ETV Bharat / bharat

ಪೊಲೀಸ್ ಠಾಣೆಗೆ ಹಾನಿ ಮಾಡಿ, ಆ್ಯಂಬುಲೆನ್ಸ್​ಗೆ ಬೆಂಕಿ ಹಚ್ಚಿದ ಆರೋಪಿಯ ಬಂಧನ​

ಪೊಲೀಸ್​ ಠಾಣೆಗೆ ಹಾನಿ ಮಾಡಿ, ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದ ಆರೋಪಿಯನ್ನು ಆಂಧ್ರಪ್ರದೇಶ ಒಂಗೋಲ್ ಪಟ್ಟಣದಲ್ಲಿ ಬಂಧಿಸಲಾಗಿದೆ.

man sets ablaze ambulance after damaging police station
ಆ್ಯಂಬುಲೆನ್ಸ್​ಗೆ ಬೆಂಕಿ ಹಚ್ಚಿದ ಆರೋಪಿಯ ಬಂಧನ
author img

By

Published : Sep 16, 2020, 6:02 PM IST

ಪ್ರಕಾಶಂ (ಆಂಧ್ರಪ್ರದೇಶ): ಆಸ್ಪತ್ರೆಗೆ ಕರೆದೊಯ್ಯುವಾಗ ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಒಂಗೋಲ್ ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಮೇಶ್ (ಎಎಸ್‌ಐ) ತಿಳಿಸಿದ್ದಾರೆ

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವೃತ್ತಿಯಲ್ಲಿ ಚಮ್ಮಾರನಾಗಿರುವ ರೌಡಿ ಶೀಟರ್ ನೆಲಾಟೂರಿ ಸುರೇಶ್​ ಎಂಬಾಂತ​ ಬುಧವಾರ ಮುಂಜಾನೆ 2:45 ರ ಸುಮಾರಿಗೆ ಪೊಲೀಸ್​ ಠಾಣೆಗೆ ಬಂದು ಕೈಯಿಂದ ಠಾಣೆಯ ಗಾಜುಗಳನ್ನು ಒಡೆದು ಗಾಯ ಮಾಡಿಕೊಂಡಿದ್ದ. ಇದರಿಂದ ಅತನ ಕೈಗೆ ಗಾಯಗಳಾಗಿ ರಕ್ತ ಸುರಿಯುತ್ತಿತ್ತು. ಹೀಗಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು 108 ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯಿತ್ತಿದ್ದರು. ಈ ವೇಳೆ ಆತ ಆ್ಯಂಬುಲೆನ್ಸ್​ಗೆ ಬೆಂಕಿ ಹಚ್ಚಿದ್ದ.

ಗಾಯಗೊಂಡಿದ್ದ ಸುರೇಶ್​ನನ್ನು ಆ್ಯಂಬುಲೆನ್ಸ್​ಗೆ ಹತ್ತಿಸಿ ಪೊಲೀಸರು ಹಿಂದಿನಿಂದ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಸುರೇಶ್​ ಆ್ಯಂಬುಲೆನ್ಸ್​ಗೆ ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಆ್ಯಂಬುಲೆನ್ಸ್ ಬಾಗಿಲು ತೆರೆದ ಪೊಲೀಸರು ಆತನನ್ನು ಸೆರೆ ಹಿಡಿದ್ದಿದ್ದಾರೆ ಎಂದು ಎಎಸ್​ಐ ರಮೇಶ್​ ತಿಳಿಸಿದ್ದಾರೆ.

ಘಟನೆ ನಡೆದಾಗ ಆ್ಯಂಬುಲೆನ್ಸ್ ಚಾಲಕ ಮತ್ತು ಸಹಾಯಕ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹಚ್ಚಿದ್ದ ಆರೋಪಿ ಸುರೇಶ್​ನನ್ನು ಬೈಕ್​ನಲ್ಲಿ ಕರೆದೊಯ್ದ ಪೊಲೀಸರು ಒಂಗೋಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸ್ ಠಾಣೆಗೆ ಹಾನಿ ಮಾಡಿದ್ದಕ್ಕಾಗಿ ಮತ್ತು ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಕ್ಕಾಗಿ ಸುರೇಶ್ ವಿರುದ್ಧ ಎರಡು ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.