ETV Bharat / bharat

ಕಾಶ್ಮೀರಕ್ಕೆ ತೆರಳಿ ಸೇನಾ ಭದ್ರತೆ ಪರಿಶೀಲಿಸಲಿರುವ ಸೇನಾ ಮುಖ್ಯಸ್ಥ ನರವಾಣೆ

ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಮೇಲಿಂದ ಕದನ ವಿರಾಮ ಉಲ್ಲಂಘಿಸುತ್ತಿದೆ. ಹೀಗಾಗಿ ನರವಾಣೆ ತಮ್ಮ ಕಾಶ್ಮೀರ ಭೇಟಿ ವೇಳೆ ಗಡಿ ನಿಯಂತ್ರಣ ರೇಖೆ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರದೇಶದಲ್ಲಿ ಸೇನಾ ನಿಯೋಜನೆ ಹಾಗೂ ಸೇನಾ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

Army chief
ಸೇನಾ ಮುಖ್ಯಸ್ಥ ನರವಾಣೆ
author img

By

Published : Sep 18, 2020, 12:19 AM IST

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಿಯೋಜಿಸಿರುವ ಸೇನಾ ಭದ್ರತೆಯನ್ನು ಮರು ಪರಿಶೀಲಿಸಲು ಭಾರತೀಯ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಾಣೆ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.

ಗಡಿಯಲ್ಲಿ ಪದೇ ಪದೇ ಕ್ಯಾತೆ ಎತ್ತುತ್ತಿರುವ ಪಾಕಿಸ್ತಾನ ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘಿಸುತ್ತಿದೆ. ಹೀಗಾಗಿ ನರವಾಣೆ ತಮ್ಮ ಕಾಶ್ಮೀರ ಭೇಟಿ ವೇಳೆ ಗಡಿ ನಿಯಂತ್ರಣ ರೇಖೆ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರದೇಶದಲ್ಲಿ ಸೇನಾ ನಿಯೋಜನೆ ಹಾಗೂ ಸೇನಾ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ನರವಾಣೆ ಭೇಟಿಯ ಖಚಿತ ದಿನಾಂಕದ ಮಾಹಿತಿ ನೀಡಲಾಗಿಲ್ಲ.

ಅತ್ತ ಪೂರ್ವ ಲಡಾಖ್​ನಲ್ಲಿ ತಮ್ಮ ಗಡಿ ವ್ಯಾಜ್ಯಗಳ ಬಗ್ಗೆ ಭಾರತ ಹಾಗೂ ಚೀನಾ ಮಾತುಕತೆ ನಡೆಸುತ್ತಿದ್ದು, ಇದೇ ಸಂದರ್ಭವನ್ನು ಪಾಕ್​ ದುರ್ಬಳಕೆ ಮಾಡುತ್ತಿದೆ. ಹೀಗಾಗಿ ಲಡಾಖ್​ ಭಾಗದಲ್ಲೂ ನರವಾಣೆ ಪರಿಸ್ಥಿತಿಯ ಅಧ್ಯಯನ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.