ನವದೆಹಲಿ: ಹೆಚ್ಚಿನ ಅಪಾಯ ಇರುವಂತ ಸೆಲ್ಗಳಲ್ಲಿ ತಿಹಾರ್ ಜೈಲು ಆಡಳಿತವು ದಾಳಿ ನಡೆಸಿದ್ದು, ಸುಮಾರು ಐದು ಆಂಡ್ರಾಯ್ಡ್ ಸೆಲ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಸೆಲ್‌ಫೋನ್‌ಗಳು ಜೈಲಿನ ಆವರಣಕ್ಕೆ ಹೇಗೆ ಬಂದವು ಮತ್ತು ಅದನ್ನು ಯಾರು ಬಳಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಸೆಲ್ನಲ್ಲಿದ್ದ ಚಾರ್ಜರ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ, ಜೈಲಿನಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ ಫೋನ್‌ಗಳನ್ನು ಕಳ್ಳಸಾಗಣೆ ಮಾಡುವುದರಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚನ ತನಿಖೆ ಪ್ರಗತಿಯಲ್ಲಿದೆ.