ಜಮ್ಮು: ಕೊರೊನಾ ವೈರಸ್ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾದ 12 ವರ್ಷದ ಬಾಲಕನನ್ನು ಇಲ್ಲಿನ ಮಿಲಿಟರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ ಎಂದು ಸೇನಾ ರಕ್ಷಣಾ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
ಆರ್.ಎಸ್.ಪುರ ಮೂಲದ ಬಾಲಕನನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೊನಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿತ್ತು. ದಾಖಲಾತಿ ಸಮಯದಲ್ಲಿ ಹುಡುಗನು ಉನ್ನತ ದರ್ಜೆಯ ಜ್ವರದಿಂದ ಬಳಲುತ್ತಿದ್ದ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಎಂದು ವಕ್ತಾರರು ತಿಳಿಸಿದ್ದಾರೆ.
ಬಾಲಕ ನ್ಯುಮೋನಿಯಾ ಮತ್ತು ಅಕ್ಯೂಟ್ ರೆಸ್ಪಿರೆಟರಿ ಡಿಸ್ಟ್ರೆಸ್ ಸಿಂಡ್ರೋಮ್ಯಿಂದ (ಎಆರ್ಡಿಎಸ್) ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದ. ಸುಧಾರಿತ ಪೀಡಿಯಾಟ್ರಿಕ್ ಪ್ರೋಟೋಕಾಲ್ಗಳು ಮತ್ತು ದ್ರವಗಳು, ಐನೋಟ್ರೋಪ್ಗಳು, ಸ್ಟೀರಾಯ್ಡ್ಗಳು, ಐವಿಐಜಿ, ಪ್ರತಿಜೀವಕಗಳು, ಆಮ್ಲಜನಕ ಮತ್ತು ಉಸಿರಾಟದ ಒದಗಿಸುವ ಚಿಕಿತ್ಸಾ ಕ್ರಮಗಳು ಸೇರಿದಂತೆ ಇತರ ಆರೈಕೆ ಕ್ರಮಗಳನ್ನು ನೀಡಲಾಯಿತು. ಈ ಎಲ್ಲ ಚಿಕಿತ್ಸೆಗಳ ಮೂಲಕ ಸೇನಾ ವೈದ್ಯರ ತಂಡವು ಬಾಲಕನ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಿದರು ಎಂದು ಹೇಳಿದ್ದಾರೆ.