ವೃಷಭ : ಇಂದು ಸಂಪೂರ್ಣ ಒಳ್ಳೆಯ ಚಲನೆಗಳಿರುವ ದಿನವಾಗಿದೆ, ಮತ್ತು ಈ ದಿನವನ್ನು ದೇವರ ಆಶೀರ್ವಾದಗಳು ನಿಮಗೆ ಮಾರ್ಗದರ್ಶನ ನೀಡಿ ಇಡೀ ದಿನ ಮುನ್ನಡೆಸುತ್ತವೆ. ನಿಮ್ಮ ಆತಂಕಗಳ ಮೂಟೆಯನ್ನು ಕೆಳಗಿಳಿಸಿ ಹಾಗೂ ನೆಮ್ಮದಿಯ ಉಸಿರಾಟ ನಡೆಸಿ. ಬಹಳ ಉತ್ಸಾಹದ ದಿನ, ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕೆಲಸದಲ್ಲಿಯೂ ನಿಮ್ಮ ಮೇಲಾಧಿಕಾರಿಗಳು ಸಂತೋಷಗೊಳ್ಳುವುದರಿಂದ ಎಲ್ಲರ ಗಮನ ನಿಮ್ಮ ಮೇಲಿರುತ್ತದೆ.
ಮಿಥುನ: ಇದು ನಿಮಗೆ ಮಿಶ್ರ ದಿನವಾಗಿದೆ. ಏಕೆಂದರೆ ಇಂದು ಶುಭಸುದ್ದಿ ಹಾಗೂ ಆತಂಕಗಳು ಎರಡೂ ನಿಮಗಾಗಿ ಕಾದಿವೆ. ಉದ್ಯೋಗದಲ್ಲಿ ಅಸಂತೋಷದ ಮೇಲಾಧಿಕಾರಿಗಳು ಮತ್ತು ಮನೆಯಲ್ಲಿ ಮಕ್ಕಳು ನಿಮ್ಮ ಆತಂಕಕ್ಕೆ ಪ್ರಮುಖ ಕಾರಣವಾಗುತ್ತಾರೆ. ನಿಮ್ಮ ಆರೋಗ್ಯ ಅತ್ಯುತ್ತಮವಾಗಿಲ್ಲದೇ ಇರಬಹುದು ಮತ್ತು ಹಣ ಖರ್ಚಾಗುತ್ತದೆ. ಆದಾಗ್ಯೂ, ಸಂಜೆಯ ವೇಳೆಗೆ ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವುದರಿಂದ ಎಲ್ಲವೂ ಉತ್ತಮಗೊಳ್ಳುತ್ತವೆ.
ಕಟಕ: ದಿನದ ಮೊದಲರ್ಧ ಸಂಪೂರ್ಣ ವಿರೋಧಗಳಿಂದ ತುಂಬಿದೆ. ದೇವರ ಹೆಸರು ಹೇಳುವುದು ಮತ್ತು ಧ್ಯಾನ ಮಾತ್ರ ನಿಮ್ಮ ಋಣಾತ್ಮಕ ಆಲೋಚನೆಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ನೀವು ಇಂದು ಅನಿಶ್ಚಿತತೆಯ ಮನಸ್ಥಿತಿಯಲ್ಲಿರುತ್ತೀರಿ. ಎಚ್ಚರಿಕೆ ವಹಿಸಿ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ.
ಸಿಂಹ: ನೀವು ವೈವಿಧ್ಯಮಯ ಮನರಂಜನೆಯ ಮಾರ್ಗಗಳನ್ನು ಎದುರು ನೋಡುತ್ತೀರಿ ಮತ್ತು ನಿಮ್ಮ ಮಿತ್ರರು ನಿಮ್ಮೊಂದಿಗೆ ಚಲನಚಿತ್ರ ಅಥವಾ ಹೊರಗಡೆ ಸುತ್ತಾಟಕ್ಕೆ ಸೇರಿಕೊಳ್ಳಲು ಸಂತೋಷಿಸುತ್ತಾರೆ. ನೀವು ಅದನ್ನು ನಿರ್ಲಕ್ಷಿಸಿ ನಿಮ್ಮ ಎಲ್ಲ ಯೋಜನೆಗಳನ್ನು ರದ್ದುಪಡಿಸುತ್ತೀರಿ ಮತ್ತು ಬ್ಯಾಕ್‌ಪ್ಯಾಕಿಂಗ್ ಟ್ರಿಪ್ ಹೊರಡಲು ಸಜ್ಜಾಗುತ್ತೀರಿ. ಆದಾಗ್ಯೂ ಸಂಜೆಯ ವೇಳೆಗೆ ಸತತವಾಗಿ ನುಗ್ಗುವ ಆಲೋಚನೆಗಳು ಮತ್ತು ಕ್ಷೋಭೆ ನಿಮ್ಮನ್ನು ಸುಸ್ತು ಮಾಡುವ ಸಾಧ್ಯತೆ ಇದೆ.
ಕನ್ಯಾ: ಈ ಅದ್ಭುತ ದಿನವನ್ನು ಸಾಧ್ಯವಿದ್ದಷ್ಟೂ ಬಳಸಿಕೊಳ್ಳಿ. ನಿಮ್ಮ ವ್ಯಾಪಾರ ಪಾಲುದಾರರಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಅಲ್ಲದೆ ನೀವು ನಿಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದರಿಂದ ಅತ್ಯಂತ ಬೀಗುತ್ತೀರಿ. ಇದು ಸಂಜೆ ಮಿತ್ರರು ಹಾಗೂ ಕುಟುಂಬದೊಂದಿಗೆ ಸಂಭ್ರಮಕ್ಕೂ ಆಹ್ವಾನವಾಗಬಹುದು. ಸಂಗೀತ ಜೋರು ಮಾಡಿ, ಗೆಳೆಯರೊಂದಿಗೆ ಆನಂದಿಸಿ; ನಿಮ್ಮ ಆನಂದ ಹಂಚಿಕೊಳ್ಳಲು ಅತ್ಯುತ್ತಮ ವಿಧಾನ.
ತುಲಾ: ಇದು ನಿಮ್ಮ ವಿಶ್ಲೇಷಣೆಯ ಹಾಗೂ ಸೃಜನಶೀಲ ಸಾಮರ್ಥ್ಯಗಳನ್ನು ಸಕ್ರಿಯ ಚರ್ಚೆಗಳು ಮತ್ತು ಮಾತುಕತೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಪರೀಕ್ಷಿಸುವ ದಿನವಾಗಿದೆ. ನೀವು ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದರೆ ನೀವು ಅದನ್ನು ಮಾಡುತ್ತೀರಿ. ಅಂತಹ ಚಟುವಟಿಕೆಗಳಿಗೆ ಇದು ಅತ್ಯಂತ ಸೂಕ್ತ ದಿನವಾಗಿದೆ. ನಿಮ್ಮನ್ನು ಅಂತಹ ಚಟುವಟಿಕೆಗಳಲ್ಲಿ ತೊಡಗಿಸುವುದು ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮ ಕೆಲಸದಲ್ಲೂ ನೆರವಾಗುತ್ತದೆ.
ವೃಶ್ಚಿಕ: ನೀವು ಹಠಮಾರಿಯಾಗಿದ್ದರೆ ತೀವ್ರ ಸೋಲು ಅನುಭವಿಸುತ್ತೀರಿ. ನಿಮ್ಮ ಭಾವನಾತ್ಮಕತೆಯನ್ನು ಸರಿಪಡಿಸಿಕೊಳ್ಳಿ, ಇದು ನಿಮ್ಮನ್ನು ಆತಂಕ ಹಾಗೂ ಮಾನಸಿಕ ಕ್ಷೋಭೆಯನ್ನು ಉಂಟು ಮಾಡುತ್ತದೆ. ಮಧ್ಯಾಹ್ನದ ನಂತರ ನಿಮ್ಮ ಆಲೋಚನೆಗಳು ಕಂಪಿಸುವುದರಿಂದ ನೀವು ಹೊಸ ಜವಾಬ್ದಾರಿಗಳು ಮತ್ತು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದನ್ನು ತಪ್ಪಿಸುವುದು ಉತ್ತಮ. ಬದಲಿಗೆ, ನೀವು ಕೊಂಚ ಸಮಾಧಾನ ನೀಡುವ ಕೆಲಸವನ್ನು ಕೈಗೊಳ್ಳಿ.
ಧನು :ಈ ದಿನ ಚೆನ್ನಾಗಿ ಪ್ರಾರಂಭವಾಗುತ್ತದೆ ಆದರೆ ಅಂತ್ಯದಲ್ಲಿ ಕೊಂಚ ಶಕ್ತಿಗುಂದಿಸುತ್ತದೆ. ದಿನದ ಮೊದಲರ್ಧ ಭಾಗದಲ್ಲಿ ನೀವು ನಿಮ್ಮ ಮನಸ್ಸು, ದೇಹ ಮತ್ತು ಆತ್ಮದ ಪೂರ್ಣ ನಿಯಂತ್ರಣದಲ್ಲಿರುತ್ತೀರಿ. ಅಲ್ಲದೆ ಇದು ನಿಮಗೆ ನಿಮ್ಮ ಕುಟುಂಬಕ್ಕೆ ಆತಂಕ ತಂದಿರುವ ಸಮಸ್ಯೆಗಳನ್ನು ಹೆಚ್ಚಿಸಬಹುದು; ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.
ಮಕರ: ಇಂದು ಮಾತು ಬೆಳ್ಳಿ ಮೌನ ಬಂಗಾರ. ಅಲ್ಲದೆ ನೀವು ಈ ಆಲೋಚನೆಯನ್ನು ನಿಮ್ಮ ಜೀವನಕ್ಕೆ ಅನ್ವಯಿಸಲು ಯಶಸ್ವಿಯಾಗಬೇಕು. ಆಗ ನೀವು ಕುಟುಂಬ ಸದಸ್ಯರು ಹಾಗೂ ಪ್ರೀತಿಪಾತ್ರರೊಂದಿಗೆ ಎಲ್ಲ ಸಂಭವನೀಯ ಘರ್ಷಣೆಗಳನ್ನು ನಿವಾರಿಸಿಕೊಳ್ಳುತ್ತೀರಿ. ಸಂಜೆಯ ವೇಳೆಗೆ, ನಿಮ್ಮ ಮನಸ್ಸು ಎಲ್ಲ ಆತಂಕ ಮತ್ತು ಚಿಂತೆಗಳಿಂದ ಮುಕ್ತವಾಗಿ ಹಗುರವಾಗುವುದರಿಂದ ವಿಷಯಗಳು ಉತ್ತಮಗೊಳ್ಳುತ್ತವೆ.
ಕುಂಭ : ಒಂದು ಸಾಧಾರಣ ದಿನ ನಿಮಗಾಗಿ ಕಾದಿದೆ. ನಿಮ್ಮ ಆಧ್ಯಾತ್ಮಿಕತೆಯತ್ತ ವಾಲುವ ಮನಸ್ಸು ಈ ದಿನವನ್ನು ಅತ್ಯಂತ ಸಂತೃಪ್ತಿಕರ ಮತ್ತು ಸಂತೋಷದಾಯಕ ಆಗಿಸುತ್ತದೆ ಅಲ್ಲದೆ ನೀವು ಋಣಾತ್ಮಕತೆಯನ್ನು ದೂರ ತಳ್ಳಲು ಯಶಸ್ವಿಯಾಗುತ್ತೀರಿ, ಅದು ನಿಮ್ಮ ಉತ್ತಮವಾದುದನ್ನು ಪಡೆದು ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಗಳನ್ನು ಕುಂದಿಸಿ ನಿಮ್ಮ ಸ್ಫೂರ್ತಿಗೆ ಕಂಟಕ ತರುತ್ತದೆ.
ಮೀನ : ನಿಮ್ಮ ಶಕ್ತಿಗಳನ್ನು ಒಗ್ಗೂಡಿಸಿ ಮತ್ತು ಅವುಗಳನ್ನು ಸಕಾರಾತ್ಮಕ ದಿಕ್ಕಿನತ್ತ ಕೊಂಡೊಯ್ಯುವ ಮೂಲಕ ದಿನದ ಒಳ್ಳೆಯದನ್ನು ನಿಮ್ಮದಾಗಿಸಿಕೊಳ್ಳಿ.ಅಲ್ಲದೆ ನೀವು ಧ್ಯಾನ ಅಥವಾ ಯೋಗಾಭ್ಯಾಸದಿಂದ ಸಾಧಿಸಬಹುದು. ಕುಟುಂಬ ಸದಸ್ಯರೊಂದಿಗೆ ಮತ್ತು ಪ್ರೀತಿಪಾತ್ರರೊಂದಿಗೆ ವಾಗ್ವಾದದ ಸಾಧ್ಯತೆ ಇದೆ. ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿರಿಸಿ ಮತ್ತು ಆಕ್ರಮಣಶೀಲತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಅಂತಹ ಸಾಧ್ಯತೆಗಳನ್ನು ನಿಯಂತ್ರಿಸಿ.