ಅಮರಾವತಿ (ಆಂಧ್ರ ಪ್ರದೇಶ): ಮಾನವೀಯ ಆಧಾರದ ಮೇಲೆ ಆಂಧ್ರಪ್ರದೇಶ ಸರ್ಕಾರವು ಮುಂದಿನ ವಾರ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 55 ಮಹಿಳಾ ಕೈದಿಗಳನ್ನು ಬಿಡುಗಡೆಗೊಳಿಸಲಿದೆ.
"ಮಾನವೀಯ ಆಧಾರದ ಮೇಲೆ ಐದು ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳಿಸಿದ ಖೈದಿಗಳನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. 147 ಮಹಿಳೆಯರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರಲ್ಲಿ ನಾವು 55 ಜನರನ್ನು ಮುಕ್ತಗೊಳಿಸಲು ಆಯ್ಕೆ ಮಾಡಿದ್ದೇವೆ" ಎಂದು ಗೃಹ ಸಚಿವ ಮೆಕಥೋಟಿ ಸುಚರಿಥಾ ಹೇಳಿದರು.
21 ರಾಜಮಂಡ್ರಿ ಜೈಲಿನಿಂದ, 27 ಕಡಪದಿಂದ, ಇಬ್ಬರು ವಿಶಾಖಪಟ್ಟಣಂ ಮತ್ತು ಐದು ಮಂದಿ ನೆಲ್ಲೂರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. "ಮಹಿಳೆಯರು ಜೈಲಿಗೆ ಹೋದಾಗ, ಅವರ ಕುಟುಂಬಗಳು ಗಲಿಬಿಲಿಗೊಳ್ಳುತ್ತವೆ. ಅವರ ನಡವಳಿಕೆಯಲ್ಲಿ ಬದಲಾವಣೆ ತರಲು ನಾವು ಸುಧಾರಣೆಗಳನ್ನು ಪರಿಚಯಿಸಿದ್ದೇವೆ" ಎಂದು ಸುಚರಿಥಾ ಹೇಳಿದರು.
ಟೈಲರಿಂಗ್, ಕಸೂತಿ, ಸೀರೆ ಪೈಂಟಿಂಗ್, ಬೇಕರಿ ಮತ್ತು ಇತರ ವಿಷಯಗಳಲ್ಲಿ ಅವರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯ್ದ ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.