡಲು ಕಿರಣ್​ ಡೊರ್ಲೆ ಮುಂದಾಗಿದ್ದಾನೆ. ಹೋಂ ಕ್ವಾರಂಟೈನ್​ಗೋಸ್ಕರ ಇದರ ಬಳಕೆ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಟೀ, ಉಪಹಾರ ಸೇರಿದಂತೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲು ಆತ ನಿರ್ಧರಿಸಿದ್ದಾನೆ. ಪಲ್ಸಿ ಗ್ರಾಮದಲ್ಲಿ ಕೋವಿಡ್​ ಶಂಕಿತರು ಇಲ್ಲಿ ಉಳಿದುಕೊಳ್ಳಬಹುದು ಎಂದು ತಿಳಿಸಿದ್ದಾನೆ.

ಕ್ವಾರಂಟೈನ್​ಗೋಸ್ಕರ ಮನೆ ನೀಡಲು ಮುಂದಾದ ಯುವಕ

ಸದ್ಯ ಬೇರೆ ಮನೆಯಲ್ಲಿ ಕಿರಣ್​ ವಾಸವಾಗಿದ್ದು, ಹೀಗಾಗಿ ಖಾಲಿ ಇರುವ ಮನೆ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾನೆ. ಜತೆಗೆ ಅವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸುವುದಾಗಿ ಹೇಳಿಕೊಂಡಿದ್ದಾನೆ. ಈಗಾಗಲೇ ಮನೆಯಲ್ಲಿ ಬೆಡ್​ ಹಾಕುವ ಕೆಲಸ ಕೂಡ ಶುರುವಾಗಿದ್ದು, ಸ್ಯಾನಿಟೈಸರ್​ ಕೂಡ ಇಡಲಾಗಿದೆ.

ಅಲ್ಲಿನ ಸರ್ಕಾರ ಹಾಗೂ ಮುನ್ಸಿಪಾಲ್​​ ಕಾರ್ಪೋರೇಷನ್​ ಕೇವಲ ನಗರಗಳಲ್ಲಿ ಹೆಚ್ಚು ಗಮನ ಹರಿಸುತ್ತಿದ್ದು, ಹಳ್ಳಿಗಳಲ್ಲಿ ಹೆಚ್ಚಿನ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ 1,39,010 ಕೋವಿಡ್​ ಪ್ರಕರಣಗಳಿದ್ದು, ನಿನ್ನೆ ಒಂದೇ ದಿನ 3,214 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.