ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆಗೊಳಗಾಗಿರುವ ವಕೀಲ ಪ್ರಶಾಂತ್ ಭೂಷಣ್, ತಾವು ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಪ್ರಶಾಂತ್ ಭೂಷಣ್, ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಇದೇ ವಿಚಾರವಾಗಿ ಮಾತನಾಡಿರುವ ಅವರು, ನಾನು ನಿಜವೆಂದು ನಂಬಿರುವ ಹೇಳಿಕೆ ಹಿಂತೆಗೆದುಕೊಳ್ಳಲು ಕ್ಷಮೆಯಾಚನೆ ಮಾಡಿದರೆ, ನನ್ನ ಆತ್ಮಸಾಕ್ಷಿ ಒಪ್ಪಿಕೊಳ್ಳುವುದಿಲ್ಲ. ಜತೆಗೆ ಅದಕ್ಕೆ ಅಪ್ರಾಮಾಣಿಕನಾಗುತ್ತೇನೆ ಎಂದಿದ್ದಾರೆ
ನ್ಯಾಯಾಂಗದ ವಿಚಾರವಾಗಿ ನೀಡಿದ್ದ ಹೇಳಿಕೆಗೆ ನಾನು ಕ್ಷಮೆಯಾಚನೆ ಮಾಡಿದ್ರೆ ಅದು ಆತ್ಮಸಾಕ್ಷಿಗೆ ದ್ರೋಹ ಮಾಡಿದಂತೆ. ನನಗೆ ತಿಳಿದ ಅಭಿಪ್ರಾಯ ಮಂಡಿಸಿದ್ದೇನೆ. ಇದರಲ್ಲಿ ಸುಪ್ರೀಂಕೋರ್ಟ್ನ ಯಾವುದೇ ನ್ಯಾಯಮೂರ್ತಿಗಳಿಗೆ ಕೆಟ್ಟು ಹೆಸರು ತರುವ ಉದ್ದೇಶ ನನ್ನದಲ್ಲ. ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಕೆಲವೊಮ್ಮೆ ಬಹಿರಂಗ ಹೇಳಿಕೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಅವರು ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದಾರೆ.