ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ರೋಡ್ ಶೋ ಗದ್ದಲದ ಮಧ್ಯೆ ಸಿಕ್ಕಿಬಿದ್ದು ಸೋಮವಾರ ನಿಗದಿಯಾಗಿದ್ದ ಉಮೇದುವಾರಿಕೆ ಸಲ್ಲಿಕೆಯನ್ನು ಒಂದು ದಿನ ಮುಂದೂಡಿದ್ದರು. ಈ ಘೋಷಣೆ ಬಳಿಕ ಇಂದು (ಮಂಗಳವಾರ) ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
-
Delhi CM and AAP candidate from New Delhi constituency, Arvind Kejriwal leaves from the office of the Returning Officer after filing his nomination for #DelhiElections2020 pic.twitter.com/HHwtytm1qD
— ANI (@ANI) January 21, 2020 " class="align-text-top noRightClick twitterSection" data="
">Delhi CM and AAP candidate from New Delhi constituency, Arvind Kejriwal leaves from the office of the Returning Officer after filing his nomination for #DelhiElections2020 pic.twitter.com/HHwtytm1qD
— ANI (@ANI) January 21, 2020Delhi CM and AAP candidate from New Delhi constituency, Arvind Kejriwal leaves from the office of the Returning Officer after filing his nomination for #DelhiElections2020 pic.twitter.com/HHwtytm1qD
— ANI (@ANI) January 21, 2020
ಹೊಸದಿಲ್ಲಿ ಕ್ಷೇತ್ರದ ಆಪ್ ಅಭ್ಯರ್ಥಿಯಾಗಿ ಅವರು ಸೋಮವಾರ ಉಮೇದುವಾರಿಕೆ ಸಲ್ಲಿಸಬೇಕಾಗಿತ್ತು. ಆರ್‌ಕೆ ಆಶ್ರಮ ಮಾರ್ಗ್ ಮೆಟ್ರೊ ನಿಲ್ದಾಣ ಸಮೀಪದ ವಾಲ್ಮೀಕಿ ಮಂದಿರದಿಂದ ಕನಾಟ್ ಪ್ಲೇಸ್ ಸಮೀಪದ ಹನುಮಾನ್ ಮಂದಿರದವರೆಗೆ ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ನಿನ್ನೆಯೇ ಹೊರಟಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ನೆರದಿದ್ದ ಬೆಂಬಲಗರಿಂದಾಗಿ ಸರಿಯಾದ ಸಮಯದಲ್ಲಿ ನಾಡಕಚೇರಿ ತಲುಪಲು ಆಗದೆ, ನಾಮಪತ್ರ ಸಲ್ಲಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರು. ಹೀಗಾಗಿ, ಇಂದು ತಮ್ಮ ಅಪಾರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಸೇರಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಅಗಾಧ ಬೆಂಬಲಕ್ಕೆ ಸಾಕ್ಷಿಯಾಗುತ್ತಿರುವ ಎಲ್ಲರಿಗೂ ನಾನು ಆಭಾರಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ದೆಹಲಿಯ ಜನರ ಜೀವನವನ್ನು ಸುಧಾರಿಸಲು ಈ ಐದು ವರ್ಷಗಳಲ್ಲಿ ನಾವು ಸಾಕಷ್ಟು ಶ್ರಮಿಸಿದ್ದೇವೆ. ಎಲ್ಲಾ ವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ. ದೆಹಲಿಯ ಮಕ್ಕಳು, ಹಿರಿಯರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರ ಅಭ್ಯುದಯಕ್ಕಾಗಿ ಕೆಲಸ ಮಾಡಿದ್ದೇವೆ' ಎಂದರು
ನಾವು ಕಳೆದ ಐದು ವರ್ಷಗಳಲ್ಲಿ ಪ್ರಾಮಾಣಿಕತೆಯೊಂದಿಗೆ ಕೆಲಸ ಮಾಡಿದ್ದೇವೆ. ಇಂದು ಮುಂದಿನ ಐದು ವರ್ಷಗಳವರೆಗೆ ಸಜ್ಜಾಗಲು ಆರಂಭಕ ದಿನವಿದು ಎಂದು ಹೇಳಿದರು.