ETV Bharat / bharat

ಸಿಎಎ ಪರ-ವಿರೋಧದ ಪ್ರತಿಭಟನೆ ಉದ್ವಿಗ್ನ.. ಗೃಹ ಸಚಿವ ಶಾ-ಕೇಜ್ರಿವಾಲ್ ಮಹತ್ವದ ಸಭೆ..

ಈ ಪ್ರದೇಶವನ್ನು ಸಹಜ ಸ್ಥಿತಿಗೆ ತರಲು ಪೊಲೀಸ್, ಆಸ್ಪತ್ರೆ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗುತ್ತಿದೆ. "ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

home minister amith shah
ಗೃಹ ಸಚಿವ ಶಾ, ಕೇಜ್ರಿವಾಲ್ ಸಭೆ
author img

By

Published : Feb 25, 2020, 12:51 PM IST

ನವದೆಹಲಿ : ಸಿಎಎ ಪರ-ವಿರೋಧದ ಪ್ರತಿಭಟನೆ ದೆಹಲಿಯ ಈಶಾನ್ಯ ಜಿಲ್ಲೆಗಳಲ್ಲಿ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಂತತೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಗೃಹ ಸಚಿವ ಅಮಿತ್​, ಲೆಫ್ಟಿನೆಂಟ್​ ಗೌವರ್ನರ್​ ಅನಿಲ್ ಬೈಜಾಲ್, ಪೊಲೀಸ್ ಕಮಿಷನರ್​ ಅಮೂಲ್ಯ ಪಟ್ನಾಯಕ್, ಹಿರಿಯ ಕಾಂಗ್ರೆಸ್​ ನಾಯಕ ಸುಭಾಷ್ ಚೋಪ್ರಾ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಕೇಜ್ರಿವಾಲ್ ಸಭೆ ನಡೆಸಿ, ಮುಂದಿನ ಕ್ರಮಗಳ ಕುರಿತು ಚರ್ಚಿಸುತ್ತಿದ್ದಾರೆ.

home minister amith shah
ಗೃಹ ಸಚಿವ ಅಮಿತ್‌ ಶಾ ಜತೆಗೆ ದೆಹಲಿ ಸಿಎಂ ಕೇಜ್ರಿವಾಲ್ ಮಹತ್ವದ ಸಭೆ..

ಈಗಾಗಲೇ ಪೊಲೀಸ್ ಕಾನ್​ಸ್ಟೇಬಲ್​ ಸೇರಿದಂತೆ 7 ಜನರು ಈ ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಗಡಿ ಭಾಗದಿಂದ ನುಸುಳುಕೋರರು ಪ್ರವೇಶಿಸುತ್ತಿದ್ದಾರೆ. ಅಲ್ಲಿ ಹೆಚ್ಚಿನ ಭದ್ರತೆ ನೀಡುವ ಅವಶ್ಯಕತೆ ಇದೆ ಎಂದು ಗಡಿ ಕ್ಷೇತ್ರದ ಶಾಸಕರು ಹಾಗೂ ಜನರು ಮಾಹಿತಿ ನೀಡಿದ್ದಾರೆ ಎಂದರು.

ಮಂದಿರ, ಮಸೀದಿಗಳಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ. ಉದ್ವಿಗ್ನಗೊಳ್ಳುತ್ತಿರುವ ಪ್ರತಿಭಟನೆಯಲ್ಲಿ ಮನೆ, ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ ಎಂದು ತಿಳಿಸಿದ್ದಾರೆ.

  • Delhi: Union Home Minister Amit Shah is chairing a meeting with Delhi CM Arvind Kejriwal, Lt Governor Anil Baijal, Police Commissioner Amulya Patnaik, Congress leader Subhash Chopra, BJP leaders Manoj Tiwari & Rambir Singh Bidhuri and others. #NortheastDelhi pic.twitter.com/iz2ohNeSNo

    — ANI (@ANI) February 25, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.