ETV Bharat / bharat

ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್​ಗೆ ಬೆದರಿಕೆ ಕರೆ - ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್

ಉದಿತ್ ನಾರಾಯಣ್​ಗೆ ಬೆದರಿಕೆ ಕರೆ ಬಂದಿದ್ದು ಅನಾಮಧೇಯ ವ್ಯಕ್ತಿಯ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದಾರ. ಆರೋಪಿಯು ಬಿಹಾರ ಮೂಲದವನು ಎನ್ನಲಾಗಿದ್ದು, ಪೊಲೀಸರು ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಿದ್ದಾರೆ.

ಉದಿತ್ ನಾರಾಯಣ್​
author img

By

Published : Jul 29, 2019, 9:37 AM IST

ಮುಂಬೈ: ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರಿಗೆ ಅನಾಮದೇಯನೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಉದಿತ್​ ನಾರಾಯಣ್, ಎರಡು ವಾರದ ಹಿಂದೆ ಪೊಲೀಸರಿಗೆ ದೂರು ನೀಡಿದ್ದು, ಅನಾಮದೇಯ ವ್ಯಕ್ತಿ ತಿಂಗಳಿನಿಂದಲೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಆದರೆ, ಆತ ಯಾವುದೇ ಹಣಕ್ಕೆ ಬೇಡಿಕೆ ಇಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಕರೆ ಮಾಡಿದ ಸಂಖ್ಯೆ ಆಧಾರದ ಮೇಲೆ ಆರೋಪಿಯ ಬೆನ್ನು ಬಿದ್ದಿದ್ದಾರೆ. ಈ ಆರೋಪಿ ಬಿಹಾರ​ ಮೂಲದವ ಎನ್ನಲಾಗಿದೆ. ಹೀಗಾಗಿ ಪೊಲೀಸರು ಆರೋಪಿಯನ್ನು ಸೆರೆಹಿಡಿಯಲು ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಲಾಗಿದೆ.

ಪಶ್ಚಿಮ ಅಂಧೇರಿಯಲ್ಲಿ ನೆಲೆಸಿರುವ ನಾರಾಯಣ್ ಅವರು ಎರಡು ವಾರಗಳ ಹಿಂದೆ ಅಂಬೋಲಿ ಪೊಲೀಸರನ್ನು ಸಂಪರ್ಕಿಸಿ, ಈ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿ ಪ್ರಾರ್ಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿಯಿಂದ ಎರಡು ಮೂರು ಬಾರಿ ಕರೆ ಬಂದಿದ್ದು, ನಾರಾಯಣ್​ಗೆ ನಿಂದನೆ ಮಾಡಿದ್ದಲ್ಲದೆ, ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಈ ಸಬಂಧ ಮಾಹಿತಿ ನೀಡಿದ್ದಾರೆ.

ಬೆದರಿಕೆ ಬಂದಿರುವ ಕರೆಯ ನಂಬರ್​ ​ನಾರಾಯಣ್​ ವಾಸವಿದ್ದ ಕಟ್ಟಡದ ಸೆಕ್ಯುರಿಟಿ ಗಾರ್ಡ್​ ಹೆಸರಿನಲ್ಲಿದ್ದು, ಈ ಸಂಬಂಧ ಸೆಕ್ಯುರಿಟಿ ವಿಚಾರಿಸಿದಾಗ, ತಾನು ಮೊಬೈಲ್​ ಕಳೆದುಕೊಂಡಿದ್ದೇನೆ ಯಾರೋ ನನ್ನ ಮೊಬೈಲ್​ ಬಳಸಿಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

Intro:Body:

udit narayan 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.