ETV Bharat / bharat

ಸಿಎಎ ವಿರೋಧಿ ಪ್ರತಿಭಟನೆ: ಶಾರ್ಜೀಲ್ ಉಸ್ಮಾನಿಗೆ ಜಾಮೀನು, ಜೈಲಿನಿಂದ ಬಿಡುಗಡೆ - ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು)

2019ರ ಡಿಸೆಂಬರ್‌ನಲ್ಲಿ ಎಎಂಯುನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಶಾರ್ಜೀಲ್ ಉಸ್ಮಾನಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

Sharjeel Usmani
ಶಾರ್ಜೀಲ್ ಉಸ್ಮಾನಿ
author img

By

Published : Sep 3, 2020, 4:38 PM IST

ಅಲಿಘರ್​​ (ಉತ್ತರ ಪ್ರದೇಶ): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ವೇಳೆ ಜೈಲು ಸೇರಿದ್ದ ಎಎಂಯು ವಿದ್ಯಾರ್ಥಿ ನಾಯಕ ಶಾರ್ಜೀಲ್ ಉಸ್ಮಾನಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಹಿರಿಯ ಉಪನ್ಯಾಸರೊಬ್ಬರ ಪುತ್ರ ಹಾಗೂ ವಿದ್ಯಾರ್ಥಿ ಸಂಘದ ಮಾಜಿ ನಾಯಕ ಶಾರ್ಜೀಲ್ ಉಸ್ಮಾನಿಗೆ ಅಲಿಘರ್ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದ್ದು, ಬುಧವಾರ ಬಿಡುಗಡೆಯಾಗಿದ್ದಾನೆ.

ಉಸ್ಮಾನಿ ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದಾನೆ. ಘಟನಾ ಸ್ಥಳದಿಂದ ಅವನನ್ನು ಬಂಧಿಸಲಾಗಿರಲಿಲ್ಲ ಮತ್ತು ಆತನ ಮೇಲಿನ ದೋಷಾರೋಪಣೆಗೆ ಸಾಕ್ಷ್ಯಾಧಾರಗಳು ಕಂಡುಬರದ ಕಾರಣ ಬೇಲ್​ ನೀಡಲಾಗಿದೆ ಎಂದು ಜಾಮೀನು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

2019ರ ಡಿಸೆಂಬರ್‌ನಲ್ಲಿ ಎಎಂಯುನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಕಳೆದ ಜುಲೈ 10 ರಂದು ಉಸ್ಮಾನಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.