ETV Bharat / bharat

ದೇಶದಲ್ಲಿ ಉತ್ಪಾದಿಸುವ ಎಲ್ಲ ಉತ್ಪನ್ನಗಳು ಸ್ಥಳೀಯ ವಸ್ತುಗಳೇ: ರಾಜ್ಯಸಭಾ ಸದಸ್ಯ ನರಸಿಂಹರಾವ್ - coronavirus

ರಾಷ್ಟ್ರೀಯ ಸ್ವಾವಲಂಬನೆಗೆ ಸ್ಥಳೀಯ ಉತ್ಪನ್ನಗಳ ಬಳಕೆ ಅಗತ್ಯವಿದೆ. ಇದು ನಮ್ಮ ಜೀವನದ ಮಂತ್ರವಾಗಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ವಿ.ಎಲ್​.ನರಸಿಂಹರಾವ್ ಹೇಳಿದರು.

Anything made in India, including by MNCs, is local for us: BJP
ರಾಜ್ಯಸಭಾ ಸದಸ್ಯ ನರಸಿಂಹರಾವ್
author img

By

Published : May 14, 2020, 8:06 PM IST

Updated : May 14, 2020, 8:20 PM IST

ಬೆಂಗಳೂರು (ಕರ್ನಾಟಕ): ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಭಾರತದಲ್ಲಿ ತಯಾರಿಸುವ ಎಲ್ಲ ಉತ್ಪನ್ನಗಳು ಸ್ಥಳೀಯ ವಸ್ತುಗಳೇ ಎಂದು ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಜಿ.ವಿ.ಎಲ್​.ನರಸಿಂಹರಾವ್ ಹೇಳಿದರು.

ಸ್ವಾವಲಂಬನೆ ಭಾರತಕ್ಕಾಗಿ ಪ್ರಧಾನಿ ಮೋದಿ ಅವರು ಕರೆ ಕೊಟ್ಟಿರುವ ಕುರಿತು ಮಾತನಾಡಿದ ನರಸಿಂಹರಾವ್​​, ಭಾರತದಲ್ಲಿ ನಮಗಾಗಿ ತಯಾರಿಸುವ ಯಾವುದಾದರೂ ಸ್ಥಳೀಯ ಉತ್ಪನ್ನಗಳೇ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ಅಥವಾ ಖರೀದಿಸದಿರುವುದು ನಿಮಗೆ ಬಿಟ್ಟ ವಿಚಾರ. ಅದಕ್ಕೆ ಯಾವುದೇ ನಿರ್ದೇಶನವಿಲ್ಲ ಎಂದು ಅವರು ಹೇಳಿದರು.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಸ್ವಂತ ಅಗತ್ಯಗಳಿಂದ ಹೇಗೆ ಸಂಘಟಿಸಿತು ಎಂಬುದಕ್ಕೆ ಭಾರತ ಸಾಕ್ಷಿ. ಭಾರತ 100ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳ ವಿತರಿಸಿದೆ. ತ್ವರಿತ ಗತಿಯಲ್ಲಿ ಹತ್ತಾರು ಲಕ್ಷ ಎನ್ ​​​- 95 ಮಾಸ್ಕ್​​ಗಳನ್ನು ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಭಾರತದ ಶಕ್ತಿ. ಆದರೆ, ಹೆಚ್ಚಿನ ದೇಶಗಳು ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿವೆ ಎಂದರು.

ಸ್ಥಳೀಯ ಉತ್ಪನ್ನಗಳ ಬಳಕೆ ಕೇವಲ ಬಿಕ್ಕಟ್ಟಿನ ಕಾಲದಲ್ಲಿ ಅಲ್ಲ. ಅದು ಜೀವನದ ಮಂತ್ರವಾಗಬೇಕು. ಅದು ಜಾಗತಿಕ ಮಟ್ಟಕ್ಕೆ ಹೋಗಲು ಸಹ ಸಹಾಯ ಮಾಡಲಿದೆ. ಸ್ಥಳೀಯ ಉತ್ಪನ್ನಗಳನ್ನೇ ಬಳಸಿ ಎಂದು ಉತ್ತೇಜಿಸುವುದು ಸರ್ಕಾರದ ಕಾರ್ಯಸೂಚಿಯಲ್ಲ. ಬೇಕಿರುವುದು ಮನಸ್ಥಿತಿ ಬದಲಾವಣೆ. ವಿದೇಶಿ ಉತ್ಪನ್ನಗಳು ಉತ್ತಮವಾಗಿವೆ ಎಂಬ ಅಭಿಪ್ರಾಯವನ್ನು ತ್ಯಜಿಸಬೇಕು ಎಂದರು.

Last Updated : May 14, 2020, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.