ETV Bharat / bharat

ಆದೇಶ ಬಂದರೆ ಪಿಒಕೆ ವಶಕ್ಕೆ ಸೇನೆ ಸರ್ವಸನ್ನದ್ಧ...:  ನೂತನ ಸೇನಾ ಮುಖ್ಯಸ್ಥರ ಘೋಷಣೆ - ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಾನೆ ಹೇಳಿಕೆ

ನವದೆಹಲಿಯಲ್ಲಿಂದು ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಾನೆ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಪಾಕ್​​ ಆಕ್ರಮಿತ ಕಾಶ್ಮೀರ ಪಡೆಯುವ ಬಗ್ಗೆ ಹಾಗೂ ಸಿಡಿಎಸ್ ಹುದ್ದೆ ಹಾಗೂ ಸಿಯಾಚಿನ್​ ಪ್ರದೇಶ ಮತ್ತು ಸೇನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

Gen Naravane
ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್ ಹೇಳಿಕೆ
author img

By

Published : Jan 11, 2020, 2:38 PM IST

ನವದೆಹಲಿ: ಸಂಸತ್ತಿನಿಂದ ಆದೇಶ ಬಂದರೆ ಖಂಡಿತವಾಗಿಯೂ ಪಾಕ್​ ಆಕ್ರಮಿತ ಕಾಶ್ಮೀರವನ್ನ ಪುನಃ ಪಡೆದುಕಳ್ಳುಲು ನಾವು ಸಿದ್ದರಿದ್ದೇವೆ ಎಂದು ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಾನೆ ಹೇಳಿದ್ದಾರೆ

ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನರವಾನೆ, ಸಂಸತ್ತಿನಲ್ಲಿ ನಿರ್ಣಯವಾದ ಪ್ರಕಾರ, ಪಿಒಕೆ, ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶಕ್ಕೆ ಸೇರಿದ್ದಾಗಿದೆ. ಒಂದೊಮ್ಮೆ ಸರ್ಕಾರದಿಂದ ಆದೇಶ ಬಂದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು ಭಾರತೀಯ ಸೇನೆ ಖಂಡಿತವಾಗಿಯೂ ಸಿದ್ಧವಿದೆ ಎಂದು ನರವಾನೆ ತಿಳಿಸಿದ್ದಾರೆ.

ಇನ್ನು ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿರುವ ಸೇನಾಧಿಕಾರಿಗಳ ವಿರುದ್ಧದ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಮನೋಜ್​ ಮುಕುಂದ್​, ಸೇನೆಯಲ್ಲಿ ಕಮಾಂಡರ್​​ಗಳು ನೀಡಿದ ತೀರ್ಪುಗಳಿಗೆ ಗೌರವಿಸಬೇಕಾಗಿದೆ ಹಾಗೂ ಅಲ್ಲಿ ಈವರೆಗೆ ದಾಖಲಾದ ಎಲ್ಲಾ ದೂರುಗಳು ಆಧಾರರಹಿತವಾಗಿದ್ದು ಎಂದು ಸಾಬೀತಾಗಿದೆ ಎಂದರು.

ಇನ್ನು ಸಿಯಾಚಿನ್​ ಪ್ರದೇಶದ ಬಗ್ಗೆ ಪ್ರಸ್ತಾಪಿಸಿದ ಅವರು, ಇದೊಂದು ಭಾರತೀಯ ಸೇನೆಗೆ ಪ್ರಮುಖವಾದ ಅಂಶವಾಗಿದ್ದು,ಆಯಕಟ್ಟಿನ ಪ್ರದೇಶವಾದ್ದರಿಂದ ಪಶ್ಚಿಮ ಹಾಗೂ ಉತ್ತರ ಭಾಗಗಳ ಬಗ್ಗೆ ನಿಗಾ ಇಡುವಲ್ಲಿ ಭಾರತೀಯ ಸೇನೆಗೆ ಸಿಯಾಚಿನ್​ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.

ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್ ಹೇಳಿಕೆ

ಕೇಂದ್ರ ಸರ್ಕಾರದಿಂದ ರಚನೆಯಾದ ಚೀಫ್​​ ಡಿಫೆನ್ಸ್​​ ಹುದ್ದೆ(ಸಿಡಿಎಸ್​) ಅತ್ಯಂತ ಉತ್ತಮವಾದ ಯೋಜನೆಯಾಗಿದ್ದು, ಇದು ಸಂಪೂರ್ಣ ಯಶಸ್ಸು ಕಂಡಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಾನೆ ತಿಳಿಸಿದ್ದಾರೆ.

ಚೀಫ್​​ ಡಿಫೆನ್ಸ್​​ ಹುದ್ದೆ(ಸಿಡಿಎಸ್​) ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಇದರಿಂದಾಗಿ ದೇಶದ ಮಿಲಿಟರಿ ವ್ಯವಸ್ಥೆಗೆ ಸಹಾಯವಾಗಲಿದ್ದು, ಇಲಾಖೆಯ ಏಕಿಕರಣದತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸೇನೆಗೆ ಎಲ್ಲರನ್ನೂ ಸೇರಿಸಿಕೊಳ್ಳಲು ಆಗುವುದಿಲ್ಲ:

ಸೇನೆಯಲ್ಲಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದ ಮುಖ್ಯಸ್ಥರು, ಭಾರತೀಯ ಸೇನೆಯಲ್ಲಿ ಅಧಿಕಾರಿಗಳ ಕೊರತೆ ಇರುವುದು ನಿಜ, ಸೇನೆಗೆ ಸೇರಬೇಕಂದು ಅಭ್ಯರ್ಥಿಗಳು ಅರ್ಜಿ ಹಾಕುತ್ತಿರುವುದು ಸತ್ಯ, ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅಥವಾ ಸೇನೆಯಲ್ಲಿ ಅಧಿಕಾರಿಗಳ ಕೊರತೆ ಇದೆ ಎಂಬ ಮಾತ್ರಕ್ಕೆ ಯಾವುದೇ ಮಾನದಂಡಗಳಿಲ್ಲದೇ ಎಲ್ಲರನ್ನೂ ಸೇನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಮಹಿಳಾ ಜವಾನ್​ ಹುದ್ದೆಗೆ 100ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಂಡಿದ್ದು, ಜನವರಿ 6ರಿಂದ ಮೊದಲನೇ ಹಂತದ ತರಬೇತಿ ಪ್ರಾರಂಭವಾಗಿದೆ ಹಾಗೂ ನಮ್ಮ ಸೇನೆ ವರ್ಷದಿಂದ ವರ್ಷಕ್ಕೆ ಉತ್ತಮವಾಗಿಯೇ ನಡೆದುಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಸೇನೆಯು, ಭಾರತದ ಸಂವಿಧಾನಕ್ಕೆ ಬಹು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ ಹಾಗೂ ಭವಿಷ್ಯದ ಸೇನಾ ನಾಯಕರಿಗೆ ತರಬೇತಿಗಳನ್ನು ನೀಡುತ್ತಿದ್ದೇವೆ ಎಂದು ಮನೋಜ್​ ಮುಕುಂದ್​ ನರವಾನೆ ಹೇಳಿದ್ದಾರೆ.

Intro:Body:

Army ready to take control of PoK: Gen Naravane

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.