ETV Bharat / bharat

ಫೋನ್ ಟ್ರ್ಯಾಕಿಂಗ್​​ ಮೂಲಕ ಹೋಂ ಕ್ವಾರಂಟೈನ್​ನಲ್ಲಿರುವ 25 ಸಾವಿರ ಮಂದಿ ಮೇಲೆ ನಿಗಾ ಇರಿಸಲಿದೆ ಆಂಧ್ರ ಸರ್ಕಾರ - ಆಂಧ್ರ ಪ್ರದೇಶ ಸರ್ಕಾರ

'ಕೋವಿಡ್ ಅಲರ್ಟಿಂಗ್ ಟ್ರ್ಯಾಕಿಂಗ್ ವ್ಯವಸ್ಥೆ' ಮೂಲಕ, ಆಂಧ್ರಪ್ರದೇಶ ಸರ್ಕಾರವು ಹೋಂ ಕ್ವಾರಂಟೈನ್​ನಲ್ಲಿರುವ 25 ಸಾವಿರಕ್ಕೂ ಹೆಚ್ಚು ಜನರ ಚಲನವಲನಗಳ ಮೇಲೆ ನಿಗಾ ಇರಿಸಲಿದೆ.

ap
ap
author img

By

Published : Mar 31, 2020, 12:24 PM IST

ಅಮರಾವತಿ: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಇತರ ಏಜೆನ್ಸಿಗಳ ಸಹಾಯದಿಂದ ತಯಾರಿಸಲಾದ ಟ್ರ್ಯಾಕಿಂಗ್ ವ್ಯವಸ್ಥೆ ಮೂಲಕ ಹೋಂ ಕ್ವಾರಂಟೈನ್​ನಲ್ಲಿರುವವರ ಮೇಲೆ ಆಂಧ್ರ ಪ್ರದೇಶ ಸರ್ಕಾರ ನಿಗಾ ಇಡಲಿದೆ. ಜೊತೆಗೆ ಹೋಂ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನೂ ಇದರ ಮೂಲಕ ತಿಳಿದುಕೊಳ್ಳಬಹುದಾಗಿದೆ.

'ಕೋವಿಡ್ ಅಲರ್ಟಿಂಗ್ ಟ್ರ್ಯಾಕಿಂಗ್ ವ್ಯವಸ್ಥೆ' ಎಂದು ಕರೆಯಲ್ಪಡುವ ಈ ವ್ಯವಸ್ಥೆಯಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಮೊಬೈಲ್ ಟವರ್ ಸಿಗ್ನಲ್‌ಗಳ ಸಹಾಯದಿಂದ ಹೋಂ ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ಇಡಲಾಗುತ್ತದೆ.

ಹೋಂ ಕ್ವಾರಂಟೈನ್​ನಲ್ಲಿರುವ ಎಲ್ಲಾ 25,000 ಜನರ ಮೊಬೈಲ್ ಸಂಖ್ಯೆಗಳ ಡೇಟಾಬೇಸ್​ಗಳನ್ನು ಅಧಿಕಾರಿಗಳು ಈಗಾಗಲೇ ಹೊಂದಿದ್ದಾರೆ. ವ್ಯಕ್ತಿಯು ತನ್ನ ಮನೆ ಬಿಟ್ಟು ಹೊರಗೆ ಬಂದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

ತೆಲಂಗಾಣ, ಬಿಹಾರ ಮತ್ತು ಒಡಿಶಾ ಕೂಡ ಆಂಧ್ರಪ್ರದೇಶದ ಇದೇ ಮಾದರಿಯನ್ನು ಅನುಸರಿಸಲು ಮುಂದಾಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.