ಕಣ್ಣೂರು: ಕೋವಿಡ್ನಿಂದಾಗಿ ಇಡೀ ಜಗತ್ತೇ ಸ್ಥಗಿತಗೊಂಡಾಗ ಜನರು ಅನೇಕ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದರು. ಅದರಲ್ಲಿ ಭಾರತಕ್ಕೆ ಭೇಟಿ ನೀಡಿದ ಇಟಾಲಿಯನ್ ಪ್ರಜೆಯೂ ಸಹ ಅನೇಕ ರೀತಿಯಲ್ಲಿ ಸಂಕಷ್ಟ ಎದುರಿಸಿ ಕಳಾರಿ ಪಯಟ್ಟು ಕಲೆಯನ್ನು ಕಲಿತಿದ್ದಾರೆ.
ಸಾಕಷ್ಟು ಜನಪ್ರಿಯವಾಗಿರುವ ಸಮರ ಕಲೆ ‘ಕಳರಿ ಪಯಟ್ಟು’ ಕಲಿಯಲು ಅಷ್ಟು ಸುಲಭದ ಮಾತಲ್ಲ. ಆದ್ರೆ 47 ವರ್ಷದ ಇಟಾಲಿಯನ್ ಪ್ರಜೆ ಡೇವಿಡ್ ಈ ಕಲೆಯನ್ನು ಲಾಕ್ಡೌನ್ ಸಮಯದಲ್ಲಿ ಕಲಿತಿದ್ದಾರೆ.
ಡೇವಿಡ್ ಪೋಷಕರು ಇಟಾಲಿಯಲ್ಲಿ ಮಸಾಜ್ ಕೆಲಸ ಮಾಡುತ್ತಿದ್ದಾರೆ. ಕಲಾರಿ ಪಯಟ್ಟು ಕಲೆಯ ಗುರುಗಳಾದ ಪದ್ಮಶ್ರೀ ಮೀನಾಕ್ಷಿ ಅಮ್ಮಳ ಬಗ್ಗೆ ತಿಳಿಯಲು ಡೇವಿಡ್ ಕೇರಳದ ವಡಕಾರಕ್ಕೆ ಬಂದಿದ್ದರು. ಕಲಾರಿ ಪಯಟ್ಟು ಕಲೆಯ ಬಗ್ಗೆ ತಿಳಿದುಕೊಳ್ಳಲು ವಡಕಾರಕ್ಕೆ ಬಂದಾಗ ಡೇವಿಡ್ಗೆ ಲಾಕ್ಡೌನ್ ಸಿಲುಕಿಕೊಂಡರು.
ಕಳೆದ ಆಗಸ್ಟ್‌ನಲ್ಲಿ ತಮ್ಮೂರಿಗೆ ಹೋಗಲು ಟಿಕೆಟ್ ಖರೀದಿಸಿದ ಡೇವಿಡ್ ಕಲಾರಿ ಪಯಟ್ಟು ಕಲೆ ಅವರನ್ನು ಬಿಡಲಿಲ್ಲ. ಸಮರ ಕಲೆಯನ್ನು ಕಲಿಯುವ ಆಸೆ ಹೊಂದಿದ್ದ ಡೇವಿಡ್ ವಡಕಾರದಲ್ಲೇ ನೆಲಸಿದರು.
ಈ ವೇಳೆ, ಮೀನಾಕ್ಷಿ ಅಮ್ಮ ಖಾಲಿಯಿದ್ದ ತನ್ನ ಮಗಳ ಮನೆಯನ್ನು ಡೇವಿಡ್ಗೆ ವಾಸಿಸಲು ನೀಡಿದರು. ಪ್ರತಿನಿತ್ಯ ಡೇವಿಡ್ ಕಳಾರಿ ಪಯಟ್ಟು ಕಲೆಯನ್ನು ಕಲಿಯುವುದರಲ್ಲಿ ನಿರತರಾದರು. ಪೂರ್ಣ ಸಮಯ ಸಮರ ಕಲೆಯನ್ನು ಕಲಿಯುವುದಕ್ಕೆ ಉಪಯೋಗಿಸಿಕೊಂಡರು. ಕೊನೆಗೂ ಅವರು ಕಲಾರಿ ಪಯಟ್ಟು ಕಲೆಯನ್ನು ಕಲಿತರು.
ಅಲ್ಪಾವಧಿಯಲ್ಲಿಯೇ ಕಲೆ ಕಲಿತ ಡೇವಿಡ್ ತುಂಬಾ ತಮಾಷೆ ಮತ್ತು ಎಲ್ಲರೊಂದಿಗೆ ಉತ್ತಮ ಸ್ನೇಹದೊಂದಿಗೆ ಬೆರೆಯುತ್ತಾರೆ. ಕೆಲವು ಮಲಯಾಳಂ ಪದಗಳನ್ನು ಸಹ ಹೇಳುತ್ತಿದ್ದಾರೆ. ಅವರು ಮಲಯಾಳಂನಲ್ಲಿ ಹೊಸ ಪದಗಳನ್ನು ಕಲಿಯುತ್ತಿದ್ದು, ಹಾಡುಗಳನ್ನು ಕಲಿಯುವುದು ಕಷ್ಟ ಎನ್ನುತ್ತಾರೆ ಡೇವಿಡ್.
ತನ್ನ 20 ನೇ ವಯಸ್ಸಿನಲ್ಲಿ ವಿಶ್ವ ಪ್ರವಾಸ ಆರಂಭಿಸಿದ ಡೇವಿಡ್ ಶೀಘ್ರದಲ್ಲೇ ತಮ್ಮೂರಿಗೆ ಪ್ರಯಾಣ ಬೆಳಸಲಿದ್ದಾರೆ.