ಗುವಾಹಟಿ(ಅಸ್ಸೋಂ) : ಇಲ್ಲಿನ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬಕ್ಕೆ ತಿಂಗಳಿಗೆ ಸಾವಿರ ರೂ. ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆರೋಗ್ಯ ಸಚಿವ ಹೇಮನಾಥ್ ಬಿಸ್ವಾ ಮಾಹಿತಿ ನೀಡಿದ್ದಾರೆ.
ಡೈರೆಕ್ಟ್ ಹಣ ವರ್ಗಾವಣೆ ಯೋಜನೆಯಲ್ಲಿ ಈ ಹಣ ಎಲ್ಲ ಕುಟುಂಬಗಳ ಖಾತೆಗೆ ಜಮಾವಣೆಗೊಳ್ಳಲಿದ್ದು, ದೈನದಿನ ವಸ್ತು ಅಥವಾ ಔಷಧಿ ಖರೀದಿ ಮಾಡಲು ಅದನ್ನ ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಕುಟುಂಬದ ಮಹಿಳೆಯರು ಬ್ಯಾಂಕ್ ಅಕೌಂಟ್ ಹೊಂದಿರುವುದು ಕಡ್ಡಾಯವಾಗಿದೆ. ಅವರ ಹೆಸರಿನಲ್ಲಿ ಮಾತ್ರ ಹಣ ಜಮಾವಣೆಗೊಳ್ಳಲಿದೆ. ಪ್ರತಿ ತಿಂಗಳ ಮೊದಲ ದಿನಾಂಕದಂದು ಈ ಹಣ ಅವರ ಖಾತೆಗಳಿಗೆ ವರ್ಗಾವಣೆಗೊಳ್ಳಿದೆ. ಆರಂಭದಲ್ಲಿ 17 ಲಕ್ಷ ಕುಟುಂಬಕ್ಕೆ ಇದರ ಸದುಪಯೋಗ ಸಿಗಲಿದ್ದು, ಮುಂದಿನ ದಿನಗಳಲ್ಲಿ 25 ಲಕ್ಷ ಕುಟುಂಬಗಳಿಗೆ ಈ ಯೋಜನೆ ವಿಸ್ತಾರ ಮಾಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ಪ್ರಮುಖ ಹಬ್ಬಗಳ ವೇಳೆ 2ರಿಂದ 3 ಸಾವಿರದವರೆಗೆ ಖಾತೆದಾರರ ಅಕೌಂಟ್ನಲ್ಲಿ ಹಣ ಜಮಾವಣೆಗೊಳ್ಳಲಿದೆ ಎಂದು ತಿಳಿದು ಬಂದಿದೆ. ನೆರೆಹಾವಳಿ ಉಳಿದ ತಿಂಗಳಲ್ಲಿ ಸಾವಿರ ರೂ ಜಮಾವಣೆಗೊಳ್ಳಲಿದೆ. ಆಗಸ್ಟ್ 16ರಿಂದ ಈ ಯೋಜನೆ ಪಲಾನುಭವಿಗಳ ಆಯ್ಕೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 2ರಂದು ಮೊದಲ ಹಂತದ ಹಣ ಜಮಾವಣೆಗೊಳ್ಳಲಿದೆ.