ಗುವಾಹಟಿ: ಕೊರೊನಾ ವಾರಿಯರ್ಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳ ಚಹಾದಂತಹ 'ಕ್ವಾತ್' ಎಂಬ ಔಷಧೀಯ ಮಿಶ್ರಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಸ್ಸೋಂನ ಸರ್ಕಾರಿ ಆಯುರ್ವೇದ ಕಾಲೇಜಿನ ವೈದ್ಯರು ಹೇಳಿದೆ.
'ಆಯುಷ್ ಕ್ವಾತ್' ಎಂಬ ಹೆಸರಿನ ಔಷಧವನ್ನು ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಮಾರ್ಗಸೂಚಿಗಳ ಅನುಸಾರವಾಗಿ ತಯಾರಿಸಲಾಗಿದೆ.
ಶುಂಠಿ, ತುಳಸಿ, ಮೆಣಸು, ದಾಲ್ಚಿನ್ನಿ ಇತ್ಯಾದಿಗಳ ಮಿಶ್ರಣ ಸೇರಿಸಿ 'ಕ್ವಾತ್' ಔಷಧ ತಯಾರಿಸಲಾಗಿದೆ. ದಿನಕ್ಕೆ ಎರಡು ಬಾರಿ ಈ ಔಷಧ ಸೇವಿಸುವುದರಿಂದ ಕೊರೊನಾ ವಾರಿಯರ್ಗಳನ್ನು ವೈರಸ್‌ನಿಂದ ದೂರವಿಡಬಹುದು ಎಂದು ಔಷಧಿ ತಯಾರಿಕೆ ತಂಡದ ಕಾಲೇಜಿನ ವೈದ್ಯರು ಹೇಳಿದ್ದಾರೆ.