ETV Bharat / bharat

ಗಡಿಯಲ್ಲಿ ಪಾಕ್ ಸೇನೆಯಿಂದ ಗುಂಡಿನ ದಾಳಿ: ಓರ್ವ ಯೋಧ ಹುತಾತ್ಮ, ಇಬ್ಬರಿಗೆ ಗಾಯ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಪಾಕ್​ ಕ್ಯಾತೆ ತೆಗೆದಿದ್ದು, ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ದಾಳಿ ನಡೆಸಿದೆ. ಇದರಿಂದಾಗಿ ಸೇನೆಯ ಓರ್ವ ಯೋಧ ಹುತಾತ್ಮನಾಗಿ, ಇಬ್ಬರು ಯೋಧರು ಗಾಯಗೊಂಡಿದ್ದಾರೆ.

indian army
ಭಾರತೀಯ ಸೇನೆ
author img

By

Published : Jun 14, 2020, 11:19 AM IST

ಶ್ರೀನಗರ (ಜಮ್ಮು ಕಾಶ್ಮೀರ): ಪಾಕಿಸ್ತಾನ ಸೇನೆ ಎಲ್​ಒಸಿ ಬಳಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ.

ಪೂಂಚ್​ ಜಿಲ್ಲೆಯ ಶಹಾಪುರ ಹಾಗೂ ಕಿರ್ನಿ ಸೆಕ್ಟರ್​​ಗಳಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದ್ದು, ರಜೌರಿ ಹಾಗೂ ಪೂಂಚ್​ ಜಿಲ್ಲೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಮತ್ತೆ ಮತ್ತೆ ಪಾಕ್​ ಕ್ಯಾತೆ ತೆಗೆಯುತ್ತಿದೆ.

ರಾತ್ರಿ ಪಾಕಿಸ್ತಾನದಿಂದ ಗಡಿಯಲ್ಲಿ ಶೆಲ್​ಗಳ ಹಾಗೂ ಗುಂಡಿನ ದಾಳಿ ನಡೆದಿದ್ದು, ಭಾರತೀಯ ಸೇನೆಯಿಂದಲೂ ಕೂಡಾ ಪ್ರತ್ಯುತ್ತರ ನೀಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ಯೋಧರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಜೂನ್​ 4ರಂದು ಇದೇ ರೀತಿ ಪಾಕ್​ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಆಗ ರಜೌರಿ ಜಿಲ್ಲೆಯ ಸುಂದರ್​ಬನಿಯಲ್ಲಿ ಹವಾಲ್ದಾರ್​ ಒಬ್ಬರು ಹುತಾತ್ಮರಾಗಿದ್ದರು. ಜೂನ್​ 10ರಂದು ನಾಯ್ಕ್​​ ಗುರುಚರಣ್​ ಸಿಂಗ್​ ಹುತಾತ್ಮರಾಗಿದ್ದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.