ವೃಷಭ : ತಾರೆಗಳು ನಿಮ್ಮ ಮನ ಒಲಿಸಲು ಸಜ್ಜಾಗಿವೆ. ಇಂದಿನ ಸಂಜೆಯನ್ನು ಕುಟುಂಬ ಹಾಗೂ ಪ್ರೀತಿಪಾತ್ರರೊಂದಿಗೆ ನಗು ಹಾಗೂ ಸಂತೋಷದಿಂದ ಕಳೆಯುವ ಸಾಧ್ಯತೆಯುಂಟು. ಬಹುಶಃ ಮುಂಗಡವಾಗಿ ಮೂವಿ ಟಿಕೆಟ್ ಗಳನ್ನು ಕೊಂಡು ನಿಮ್ಮ ಪ್ರಿಯತಮೆಗೆ ಆಶ್ಚರ್ಯ ಉಂಟು ಮಾಡುವುದು ಮಹತ್ತರ ಆಲೋಚನೆ ಹೊಂದಿರುವಿರಿ.
ಮಿಥುನ: ಅದ್ಭುತ ದೈಹಿಕ ಆರೋಗ್ಯ ಮತ್ತು ಪ್ರಶಾಂತ ಮನಸ್ಥಿತಿ ನಿಮ್ಮನ್ನು ಇಡೀ ದಿನ ಸಂತೃಪ್ತ ಮತ್ತು ಆನಂದವಾಗಿರಿಸುತ್ತದೆ. ಕೆಲಸದಲ್ಲೂ ನೀವು ಪುರಸ್ಕಾರ ಅಥವಾ ಕಛೇರಿಯಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಳದಿಂದ ಸಂತೋಷ ಅನುಭವಿಸುತ್ತೀರಿ. ಹಿಂದೆ ಪ್ರಾರಂಭಿಸಿದ ಯೋಜನೆಗಳು ಫಲ ನೀಡಲು ಪ್ರಾರಂಭಿಸುತ್ತವೆ. ನೀವು ಲಾಭ ಪಡೆಯುತ್ತೀರಿ.
ಕಟಕ: ವಿದೇಶದಿಂದ ಸಂತೋಷದ ಅಥವಾ ಶುಭಸುದ್ದಿ.ಉತ್ಸಾಹದ ಪ್ರವಾಸ ಮತ್ತು ಒಳ್ಳೆಯ ಅದೃಷ್ಟ ನಿಮ್ಮನ್ನು ಅತ್ಯಂತ ಸಂತೃಪ್ತಿಕರ ಹಾಗೂ ಔನ್ನತ್ಯದ ಭಾವನೆಯಲ್ಲಿರಿಸುತ್ತದೆ. ಉದಾರತೆಯಿಂದ ಪುರಸ್ಕಾರಗಳನ್ನು ಸ್ವೀಕರಿಸುತ್ತೀರಿ.
ಸಿಂಹ: ನಿಮ್ಮ ಆರೋಗ್ಯದ ಸಮಸ್ಯೆಗಳಿಂದ ಅಥವಾ ನಿಗದಿತ ವೈದ್ಯಕೀಯ ಚಿಕಿತ್ಸೆಯಿಂದ ಖರ್ಚು ಹೆಚ್ಚಾಗಬಹುದು. ಅದು ಏನೇ ಆಗಿರಲಿ, ಅದರೊಂದಿಗೆ ಮುನ್ನಡೆಯಿರಿ. ಏಕೆಂದರೆ ಆರೋಗ್ಯಕ್ಕೆ ಪ್ರಥಮ ಆದ್ಯತೆ. ಅಗತ್ಯವಿದ್ದಲ್ಲಿ ಕೆಲಸದಿಂದ ಬಿಡುವು ತೆಗೆದುಕೊಳ್ಳಿ. ಮಾನಸಿಕವಾಗಿ ಋಣಾತ್ಮಕತೆ ನಿಮ್ಮನ್ನು ಕಾಡುತ್ತದೆ.
ಕನ್ಯಾ: ಇಂದು ನಿಮಗೆ ಒಂದು ಅದ್ಭುತ ದಿನ ಕಾದಿದೆ. ನಿನ್ನೆಯ ತಾರೆಗಳು ನಿಮ್ಮ ನಕ್ಷೆಯಲ್ಲಿ ಇನ್ನೂ ಬಲವಾಗಿವೆ. ಅಲ್ಲದೆ ನಿಮ್ಮ ಜೀವನದ ಪ್ರತಿ ಕ್ಷೇತ್ರದಲ್ಲಿನ ಹಾಗೂ ವೃತ್ತಿಯಲ್ಲಿನ ಪುರಸ್ಕಾರಗಳು ನಿಮಗಾಗಿ ಕಾದಿವೆ. ನಿಮ್ಮ ಆಕರ್ಷಕ ನಗುವನ್ನು ಹರಿಸಿ ಮತ್ತು ತಾರೆಗಳು ನಿಮಗೆ ನೀಡಿರುವ ಉದಾರತೆಯನ್ನು ಸಂತೋಷದಿಂದ ಒಪ್ಪಿಕೊಳ್ಳಿ.
ತುಲಾ: ಒಳ್ಳೆಯ ಆರೋಗ್ಯ, ಒಳ್ಳೆಯ ಸಮಯ ಮತ್ತು ವ್ಯಾಪಾರದಲ್ಲಿ ಮತ್ತಷ್ಟು ಹಣಕಾಸು ಗಳಿಕೆಗಳು ನಿಮಗೆ ಸಾಧ್ಯವಿದೆ. ನೀವು ಕುಟುಂಬದೊಂದಿಗೆ ಆನಂದದ ಸಮಯ ಕಳೆಯುತ್ತೀರಿ. ಮತ್ತು ಪಾಲುದಾರರು ಹಾಗೂ ಸಹೋದ್ಯೋಗಿಗಳೊಂದಿಗೆ ಅದ್ಭುತ ಸಮಯ ಹಂಚಿಕೊಳ್ಳುತ್ತೀರಿ. ಕೆಲಸ ಹೆಚ್ಚು ಹೋರಾಟವಿಲ್ಲದೆ ತಕ್ಷಣ ಫಲಿತಾಂಶ ನೀಡುತ್ತದೆ.
ವೃಶ್ಚಿಕ: ನೀವು ಇಂದು ಯಾವುದೇ ಬಗೆಯ ಸಂಘರ್ಷಗಳನ್ನು ತಪ್ಪಿಸುವುದು ಸೂಕ್ತ. ಅದು ಕೆಲಸ ಅಥವಾ ಕುಟುಂಬ ಸಂಬಂಧಿತ ವಿಷಯಗಳಾಗಿರಬಹುದು. ಅಧ್ಯಯನಕ್ಕೆ ವಿದೇಶಕ್ಕೆ ತೆರಳುವ ಮಗುವಿನ ಬಗ್ಗೆ ನೀವು ಆತಂಕಗೊಂಡಿದ್ದೀರಿ. ಉನ್ನತ ಶಿಕ್ಷಣಕ್ಕೆ ಹೋಗುವ ಜನರಿಗೆ ಇದು ಅತ್ಯುತ್ತಮ ದಿನವಾಗಿದೆ.
ಧನು: ಪ್ರತಿಯೊಂದು ಚೆನ್ನಾಗಿದೆ ಎನ್ನುವಂತಹ ದಿನವಾದರೂ ಯಾವುದೋ ಒಂದು ತಪ್ಪಿಹೋಗಿದೆ. ನೀವು ಕೊಂಚ ಅನಾರೋಗ್ಯದ ಭಾವನೆ ಹೊಂದಿದ್ದರೂ ಇದು ಕಡೆಗಣಿಸಿದಂತಾಗುತ್ತದೆ. ಆದರೂ ನಿಮ್ಮ ಕೈಯಲ್ಲಿರುವ ಕೆಲಸದಲ್ಲಿ ಮುಂದುವರೆಯಿರಿ. ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿಗಳ ಕಾನೂನುಬದ್ಧ ದಾಖಲೆಗಳ ಬಗ್ಗೆ ಎಚ್ಚರದಿಂದಿರಿ.
ಮಕರ: ಈ ಸುಂದರ ಸಮಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ನೀವು ಪ್ರವಾಸೀ ತಾಣಕ್ಕೆ ಭೇಟಿ ನೀಡುತ್ತೀರಿ. ಅಥವಾ ಮನೆಯಲ್ಲಿ ನೀವು ಹಾಗೂ ನಿಮ್ಮ ಪ್ರಿಯತಮೆಯೊಂದಿಗೆ ಸ್ನೇಹಮಯ ದಿನವನ್ನು ಯೋಜಿಸುತ್ತೀರಿ. ಆಸ್ತಿಗೆ ಸಂಬಂಧಿಸಿದ ಯಾವುದೇ ವ್ಯವಹಾರಗಳು ಅದೃಷ್ಟದ ಪರಿಣಾಮಗಳನ್ನು ನೀಡುತ್ತವೆ. ಯಾವುದೇ ಸಮಯದಲ್ಲಿ ನೀವು ಕಛೇರಿಯ ಸ್ಥಳ ಕೊಳ್ಳುವ ಸಾಧ್ಯತೆ ಇದೆ.
ಕುಂಭ: ಆಯ್ಕೆಗಳಿರುವುದು ಒಳ್ಳೆಯದೇ? ಒಳನುಗ್ಗುವ ತಂತ್ರಜ್ಞಾನ ಕಡಿಮೆ ಇದ್ದು ಕೊನೆಯಿರದ ಆಯ್ಕೆಗಳಿಗೆ ತಡೆ ಇದ್ದಿದ್ದರೆ ಜೀವನ ಸರಳವಾಗಿರುತ್ತಿತ್ತು ಅಲ್ಲವೇ? ನೀವು ಮಳಿಗೆಯಲ್ಲಿ ಸಹಾಯಕ ಮತ್ತೊಂದು ʻವೆರೈಟಿʼ ಬಟ್ಟೆಯನ್ನು ತೋರಿಸಿದಾಗ ಕಿರುಚಾಟವನ್ನು ನಿಯಂತ್ರಿಸಿದರೆ ಬಹಳ ಒಳ್ಳೆಯದು. ಅಸ್ಪಷ್ಟ ನಿಯಮಗಳು! ಉರಿಯುವ ಕೋಪವನ್ನು ನಿಯಂತ್ರಿಸಿ.
ಮೀನ : ಆರೋಗ್ಯ, ಮಾನಸಿಕ ಶಾಂತಿಯಿಂದ ಮಹತ್ತರ ದಿನವಾಗಿದೆ ಹಾಗೂ ಸ್ಪಷ್ಟತೆ ಎದ್ದು ಕಾಣುತ್ತಿದೆ. ಇಡೀ ದಿನ ಸಾಕಷ್ಟು ಆರೋಗ್ಯಕರ ಪ್ರಭಾವಗಳು ನಿಮಗೆ ಹೊಸದಾಗಿ ಪಡೆದ ದೈಹಿಕ ದೃಢತೆ ಕಾಪಾಡಿಕೊಳ್ಳಲು ನೆರವಾಗುತ್ತವೆ. ನೀವು ನಿಮ್ಮ ಅತ್ಯುತ್ತಮವಾದ ಪ್ರಯತ್ನ ನಡೆಸುತ್ತೀರಿ ಮತ್ತು ಕೆಲಸ, ಮನೆ ಮತ್ತು ವಿರಾಮದಲ್ಲಿ ಉತ್ತೇಜಕ ವಾತಾವರಣದಿಂದ ನಿಮ್ಮ ಎಲ್ಲ ಪ್ರಯತ್ನಗಳಲ್ಲೂ ಜಯ ಸಾಧಿಸುತ್ತೀರಿ.