ETV Bharat / bharat

ಅಂಫಾನ್​​ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಮೃತರ ಸಂಖ್ಯೆ 86ಕ್ಕೆ ಏರಿಕೆ - ಪಶ್ಚಿಮ ಬಂಗಾಳದಲ್ಲಿ ಅಂಫಾನ್​

ಅಂಫಾನ್​ ಸೈಕ್ಲೋನ್​​ಗೆ ಪಶ್ಚಿಮ ಬಂಗಾಳದಲ್ಲಿ ಬಲಿಯಾದವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

Amphan
ಅಂಫಾನ್
author img

By

Published : May 23, 2020, 3:57 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಂಫಾನ್​ ಸೈಕ್ಲೋನ್​​ಗೆ ಬಲಿಯಾದವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ದೃಢಪಡಿಸಿದ್ದಾರೆ. ಇತ್ತ ಚಂಡಮಾರುತ ಅಪ್ಪಳಿಸಿ ಹೋಗಿ ಮೂರು ದಿನಗಳು ಕಳೆದರೂ ನೀರು, ವಿದ್ಯುತ್​ ಪೂರೈಕೆ ಇಲ್ಲದೇ ಜನರು ಪರದಾಡುತ್ತಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ 1.36 ಕೋಟಿ ಜನರು ಅಂಫಾನ್​ನಿಂದ ಸಮಸ್ಯೆಗೆ ತುತ್ತಾಗಿದ್ದಾರೆ. ಹಲವೆಡೆ ಮನೆ-ಮಠಗಳನ್ನು ಕಳೆದುಕೊಂಡ ಸುಮಾರು 6 ಲಕ್ಷ ಜನರಿಗೆ 5000 ನಿರಾಶ್ರಿತ ಶಿಬಿರಗಳನ್ನು ತೆರೆದಿದ್ದು, ಮೃತರ ಕುಟುಂಬಕ್ಕೆ ತಲಾ 2.5 ಲಕ್ಷ ರೂ. ಪರಿಹಾರವನ್ನು ಮಮತಾ ಬ್ಯಾನರ್ಜಿ ಸರ್ಕಾರ ಘೋಷಿಸಿದೆ. ಸೈಕ್ಲೋನ್ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ 1,000 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ್ದಾರೆ.

ಕೋಲ್ಕತ್ತಾ, ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕವನ್ನು ಪುನಃ ಸ್ಥಾಪಿಸಲಾಗಿದೆ. ಆದರೆ, ಅನೇಕ ಪ್ರದೇಶಗಳಲ್ಲಿ ನೀರು ಹಾಗೂ ವಿದ್ಯುತ್​ ಪೂರೈಕೆಯಿಲ್ಲದೇ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.