ETV Bharat / bharat

ಚೀನಾ-ಭಾರತ ಗಡಿ ಉದ್ವಿಗ್ನ: ಪಿಒಕೆಯಲ್ಲಿ ಉಗ್ರರ ಜತೆ ಸೇರಿ ಪಾಕ್ ಷಡ್ಯಂತ್ರ - ಗುಪ್ತಚರ ಇಲಾಖೆ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರಾದ ಲೆಫ್ಟಿನೆಂಟ್ ಜನರಲ್ ಹಮೀದ್ ಅವರು, ಪಿಒಕೆ ಗಡಿ ಪ್ರದೇಶಗಳಿಗೆ ರಹಸ್ಯ ಭೇಟಿಗೂ ಮುನ್ನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದರು. ಐಎಸ್ಐ ಮುಖ್ಯಸ್ಥ, ಪಾಕ್​ ಸೇನೆ ಹಿರಿಯ ಅಧಿಕಾರಿಗಳು ಹಾಗೂ ಭಯೋತ್ಪಾದನಾ ಸಂಘಟನೆಗಳ ನಾಯಕರು ಪಿಒಕೆಯಲ್ಲಿ ಸಭೆ ಸೇರಿದ್ದರು ಎಂಬುದನ್ನು ಭಾರತದ ಗುಪ್ತಚರ ಏಜೆನ್ಸಿ ಬಹಿರಂಗಪಡಿಸಿದೆ.

Line of Control
ಎಲ್​ಒಸಿ
author img

By

Published : Jun 3, 2020, 11:32 PM IST

ನವದೆಹಲಿ: ಪೂರ್ವ ಲಡಾಖ್​ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಚೀನಾದೊಂದಿಗೆ ಭಾರತದ ಉದ್ವಿಗ್ನತೆಯ ಲಾಭ ಪಡೆಯಲು ಪಾಕಿಸ್ತಾನದ ಗುಪ್ತರಚರ ಸಂಸ್ಥೆ ಐಎಸ್​ಐ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್​ಐಸಿ) ಉದ್ದಕ್ಕೂ ಉಗ್ರರರನ್ನು ಭಾರತದ ಒಳನುಸುಳಿಸುತ್ತಿದ್ದೆ ಎಂಬ ಆತಂಕಕಾರಿ ವರದಿ ಬೆಳಕಿಗೆ ಬಂದಿದೆ.

ಪಾಕ್ ತನ್ನ ನೆಲದಲ್ಲಿ ನೂರಾರು ಭಯೋತ್ಪಾದಕರಿಗೆ ತರಬೇತಿ ನೀಡಿ ಉಗ್ರ ಕೃತ್ಯ ಎಸಗಲು ಭಾರತದ ಗಡಿಒಳಗೆ ತಳುತ್ತಿದೆ. ವಾರದ ಹಿಂದೆಯಷ್ಟೇ ಐಎಸ್ಐ ಮುಖ್ಯಸ್ಥ/ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಮತ್ತು ಪಾಕ್​ ಸೇನೆ ಹಿರಿಯ ಅಧಿಕಾರಿಗಳು ಮುಜಫರಾಬಾದ್​ನ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಗೋಜ್ರಾ ಪ್ರದೇಶದ ಅತಿಥಿಗೃಹವೊಂದರಲ್ಲಿ ಜೈಶ್-ಎ-ಮೊಹಮ್ಮದ್ ನಾಯಕ ಮೌಲಾನಾ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಸೇರಿದಂತೆ ಭಯೋತ್ಪಾದನಾ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದ್ದರು. ಭಾರತೀಯ ಗುಪ್ತಚರ ಸಂಸ್ಥೆಗಳು ಈ ವರದಿಯನ್ನು ಬಹಿರಂಗಪಡಿಸಿವೆ.

ಗುಪ್ತಚರ ವರದಿಯ ಪ್ರಕಾರ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರಾಗಿರುವ ಲೆಫ್ಟಿನೆಂಟ್ ಜನರಲ್ ಹಮೀದ್, ಪಿಒಕೆ ಗಡಿ ಪ್ರದೇಶಗಳಿಗೆ ರಹಸ್ಯ ಭೇಟಿಗೆ ಮುಂಚಿತವಾಗಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದರು.

ಕಳೆದ ತಿಂಗಳು ಮೇ 6ರಂದು ಐಎಸ್‌ಐ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಪಿಎಂ ಇಮ್ರಾನ್ ಖಾನ್ ನಡುವೆ ಮತ್ತೊಂದು ಸುತ್ತಿನ ಪ್ರಮುಖ ಸಭೆ ನಡೆದಿತ್ತು. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಪ್ರಧಾನಿ ಸಹಾಯಕ ಡಾ. ಮಯೀದ್ ಯೂಸುಫ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಹಲವಾರು ಪ್ರಮುಖ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.