ಆಂಧ್ರ ಪ್ರದೇಶ: ಶ್ರೀಶೈಲಂನ ಘಂತ ಮಠದಲ್ಲಿ ಮತ್ತೊಮ್ಮೆ ಚಿನ್ನದ ನಾಣ್ಯಗಳು ಸಿಕ್ಕಿವೆ. ಶ್ರೀ ಬ್ರಮರಾಮ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ವಾಯುವ್ಯ ಭಾಗದಲ್ಲಿ ಘಂತಾ ಮಠದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆ ವೇಳೆ ನೀರಿನ ಕಲ್ಲಿನ ಪದರಗಳ ನಡುವೆ 2 ಕ್ಯಾನ್ಗಳು ಕಂಡು ಬಂದಿವೆ. ಅವುಗಳನ್ನು ತೆರೆದು ನೋಡಿದಾಗ 15 ಚಿನ್ನದ ನಾಣ್ಯಗಳು, ಒಂದು ಚಿನ್ನದ ಉಂಗುರ ಮತ್ತು 17 ಬೆಳ್ಳಿ ನಾಣ್ಯಗಳು ಸಿಕ್ಕಿವೆ.
ದೇವಾಲಯದ ಇಒ ರಾಮರಾವ್, ತಹಶೀಲ್ದಾರ್ ರಾಜೇಂದ್ರ ಸಿಂಗ್, ಸಿಐ ರವೀಂದ್ರ ಚಿನ್ನದ ನಾಣ್ಯಗಳ ಸಂಶೋಧನೆಗೆ ಮುಂದಾಗಿದ್ದಾರೆ. ಈ ನಾಣ್ಯಗಳು ಬ್ರಿಟಿಷರ ಆಳ್ವಿಕೆಯಲ್ಲಿ ಚಾಲ್ತಿಯಲ್ಲಿದ್ದಿರಬಹುದು ಎಂದು ಇಒ ರಾಮರಾವ್ ಹೇಳಿದ್ದಾರೆ.
ಸಿಕ್ಕಿರುವ ಒಂದು ನಾಣ್ಯದಲ್ಲಿ ಹೈದರಾಬಾದ್‌ನ ಐಕಾನ್ ಚಾರ್ಮಿನಾರ್ ಚಿತ್ರ ಮುದ್ರಿಸಲಾಗಿದೆ. ಮೂರು ವರ್ಷಗಳ ಹಿಂದೆ ಈ ಘಂತ ಮಠದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಹತ್ತು ದಿನಗಳ ಹಿಂದೆ ಕೂಡ 245 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಈಗ ಮತ್ತೊಮ್ಮೆ ಚಿನ್ನದ ನಾಣ್ಯಗಳು ಪತ್ತೆಯಾದ ಕಾರಣ ಭಕ್ತರು ಆಶ್ಚರ್ಯಗೊಂಡಿದ್ದಾರೆ.