ETV Bharat / bharat

28ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ RAF: ಅಮಿತ್ ಶಾ ಶುಭಾಶಯ - ಅಮಿತ್​ ಶಾ ಲೆಟೆಸ್ಟ್ ನ್ಯೂಸ್

28 ವಸಂತಗಳನ್ನು ಪೂರೈಸಿರುವ ಆರ್‌ಎಎಫ್ (ಕ್ಷಿಪ್ರ ಕಾರ್ಯಾಚರಣೆ ಪಡೆ) ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರಿಗೆ ನನ್ನ ಶುಭಾಶಯಗಳು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆರ್‌ಎಎಫ್ ಯಶಸ್ವಿಯಾಗಿದೆ. ಹಲವು ಮಾನವೀಯ ಕಾರ್ಯಗಳು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಆರ್‌ಎಎಫ್‌ನ ಬದ್ಧತೆಯು ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆಯೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Amit Shah
ಕೇಂದ್ರ ಗೃಹ ಸಚಿವ ಅಮಿತ್ ಶಾ
author img

By

Published : Oct 7, 2020, 12:17 PM IST

ನವದೆಹಲಿ: ರ‍್ಯಾಪಿಡ್​​ ಆ್ಯಕ್ಷನ್​​ ಫೋರ್ಸ್​​(ಆರ್‌ಎಎಫ್)ನ 28ನೇ ವಾರ್ಷಿಕೋತ್ಸವದ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವಲ್ಲಿ ಆರ್‌ಎಎಫ್ ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಅದು ಯಶಸ್ವಿಯಾಗಿದೆ. ಹಲವು ಮಾನವೀಯ ಕಾರ್ಯಗಳು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿಯೂ ಈ ಪಡೆಯ ಬದ್ಧತೆಯು ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆಯೆಂದು ಟ್ವೀಟ್‌ನಲ್ಲಿ ಗುಣಗಾನ ಮಾಡಿದ್ದಾರೆ.

  • Greetings to RAF personnel & their families on their 28th anniversary.

    RAF has distinguished itself in dealing with the challenges relating to law & order.

    Time and again, their commitment in several humanitarian works & UN peacekeeping missions has made India proud. @crpfindia

    — Amit Shah (@AmitShah) October 7, 2020 " class="align-text-top noRightClick twitterSection" data=" ">

ಆರ್‌ಎಎಫ್ ಬಗ್ಗೆ ಒಂದಿಷ್ಟು ಮಾಹಿತಿ:‌

ಕೇಂದ್ರ ಮೀಸಲು ಪಡೆಯ (ಸಿಆರ್‌ಪಿಎಫ್) ವಿಶೇಷ ವಿಭಾಗವಾದ ಆರ್‌ಎಎಫ್ ಅನ್ನು 1992ರ ಅಕ್ಟೋಬರ್​​ನಲ್ಲಿ ಆರಂಭಿಸಲಾಗಿದೆ. ಗಲಭೆಯಂತಹ ಉದ್ವಿಗ್ವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಯಂತ್ರಿಸಲು ಸಮಾಜದ ಎಲ್ಲಾ ವರ್ಗದವರಲ್ಲಿ ವಿಶ್ವಾಸವನ್ನು ಮೂಡಿಸಲು ಮತ್ತು ಆಂತರಿಕ ಭದ್ರತಾ ಕರ್ತವ್ಯವನ್ನು ನಿರ್ವಹಿಸಲು ಈ ಘಟಕ ನೆರವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.