ಮೇಷ: ನೀವು ಮೈದಾಸನಂತೆ ಭಾವಿಸುತ್ತಿದ್ದೀರಿ. ಆದರೆ ನೆನಪಿನಲ್ಲಿಟ್ಟುಕೊಳ್ಳಿ, ಹೊಳೆಯುವುದೆಲ್ಲ ಚಿನ್ನವಲ್ಲ. ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸಲು ಅವರೊಂದಿಗೆ ಕೊಂಚ ಕಾಲ ಕಳೆಯಬೇಕು. ಅಲ್ಲದೆ ಇಂದು ನಿಮ್ಮ ಯಶಸ್ಸಿಗೆ ಕೊಡುಗೆ ನೀಡಿದವರನ್ನು ಗುರುತಿಸಿದರೆ ನೆರವಾಗುತ್ತದೆ. ನಿಮಗೆ ಮಕ್ಕಳಿದ್ದರೆ ಅವರಿಗೆ ಅವರ ಸಾಂಟಾ ಕ್ಲಾಸ್ ಆಗುವ ಸಮಯ!
ವೃಷಭ: ನಿರ್ವಾಹಕರು ಮತ್ತು ಆಡಳಿತಗಾರರಿಗೆ ಅತ್ಯಂತ ಲಾಭದಾಯಕ ದಿನವಾಗಿದೆ. ನೀವು ನಿಮ್ಮ ಕಿರಿಯ ಸಹೋದ್ಯೋಗಿಗಳಿಂದ ಹೆಚ್ಚೇನೂ ನಿರೀಕ್ಷೆ ಮಾಡಬೇಡಿ. ಹಾಗೆ ಮಾಡುವುದು ಮಹತ್ತರ ನಿರಾಸೆ ಮತ್ತು ಆತಂಕ ತರುತ್ತದೆ. ದಿನದ ನಂತರದಲ್ಲಿ ನೀವು ವಿದೇಶದಿಂದ ಕೆಲ ಉತ್ಸಾಹದ ಮತ್ತು ಉತ್ತೇಜನದ ಸುದ್ದಿ ಕೇಳಬಹುದು.
ಮಿಥುನ: ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಂದ ಬಿಡುವು ಪಡೆಯಬೇಕೆಂದು ಬಯಸುತ್ತೀರಿ. ನೀವು ಒಂದೇ ಸಲಕ್ಕೆ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೀರಿ. ಇದು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಆದರೆ ಇದರಿಂದ ದಿನದ ನಂತರದಲ್ಲಿ ನಿಮ್ಮ ವೈಯಕ್ತಿಕ ವಿಷಯಗಳಿಗೆ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಯ ಗುರಿಸಾಧನೆಗಳಲ್ಲಿ ನೀವು ನಿಮ್ಮ ಕುಟುಂಬವನ್ನು ನಿರ್ಲಕ್ಷಿಸುವುದಿಲ್ಲ ಎಂದು ದೃಢಪಡಿಸಿಕೊಳ್ಳಿ.
ಕರ್ಕಾಟಕ: ಹೆಸರು ಮತ್ತು ಖ್ಯಾತಿ ಪಡೆಯುವ ನಿಮ್ಮ ಕನಸು ನನಸಾಗಲಿದೆ. ನೀವು ವ್ಯವಸ್ಥಿತ ಯೋಜನೆಯ ಮೂಲಕ ನಿಮ್ಮ ಕಾರ್ಯವನ್ನು ಪೂರ್ಣಗಳಿಸುತ್ತೀರಿ. ಸರ್ವಶಕ್ತನು ನಿಮಗೆ ಪ್ರತಿ ಪ್ರಯತ್ನದಲ್ಲೂ ಯಶಸ್ಸನ್ನು ಕರುಣಿಸಿದ್ದಾನೆ.
ಸಿಂಹ: ನೀವು ಅತ್ಯಂತ ಆನಂದದ ಮನಸ್ಥಿತಿಯಲ್ಲಿದ್ದೀರಿ. ನೀವು ಇಂದು ಶಕ್ತಿ ಮತ್ತು ಉತ್ಸಾಹದಲ್ಲಿ ಎಲ್ಲ ಕೆಲಸಗಳನ್ನೂ ಕ್ಷಣದಲ್ಲಿ ಪೂರ್ಣಗೊಳಿಸುತ್ತೀರಿ. ಅಲ್ಲದೇ ಬಾಕಿ ಇರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಬೆಳಿಗ್ಗೆ ನೀವು ಎಲ್ಲ ಕೆಲಸಗಳನ್ನೂ ಬೇಗನೆ ಮುಗಿಸುತ್ತೀರಿ, ಆದರೆ ದಿನದ ನಂತರದಲ್ಲಿ ನೀವು ಹೆಚ್ಚು ವಿವೇಚನೆಯ ವಿಧಾನ ಅಳವಡಿಸಿಕೊಳ್ಳುತ್ತೀರಿ.
ಕನ್ಯಾ: ಮಹಿಳೆಯರು ಅಡುಗೆ ಮನೆ ಹಾಗೂ ಭೋಜನ ಸಮಯದಲ್ಲಿ ಕೂಡಾ ಆನಂದ ಕಾಣುತ್ತಾರೆ. ಸಂಜೆಯಲ್ಲಿ ನಿಮ್ಮ ಆತ್ಮೀಯ ಮಿತ್ರರು ಹಾಗೂ ಬಂಧುಗಳಿಗೆ ಭೋಜನಕೂಟ ಮತ್ತು ಪಾನಗೋಷ್ಠಿಯನ್ನೂ ಆಯೋಜಿಸಬಹುದು. ನೀವು ಪ್ರೀತಿಸಿದವರೊಂದಿಗೆ ಅತ್ಯಂತ ಪ್ರಣಯದ ಭಾವನೆ ಹೊಂದುತ್ತೀರಿ. ಆದರೆ ಆತ/ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ.
ತುಲಾ: ನೀವು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಳುಗಿ ಹೋಗುತ್ತೀರಿ. ಹಾಗಾಗಿ ನಿಮ್ಮ ಕುಟುಂಬ ಸದಸ್ಯರಿಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಜಾಹೀರಾತು ಮತ್ತು ಮಾರ್ಕೆಟಿಂಗ್ ವೃತ್ತಿಪರರಿಗೆ ಇದು ಒಳ್ಳೆಯ ಸಮಯ. ಈ ದಿನ ಒಳ್ಳೆಯ ದಿನವಾಗಿದ್ದು ಕನಿಷ್ಠ ಪ್ರಯತ್ನಗಳಿಂದ ಗರಿಷ್ಠ ಮಟ್ಟ ಸಾಧಿಸುತ್ತೀರಿ.
ವೃಶ್ಚಿಕ: ನೀವು ನೋಡುವುದನ್ನು ಮಾತ್ರ ನಂಬಿರಿ. ಗೊಂದಲಗಳು ಮತ್ತು ತಿಕ್ಕಾಟಗಳನ್ನು ತಪ್ಪಿಸಿ. ನಿಮ್ಮ ಕಣ್ಣುಗಳು ಹಾಗೂ ಕಿವಿಗಳನ್ನು ತೆರೆದಿಡಿ, ಇದರಿಂದ ನೀವು ನಿಮ್ಮ ಸುತ್ತಲೂ ನಡೆಯುವ ಪ್ರಮುಖ ಆಗುಹೋಗುಗಳು ತಪ್ಪಿಸಿಕೊಳ್ಳುವುದಿಲ್ಲ.
ಧನು: ಇದು ವ್ಯಾಪಾರಿಗಳಿಗೆ ಅತ್ಯಂತ ಲಾಭದಾಯಕ ದಿನ. ನೀವು ಕಾಯುತ್ತಿದ್ದ ಸಾಲ ಈಗ ಬಿಡುಗಡೆಯಾಗುವುದರಿಂದ ನಿಮ್ಮ ಕನಸು ನನಸಾಗಲು ಇದು ಸಕಾಲ. ಈ ದಿನ ನೀವು ನಿಮ್ಮ ಪ್ರೀತಿಪಾತ್ರರನ್ನು ವಿಶೇಷವಾಗಿ ಭಾವಿಸುವಂತೆ ಮಾಡುತ್ತೀರಿ. ಹಾಗೂ ಅವರೊಂದಿಗೆ ಒಟ್ಟಿಗೆ ಕಾಲ ಕಳೆಯುವ ಕ್ಷಣಗಳು ಎಂದಿಗೂ ಉಳಿಯುತ್ತದೆ.
ಮಕರ: ನೀವು ಫೈಲುಗಳ ರಾಶಿಯಲ್ಲಿ ಕಳೆದು ಹೋಗುತ್ತೀರಿ. ಪ್ರಯತ್ನಿಸಿದ ಹಾಗೂ ಪರೀಕ್ಷಿಸಿದ ಸೂತ್ರ-ಧ್ಯಾನ ನಿಮಗೆ ನಿಮ್ಮ ಮನಸ್ಸಿನಿಂದ ಒತ್ತಡ ಹೊರಹಾಕಲು ಹಾಗೂ ದಾರಿ ಕಂಡುಕೊಳ್ಳಲು ನೆರವಾಗುತ್ತದೆ. ಪ್ರತಿಯೊಂದು ಕೂಡ ಮಂದ ಹಾಗೂ ಶುಷ್ಕವಾಗಿರುತ್ತದೆ. ಕಾರು ಅಥವಾ ಮನೆ ಕೊಳ್ಳಲು ಇದು ಅನುಕೂಲಕರ ದಿನವಾಗಿದೆ. ನೀವು ಹೊಸ ಮನೆಗೆ ಬದಲಾಗುವ ಸಾಧ್ಯತೆಯೂ ಇದೆ.
ಕುಂಭ: ನೀವು ಇಂದು ಅತ್ಯಂತ ಅನಿರೀಕ್ಷಿತವಾಗಿರುತ್ತೀರಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಚಲನ-ವಲನಗಳನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ ಮತ್ತು ಸ್ಪರ್ಧೆ ತೀವ್ರವಾಗಿರುವಾಗ, ಅಂತಹ ಅನಿರೀಕ್ಷಿತತೆ ನಿಮಗೆ ಮೇಲುಗೈಯಾಗಿಸುತ್ತದೆ. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿ ಪುರಸ್ಕರಿಸಲಾಗುತ್ತದೆ. ನೀವು ಏನು ಮಾಡಬೇಕೋ ಅದನ್ನು ಮಾಡಿದ್ದೀರಿ, ಈಗ ಕೊಂಚ ಕಾಲ ವಿಶ್ರಾಂತಿ ಪಡೆದುಕೊಳ್ಳಿ ಮತ್ತು ಹೊಸದಿನಕ್ಕೆ ಸಿದ್ಧತೆ ಮಾಡಿಕೊಳ್ಳಿ.
ಮೀನ: ದಿನದ ಮೊದಲರ್ಧ ನೀವು ನಿಮ್ಮ ಸಾಮಾಜಿಕ ಕರ್ತವ್ಯಗಳನ್ನು ಪೂರೈಸಲು ಮತ್ತು ನಿಮ್ಮ ದೈನಂದಿನ ಕಾರ್ಯಕ್ರಮಗಳನ್ನು ಪೂರೈಸುವ ಒತ್ತಡದಲ್ಲಿರುತ್ತೀರಿ. ನೀವು ಮಧ್ಯಾಹ್ನ ಯಾರಿಗೋ ನೆರವಾಗಲು ಆಹ್ವಾನ ಪಡೆಯಬಹುದು. ನೀವು ನಿಮ್ಮ ಮನ ಒಲಿಸುವ ವರ್ತನೆಯಿಂದ ಪ್ರತಿಯೊಬ್ಬರ ಹೃದಯವನ್ನೂ ಗೆಲ್ಲುತ್ತೀರಿ. ಇಂದು ಯಾವುದೇ ಆಶ್ಚರ್ಯಗಳಿಲ್ಲದ ಗಮನಾರ್ಹವಲ್ಲದ ದಿನವಾಗಿರುತ್ತದೆ.