ತೇಜ್ಪುರ (ಅಸ್ಸಾಂ): ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಗೃಹ ಕಚೇರಿ ತೆರವಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಸಾಕಷ್ಟು ನಟ, ನಟಿಯರು ಕಂಗನಾ ಪರವಾಗಿ ದನಿಯೆತ್ತಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ನಟಿ ನಿಶಿತಾ ಗೋಸ್ವಾಮಿ, ಎಲ್ಲಾ ಮಹಿಳೆಯರೂ ಕಂಗನಾ ಅವರ ರೀತಿ ಇರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಸ್ಸಾಂನ ತೇಜಪುರದಲ್ಲಿ ಮಾತನಾಡಿದ ಅವರು, ಕಂಗನಾಗೆ ಹೆಚ್ಚು ಭದ್ರತೆ ಒದಗಿಸಬೇಕು. ಅವರ ಧೈರ್ಯಕ್ಕೆ ಸಲಾಂ. ಎಲ್ಲಾ ಮಹಿಳೆಯರೂ ಆಕೆಯಂತೆ ಇರಬೇಕು ಎಂದರು.
ಇದರ ಜೊತೆಗೆ ಡ್ರಗ್ಸ್ ಮಾಫಿಯಾ ಕುರಿತಾಗಿ ಮಾತನಾಡಿದ ಅವರು, ಸರ್ಕಾರ ಡ್ರಗ್ಸ್ ಮಾಫಿಯಾವನ್ನು ತಡೆಯಬೇಕು. ಡ್ರಗ್ಸ್ ಸೇವನೆಯನ್ನು ನಿಯಂತ್ರಿಸಬೇಕೆಂದು ಮನವಿ ಮಾಡಿದರು.