ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ವಿಚಾರಣೆಗಾಗಿ ಕೋರ್ಟ್ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲು ಹೈದರಾಬಾದ್ನ ವಿಶೇಷ ಸಿಬಿಐ ಕೋರ್ಟ್ ನಿರಾಕರಿಸಿದೆ.
ಜಗನ್ ಸಿಎಂ ಆಗಿರುವ ಕಾರಣ ಹಾಗೂ ಇತರ ಕಾರಣಗಳಿಂದ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ವಿನಾಯಿತಿ ನೀಡುವಂತೆ ಕೋರ್ಟ್ಗೆ ಜಗನ್ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಸಿಬಿಐ ನ್ಯಾಯಾಲಯ ಪ್ರಬಲ ಆಕ್ಷೇಪ ವ್ಯಕ್ತಪಡಿಸಿತು. ಸಿಬಿಐ ಆಕ್ಷೇಪಕ್ಕೆ ಮನ್ನಣೆ ನೀಡಿದ ಕೋರ್ಟ್ ಹಾಜರಾತಿಯಿಂದ ವಿನಾಯಿತಿ ನೀಡಲು ನಿರಾಕರಿಸಿತು.
2004- 2009 ರಲ್ಲಿ ಆಂಧ್ರಪ್ರದೇಶ ಸಿಎಂ ಆಗಿ ವೈ ಎಸ್ ರಾಜಶೇಖರ್ ರೆಡ್ಡಿ ಅವಧಿಯಲ್ಲಿ ಜಗನ್ ವಿವಿಧ ಕಂಪನಿಗಳಲ್ಲಿ ಅಕ್ರಮವಾಗಿ ಬಂಡವಾಳ ತೊಡಗಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಲ್ಲಿ ವಿಚಾರಣೆ ನಡೆಯುತ್ತಿದೆ.
ಅಕ್ರಮ ಹಣ ಗಳಿಕೆ ಸಂಬಂಧದ ಪ್ರಕರಣದಲ್ಲಿ ಜಗನ್ ಮೋಹನ್ ರೆಡ್ಡಿ, ಮೇ 2012 ರಿಂದ ಸೆಪ್ಟೆಂಬರ್ 2013 ರಿಂದ ಸುಮಾರು 15 ತಿಂಗಳು ಚಂಚಲಗುಡಾ ಜೈಲಿನಲ್ಲಿದ್ದರು. ಬಳಿಕ ಜಾಮೀನು ಪಡೆದು ಜಗನ್ ಹೊರ ಬಂದಿದ್ದರು.