ETV Bharat / bharat

ನಕ್ಸಲ್ ಆಗಲು ರಾಷ್ಟ್ರಪತಿಗೆ ಅನುಮತಿ ಕೇಳಿದ ಯುವಕ: ದುರಾದೃಷ್ಟವೆಂದ ಡಿಐಜಿ..! - ಎಸ್​ಸಿ/ಎಸ್​ ದೌರ್ಜನ್ಯ ನಿಯಂತ್ರಣ ಕಾಯ್ದೆ

ಪೊಲೀಸ್​ ಠಾಣೆಯಲ್ಲಿ ಹಲ್ಲೆಗೊಳಗಾಗಿದ್ದ ಯುವಕನೋರ್ವ ತನಗೆ ನ್ಯಾಯ ಸಿಗಲಿಲ್ಲವೆಂದು ಆರೋಪಿಸಿ ರಾಷ್ಟ್ರಪತಿಗೆ ಪತ್ರ ಬರೆದು ನಕ್ಸಲ್​ ಸಂಘಟನೆಗೆ ಸೇರಲು ಅನುಮತಿ ಕೋರಿದ ವಿಚಿತ್ರ ಪ್ರಸಂಗ ಆಂಧ್ರಪ್ರದೇಶದಲ್ಲಿ ನಡೆದಿದೆ.

dig mohan rao
ಡಿಐಜಿ ಮೋಹನ್​ ರಾವ್​​
author img

By

Published : Aug 12, 2020, 6:19 PM IST

ಏಲೂರು (ಆಂಧ್ರಪ್ರದೇಶ): ಪೊಲೀಸ್​ ಠಾಣೆಯಲ್ಲಿ ಥಳಿಸಲ್ಪಟ್ಟು, ಕೇಶ ಮುಂಡನ ಮಾಡಿಸಿಕೊಂಡು ಅವಮಾನಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿಯ ಯುವಕನೋರ್ವ ತನಗೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ರಾಷ್ಟ್ರಪತಿಗೆ ಪತ್ರ ಬರೆದು ನಕ್ಸಲಿಸಂ ಸೇರಲು ಅನುಮತಿ ಕೇಳಿರುವ ಅಪರೂಪದ ಪ್ರಸಂಗ ಆಂಧ್ರ ಪ್ರದೇಶ ಏಲೂರು ಎಂಬಲ್ಲಿ ನಡೆದಿದೆ.

ರಾಜಮಂಡ್ರಿಯ ವೇಡುಲ್ಲಪಲ್ಲೆ ಎಂಬ ಗ್ರಾಮದ ವರಪ್ರಸಾದ್​, ರಾಷ್ಟ್ರಪತಿಗೆ ಪತ್ರ ಬರೆದ ಯುವಕನಾಗಿದ್ದು, ವೈಎಸ್​ಆರ್​ಸಿಪಿ ನಾಯಕ ಮರಳು ಲಾರಿಗಳನ್ನು ಮುನಿ ಕುಡಲಿ ಎಂಬ ಪ್ರದೇಶದಲ್ಲಿ ತಡೆದಿದ್ದನು. ಇದಾದ ನಂತರ ಆತನನ್ನು ಜುಲೈ 20ರಂದು ವಿಚಾರಣೆ ಹೆಸರಲ್ಲಿ ಸೀತಾನಗರಂ ಪೊಲೀಸ್ ಠಾಣೆಗೆ ಕರೆದು ಹೇಳಿಕೆ ಹಲ್ಲೆ ನಡೆಸಿ, ತಲೆ ಹಾಗೂ ಗಡ್ಡವನ್ನು ಬೋಳಿಸಿ ಕಳುಹಿಸಲಾಗಿತ್ತು.

ಇದು ಗಮನಕ್ಕೆ ಬಂದ ನಂತರ ಜುಲೈ 22ರಂದು ಸಿಎಂ ಜಗನ್​ ಮೋಹನ್ ರೆಡ್ಡಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಹೆಚ್ಚಿನ ಮಾಹಿತಿ ಕೇಳಿದ್ದರು. ಸಿಎಂ ಸೂಚನೆಯನ್ನು ಪಾಲಿಸಿದ ಏಲೂರು ವಿಭಾಗದ ಡಿಐಜಿ ಮೋಹನ್​ ರಾವ್​​ ಈ ಘಟನೆ ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಎಸ್​ಸಿ/ಎಸ್​ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಸಬ್​ ಇನ್ಸ್​​ಪೆಕ್ಟರ್ ಶೇಖ್ ಫೀರೋಜ್​ ಖಾನ್​ ಹಾಗೂ ಓರ್ವ ಕಾನ್ಸ್​ಟೇಬಲ್​ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ವರಪ್ರಸಾದ್ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ ಎಂದು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.