ETV Bharat / bharat

ಆಂಧ್ರದಲ್ಲಿ ಹೂಡಿಕೆ ಮಾಡಿ: ಅಮೆರಿಕ ವಾಣಿಜ್ಯೋದ್ಯಮಿಗಳ ಗಮನ ಸಳೆದ ಜಗನ್‌ಮೋಹನ ರೆಡ್ಡಿ

author img

By

Published : Aug 17, 2019, 4:59 PM IST

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಮುಖ ವಾಣಿಜ್ಯೋದ್ಯಮಿಗಳ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.

YS Jaganmohan Reddy

ಯುಎಸ್​​ಎ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ಭಾರತ-ಅಮೆರಿಕ ವಾಣಿಜ್ಯ ಮಂಡಳಿ ​ ಸಭೆಯಲ್ಲಿ ಪಾಲ್ಗೊಂಡಿದ್ದು ರಾಜ್ಯದ ಆರ್ಥಿಕಾಭಿವೃದ್ದಿ ಹಿತದೃಷ್ಟಿಯಿಂದ ಮಹತ್ವದ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ರೆಡ್ಡಿ, ಕೃಷಿ ಮತ್ತು ಆಹಾರ ಭದ್ರತೆ, ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ವ್ಯಾಪಾರ ಗುರಿ ಹೆಚ್ಚಿಸಲು ಆಂಧ್ರಪ್ರದೇಶದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಅಮೆರಿಕದಲ್ಲಿ ಆಂಧ್ರ ಸಿಎಂ ಬ್ಯುಸಿನೆಸ್ ಮಾತು

ಆಂಧ್ರಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿರುವ ಅವರು, ಹೂಡಿಕೆದಾರರಿಗೆ ಸಕಲ ರೀತಿಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.

ಮಗಳನ್ನು ವಿಶ್ವವಿದ್ಯಾಲಯಕ್ಕೆ ಸೇರ್ಪಡೆ ಮಾಡುವ ಉದ್ದೇಶದಿಂದ ಖಾಸಗಿಯಾಗಿ ಪ್ರಯಾಣಿಸಿದ ಆಂಧ್ರ ಸಿಎಂ, ಅಲ್ಲಿನ ಉದ್ಯಮಿಗಳೊಂದಿಗೆ ಬ್ಯುಸಿನೆಸ್​ ಟಾಕ್‌ ನಡೆಸಿದ್ದಾರೆ. ಈ ಸಭೆಯಲ್ಲಿ ಯುಎಸ್​ ಚೇಂಬರ್ಸ್​ ಆಫ್​ ಕಾಮರ್ಸ್​ನ ಹಿರಿಯ ಉಪಾಧ್ಯಕ್ಷ ರಾಬ್​ ಶ್ರೋಡರ್​ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Intro:Body:

ಅಮೆರಿಕದಲ್ಲಿ ಆಂಧ್ರ ಸಿಎಂ ಬ್ಯುಸಿನೆಸ್ ಮಾತು... ಆರ್ಥಿಕ ಅಭಿವೃದ್ಧಿಗೆ ಮಹತ್ವದ ವಿಚಾರ ತಿಳಿಸಿದ ಯಂಗ್​ ಸಿಎಂ! 

ಯುಎಸ್​​ಎ: ಆಂಧ್ರಪ್ರದೇಶದ ಯಂಗ್​ ಸಿಎಂ ಜಗನ್​ಮೋಹನ್​ ರೆಡ್ಡಿ ಯುಎಸ್​​-ಇಂಡಿಯಾ ಬ್ಯುಸಿನೆಸ್​ ಕೌನ್ಸಿಲ್​ ಸಭೆಯಲ್ಲಿ ಭಾಗಿಯಾಗಿ, ಆರ್ಥಿಕ ಅಭಿವೃದ್ಧಿಗಾಗಿ ಐದು ಮಹತ್ವದ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. 

ಸಭೆಯಲ್ಲಿ ಪ್ರಮುಖವಾಗಿ ಕೃಷಿ ಮತ್ತು ಆಹಾರ ಭದ್ರತೆ, ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ವ್ಯಾಪಾರ ಗುರಿ ಹೆಚ್ಚಿಸಲು ಆಂಧ್ರಪ್ರದೇಶದೊಂದಿಗೆ ಕೈಜೋಡಿಸಲು ಇದೇ ವೇಳೆ ಅವರು ಮನವಿ ಮಾಡಿಕೊಂಡಿದ್ದಾರೆ. 

ಮಗಳನ್ನು ವಿಶ್ವವಿದ್ಯಾಲಯಕ್ಕೆ ಸೇರ್ಪಡೆ ಮಾಡುವ ಉದ್ದೇಶದಿಂದ ಖಾಸಗಿಯಾಗಿ ಪ್ರಯಾಣ ಬೆಳೆಸಿದ್ದ ಆಂಧ್ರ ಸಿಎಂ ಇದೇ ವೇಳೆ ಅಲ್ಲಿನ ಉದ್ಯಮಿಗಳೊಂದಿಗೆ ಬ್ಯುಸಿನೆಸ್​ ಮಾತುಕತೆ ನಡೆಸಿ, ಈ ಸಲಹೆ ನೀಡಿದ್ದಾಗಿ ತಿಳಿದು ಬಂದಿದೆ. ನೈಸರ್ಗಿಕ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಬಲಪಡಿಸಲು ಸರ್ಕಾರ ಬದ್ಧವಾಗಿದ್ದು, ಭವಿಷ್ಯದಲ್ಲಿ ಹೊಡಿಕೆ ಹಾಗೂ ಅರ್ಥಿಕ ಅಭಿವೃದ್ಧಿ ದೃಷ್ಠಿಯಿಂದ ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಆಂಧ್ರಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿರುವ ಜಗನ್​ಮೋಹನ್​ ರೆಡ್ಡಿ ಎಲ್ಲ ರೀತಿಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಯುಎಸ್​ ಚೇಂಬರ್ಸ್​ ಆಫ್​ ಕಾಮರ್ಸ್​ನ ಹಿರಿಯ ಉಪಾಧ್ಯಕ್ಷ ರಾಬ್​ ಶ್ರೋಡರ್​ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.