ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎಲ್ಲ ಸಂಸದರ ಆಸನದಲ್ಲಿ ಒಂದಷ್ಟು ಮಾರ್ಪಾಡು ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಮೊದಲ ಸಾಲಿನ ಸೀಟುಗಳನ್ನು ಪಡೆದಿದ್ದಾರೆ.
ಇವರ ಜೊತೆಗೆ ಇನ್ನುಳಿದ ಸಚಿವರಾದ ನಿತಿನ್ ಗಡ್ಕರಿ, ಸದಾನಂದ ಗೌಡ, ನರೇಂದ್ರ ಸಿಂಗ್ ತೋಮರ್, ಅರ್ಜುನ್ ಮುಂಡಾ ಹಾಗೂ ಅರವಿಂದ ಸಾವಂತ್ ಸಹ ಮೊದಲ ಸಾಲಿನಲ್ಲೇ ಕುಳಿತುಕೊಳ್ಳಲಿದ್ದಾರೆ.
ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಹಿರಿಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹಾಗೂ ಡಿಎಂಕೆ ಮುಖಂಡ ಟಿ.ಆರ್.ಬಾಲು ಆಸನ ಪಡೆದಿದ್ದಾರೆ.
ಎಐಸಿಸಿ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಸೀಟಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೊದಲಿನಂತೆಯೇ ಎರಡನೇ ಸಾಲಿನಲ್ಲೇ ಕುಳಿತುಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿಗೆ ಮೊದಲ ಸಾಲಿನಲ್ಲಿ ಆಸನ ನೀಡುವಂತೆ ಒತ್ತಾಯಿಸಿತ್ತು ಎನ್ನಲಾಗಿದೆ. ಆದರೆ ಈ ಒತ್ತಾಯಕ್ಕೆ ಮನ್ನಣೆ ದೊರೆತಿಲ್ಲ.