ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಬಿರುಕು ಮೂಡಿರುವ ಬೆನ್ನಲ್ಲೇ, ಶಿವಸೇನೆ ಕಾಂಗ್ರೆಸ್ ಪಕ್ಷವನ್ನು ಶಬ್ದ ಮಾಡುವ ಹಳೆಯ ಮಂಚಕ್ಕೆ ಹೋಲಿಸಿದೆ.
ಶಿವಸೇನೆಯ 'ಸಾಮ್ನಾ' ಎಂಬ ಪತ್ರಿಕೆ ತನ್ನ ಸಂಪಾದಕೀಯದಲ್ಲಿ "ಹಳೆಯ ಮಂಚ (ಕಾಂಗ್ರೆಸ್) ಏಕೆ ಶಬ್ದ ಮಾಡುತ್ತಿದೆ" ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಮುಖಂಡರಾದ ಬಾಲಾ ಸಾಹೇಬ್ ಥೋರತ್ ಮತ್ತು ಅಶೋಕ್ ಚವ್ಹಾಣ ಇತ್ತೀಚಿನ ದಿನಗಳಲ್ಲಿ ರಾಜ್ಯದ ತ್ರಿಪಕ್ಷೀಯ ಸಮ್ಮಿಶ್ರ ಸರ್ಕಾರದೊಳಗೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಶಿವಸೇನೆ 'ಸಾಮ್ನಾ' ಮೂಲಕ ಹೇಳಿದೆ.
"ಕಾಂಗ್ರೆಸ್ ರಾಜ್ಯದಲ್ಲಿ ಒಳ್ಳೆಯದನ್ನೇ ಮಾಡುತ್ತಿದೆ. ಆದರೆ, ಪ್ರತಿ ಬಾರಿ ಹಳೆಯ ಮಂಚ (ಕಾಂಗ್ರೆಸ್) ಶಬ್ದ ಮಾಡುತ್ತದೆ. ಇಬ್ಬರು ಮಂತ್ರಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲಿದ್ದಾರೆ ಎಂದು ನಿರ್ಧರಿಸಲಾಗಿದೆ. ಆದರೆ ಕಾಂಗ್ರೆಸ್ ಏನು ಹೇಳಲು ಬಯಸುತ್ತದೆ? ಹಳೆಯ ಮಂಚ (ಕಾಂಗ್ರೆಸ್) ಏಕೆ ಶಬ್ದ ಮಾಡುತ್ತಿದೆ? " ಎಂದು ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ. ಈ ಮೂಲಕ ಅದು ಕಾಂಗ್ರೆಸ್ ನಡೆಯನ್ನ ತೀವ್ರವಾಗಿ ಟೀಕಿಸಿದೆ.