ETV Bharat / bharat

ಆನ್​ಲೈನ್​ ಮೂಲಕವೇ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಸಲು ಅಣ್ಣಾ ವಿವಿ ತೀರ್ಮಾನ - ತಮಿಳುನಾಡು ಇತ್ತೀಚಿನ ಸುದ್ದಿ

ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಅಣ್ಣಾ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ annauniv.eduಗೆ ಭೇಟಿ ನೀಡಿ ಪರಿಷ್ಕೃತ ಬಳಕೆದಾರರ ಕೈಪಿಡಿ ಪರಿಶೀಲಿಸಬಹುದು. ಅಣ್ಣಾ ವಿಶ್ವವಿದ್ಯಾಲಯದ ಅಂತಿಮ ಪರೀಕ್ಷೆಗಳನ್ನು 2020ರ ಸೆಪ್ಟೆಂಬರ್ 24 ರಿಂದ 29ರವರೆಗೆ ನಡೆಸಲಾಗುತ್ತಿದೆ..

ಅಣ್ಣಾ ವಿಶ್ವವಿದ್ಯಾಲಯ
ಅಣ್ಣಾ ವಿಶ್ವವಿದ್ಯಾಲಯ
author img

By

Published : Sep 28, 2020, 6:16 PM IST

ಚೆನ್ನೈ(ತಮಿಳುನಾಡು) : ಈ ಹಿಂದೆ ತಾಂತ್ರಿಕ ತೊಂದರೆಗಳಿಂದಾಗಿ ಪದವಿ-ಸ್ನಾತಕೋತ್ತರ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅಣ್ಣಾ ವಿಶ್ವವಿದ್ಯಾಲಯ ಆನ್‌ಲೈನ್ ಮೂಲಕ ಮರು ಪರೀಕ್ಷೆ ನಡೆಸಲಿದೆ.

ಪರಿಷ್ಕೃತ ಬಳಕೆದಾರರ ಕೈಪಿಡಿಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆಗಳನ್ನು ಅನುಭವಿಸಿದ್ರೆ, ಬಳಿಕ ಪೆನ್ ಮತ್ತು ಪೇಪರ್ ಮೂಲಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆ ಪೂರ್ಣಗೊಳಿಸುವಂತೆ ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗೆ ಸಲಹೆ ನೀಡಿದೆ. ವಿದೇಶಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ತಿಳಿಸಿದೆ.

ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಅಣ್ಣಾ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ annauniv.eduಗೆ ಭೇಟಿ ನೀಡಿ ಪರಿಷ್ಕೃತ ಬಳಕೆದಾರರ ಕೈಪಿಡಿ ಪರಿಶೀಲಿಸಬಹುದು. ಅಣ್ಣಾ ವಿಶ್ವವಿದ್ಯಾಲಯದ ಅಂತಿಮ ಪರೀಕ್ಷೆಗಳನ್ನು 2020ರ ಸೆಪ್ಟೆಂಬರ್ 24 ರಿಂದ 29ರವರೆಗೆ ನಡೆಸಲಾಗುತ್ತಿದೆ.

ಪರೀಕ್ಷೆಗಳನ್ನು ಎರಡು ವಿಭಾಗಗಳಲ್ಲಿ ಒಂದು ಗಂಟೆಯ ಅವಧಿಗೆ ನಡೆಸಲಾಗುವುದು. ಭಾಗ ಎ 25 ಪ್ರಶ್ನೆಗಳನ್ನು ಹೊಂದಿದ್ರೆ, ಭಾಗ ಬಿ 15 ಪ್ರಶ್ನೆಗಳನ್ನು ಹೊಂದಿರುತ್ತದೆ. ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್​ನಂತಹ ಸಾಧನಗಳಲ್ಲಿ ಪರೀಕ್ಷೆಗಳಿಗೆ ಬಳಸಬಹುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.