ETV Bharat / bharat

ಭಾರತದ ಸೋಂಕಿನ ಪ್ರಮಾಣ ತುಂಬಾ ಕಡಿಮೆ.. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌

author img

By

Published : Apr 10, 2020, 10:49 AM IST

ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶದ 133 ಹಾಟ್‌ಸ್ಪಾಟ್ ಜಿಲ್ಲೆಗಳ ಮೇಲೆ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ. ಇಲ್ಲಿ ಕೊರೊನಾ ನಿರ್ಮೂಲನೆ ನಿರ್ಣಾಯಕ ಪಾತ್ರ ವಹಿಸಲಾಗುತ್ತಿದೆ ಎಂದು ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

Harsh Vardhan
ಹರ್ಷ ವರ್ಧನ್

ನವದೆಹಲಿ : 200ಕ್ಕೂ ಹೆಚ್ಚು ರಾಷ್ಟ್ರಗಳನ್ನು ವ್ಯಾಪಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ಸಾಮಾಜಿಕ ಅಂತರ ಮತ್ತು ಲಾಕ್‌ಡೌನ್ ಪ್ರಬಲ 'ಸಾಮಾಜಿಕ ಲಸಿಕೆ' ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಕೊರೊನಾ ಅಂಕಿ-ಅಂಶಗಳ ವಿಚಾರದಲ್ಲಿ ಭಾರತವು ಜಗತ್ತಿನ ಇತರ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ನಾನು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ. ಇತರ ದೇಶಗಳಲ್ಲಿನ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 3.8 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಂದರೆ ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಸೋಂಕಿನ ಪ್ರಕರಣ ವರದಿಯಾಗಿದೆ ಎಂದು ಬೆನೆಟ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೋವಿಡ್ -19 ಕುರಿತ ಅಂತಾರಾಷ್ಟ್ರೀಯ ಆನ್‌ಲೈನ್ ಸಮ್ಮೇಳನವನ್ನುದ್ದೇಶಿಸಿ ಸಚಿವರು ಮಾತನಾಡಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶದ 133 ಹಾಟ್‌ಸ್ಪಾಟ್ ಜಿಲ್ಲೆಗಳ ಮೇಲೆ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ. ಇಲ್ಲಿ ಕೊರೊನಾ ನಿರ್ಮೂಲನೆ ನಿರ್ಣಾಯಕ ಪಾತ್ರ ವಹಿಸಲಾಗುತ್ತಿದೆ ಎಂದು ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಪ್ರಸ್ತುತ ಪ್ರತಿ 4.5 ದಿನಗಳಿಗೊಮ್ಮೆ ದೇಶದಲ್ಲಿ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ದೇಶದ ಬಹುಪಾಲು ಜಿಲ್ಲೆಗಳಿಗೆ ಸೋಂಕಿನ ಪರಿಣಾಮ ಬೀರಿಲ್ಲ ಎಂದು ಸಚಿವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.