ETV Bharat / bharat

ಚೀನಾದೊಂದಿಗಿನ ಉದ್ವಿಗ್ನತೆ:  ರಕ್ಷಣಾ ಸಂಬಂಧದ ಬಗ್ಗೆ ರಷ್ಯಾ, ಅಮೆರಿಕದತ್ತ ಭಾರತದ ಗಮನ

ಭಾರತವು ರಷ್ಯಾ ಜೊತೆಗಿನ ಮಾತುಕತೆ ವೇಳೆ ಪ್ರಮುಖವಾಗಿ ಪ್ರಸ್ತಾಪಿಸಿದ ಮಾಹಿತಿ ಹೊರಬಂದಿಲ್ಲವಾದರೂ, ಮಾತುಕತೆ ನಡೆದಿರಬಹುದಾದ ವಿಷಯಗಳ ಪೈಕಿ ಎಸ್ - 400 ಟ್ರಯಂಫ್ ದೀರ್ಘ-ಶ್ರೇಣಿಯ ವಾಯು ಕ್ಷಿಪಣಿ ವ್ಯವಸ್ಥೆಯನ್ನು ಆದಷ್ಟು ಬೇಗ ಪಡೆದುಕೊಳ್ಳುವ ಬಗ್ಗೆ ಪ್ರಮುಖವಾಗಿ ಮಾತುಕತೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.

India
ಚೀನಾ
author img

By

Published : Jun 29, 2020, 7:53 AM IST

Updated : Jun 29, 2020, 12:40 PM IST

ನವದೆಹಲಿ: ಚೀನಾದ ಒಂದು ನಗರದ ಮೂಲಕ ಹರಡಿ ಜಾಗತಿಕವಾಗಿ ಜನರ ಪ್ರಾಣ ಹಿಂಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಮಧ್ಯೆ, ಚೀನಾದ ವಿಸ್ತರಣಾವಾದಿ ಮಹತ್ವಾಕಾಂಕ್ಷೆಗಳು ಮುನ್ನೆಲೆಗೆ ಬರುತ್ತಿದೆ. ಈ ಹಿನ್ನೆಲೆ ಲಡಾಖ್‌ನಲ್ಲಿ ನಡೆದ ಭಾರತ - ಚೀನಾ ಸೇನೆ ನಡುವಿನ ಸಂಘರ್ಷ ವಿಶ್ವದ ಗಮನ ಸೆಳೆದಿದ್ದಲ್ಲದೇ ಕಳವಳಕ್ಕೂ ಕಾರಣವಾಗಿದೆ. ಈ ಬೆನ್ನಲ್ಲೇ ವಿಶ್ವದ ಪ್ರಮುಖ ಶಕ್ತಿಗಳಾದ ರಷ್ಯಾ ಮತ್ತು ಅಮೆರಿಕ ದೇಶಗಳ ಜೊತೆಗಿನ ಭಾರತದ ರಕ್ಷಣಾ ಸಂಬಂಧಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಇನ್ನು ರಷ್ಯಾ ದೇಶದ 2ನೇ ವಿಶ್ವ ಸಮರದ 75 ನೇ ವಿಜಯ ದಿನದ ಸಮಾರಂಭದಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಾರದ ಆರಂಭದಲ್ಲಿ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಅಮೆರಿಕ ದೇಶದ ಸೇನೆಯ ಕಾರ್ಯದರ್ಶಿ ಮೈಕ್ ಪೊಂಪಿಯೊ, ಚೀನಾದಿಂದ ಭಾರತ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಸಾಮಾನ್ಯವಾಗಿ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಎದುರಾಗುತ್ತಿರುವ ದಾಳಿ ಬೆದರಿಕೆ ಎದುರಿಸಲು ಅಮೆರಿಕ ಸೈನಿಕರನ್ನು ಯುರೋಪಿನಿಂದ ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದನ್ನ ಇಲ್ಲಿ ಪ್ರಮುಖವಾಗಿ ಗಮನಿಸಬಹುದು.

ಜೂನ್ 22ರಿಂದ 24ರ ಮಾಸ್ಕೋ ಭೇಟಿಯ ಸಮಯದಲ್ಲಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ರಷ್ಯಾದ ಉಪ ಪ್ರಧಾನಿ ಯೂರು ಬೊರಿಸೊವ್ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಟ್ವೀಟ್ ಮಾಡಿದ ಅವರು, 'ಉಪ ಪ್ರಧಾನ ಮಂತ್ರಿ ಯೂರಿ ಬೊರಿಸೊವ್ ಅವರೊಂದಿಗಿನ ನನ್ನ ಚರ್ಚೆಗಳು ಬಹಳ ಸಕಾರಾತ್ಮಕ ಮತ್ತು ಉತ್ಪಾದಕತೆಯಿಂದ ಕೂಡಿದ್ದವು ಎಂದು ತಿಳಿಸಿದ್ದರು. ಈ ಸಭೆ ಸಂದರ್ಭ ಎರಡು ದೇಶಗಳ ನಡುವೆ ಈಗ ಇರುವ ಪ್ರಮುಖ ಒಪ್ಪಂದಗಳನ್ನು ಹೀಗೆ ಮುಂದುವರಿಸುವುದು ಮತ್ತು ಮುಂದುವರಿಕೆ ಮಾತ್ರವಲ್ಲ, ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕಡಿಮೆ ಸಮಯದಲ್ಲಿ ಮುಂದೆ ತೆಗೆದುಕೊಳ್ಳಲಾಗುವುದು' ಎಂಬ ಭರವಸೆ ರಷ್ಯಾ ಕಡೆಯಿಂದ ನಮಗೆ ಸಿಕ್ಕಿದೆ ಎಂದು ರಾಜನಾಥ್‌ ಸಿಂಗ್ ತಿಳಿಸಿದ್ದರು.

ಇದರ ಜೊತೆಗೆ, ಭಾರತದ ಎಲ್ಲ ಪ್ರಸ್ತಾಪಗಳಿಗೆ ರಷ್ಯಾ ದೇಶದ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಹ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ರಾಜನಾಥ್‌ ಸಿಂಗ್ ಮತ್ತು ಬೋರಿಸೊವ್, ವಿಜ್ಞಾನ ಮತ್ತು ತಂತ್ರಜ್ಞಾನದ ಭಾರತ-ರಷ್ಯಾ ಉನ್ನತ ಮಟ್ಟದ ಸಮಿತಿಯ ಸಹ-ಅಧ್ಯಕ್ಷರಾಗಿದ್ದಾರೆ.

ಭಾರತವು ರಷ್ಯಾ ಜೊತೆಗಿನ ಮಾತುಕತೆ ವೇಳೆ, ಪ್ರಮುಖವಾಗಿ ಪ್ರಸ್ತಾಪಿಸಿದ ಮಾಹಿತಿ ಹೊರಬಂದಿಲ್ಲವಾದರೂ, ಮಾತುಕತೆ ನಡೆದಿರಬಹುದಾದ ವಿಷಯಗಳ ಪೈಕಿ ಎಸ್ -400 ಟ್ರಯಂಫ್ ದೀರ್ಘ-ಶ್ರೇಣಿಯ ವಾಯು ಕ್ಷಿಪಣಿ ವ್ಯವಸ್ಥೆಯನ್ನು ಆದಷ್ಟು ಬೇಗ ಪಡೆದುಕೊಳ್ಳುವ ಬಗ್ಗೆ ಭಾರತ ಪ್ರಮುಖವಾಗಿ ಮಾತುಕತೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.

2018 ರಲ್ಲಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾ $ 5.4 ಬಿಲಿಯನ್ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಆದರೆ, ಅಮೆರಿಕ ದೇಶವು ಎದುರಾಳಿಗಳ ನಿರ್ಬಂಧಗಳ ಕಾಯ್ದೆ (ಸಿಎಎಟಿಎಸ್ಎ) ಕಾನೂನನ್ನು 2018 ರ ಜನವರಿಯಲ್ಲಿ ಜಾರಿಗೆ ಬಂದ ನಂತರ ಎಸ್ -400 ಕ್ಷಿಪಣಿ ಒಪ್ಪಂದವು ಹೆಚ್ಚು ಊಹಾಪೋಹಗಳಿಗೆ ಕಾರಣವಾಗಿತ್ತು. ರಷ್ಯಾ, ಇರಾನಿಯನ್ ಮತ್ತು ಉತ್ತರ ಕೊರಿಯಾದ ರಕ್ಷಣಾ ಕಂಪನಿಗಳೊಂದಿಗೆ ವ್ಯಾಪಾರ ಮಾಡುವ ದೇಶಗಳನ್ನು ಸಿಎಎಟಿಎಸ್ಎ ಕಾಯ್ದೆ ಮಾಡುವ ನಿಯಮ ಹೊಂದಿತ್ತು.

ಉಕ್ರೇನ್ ಮತ್ತು ಸಿರಿಯಾದಲ್ಲಿನ ಯುದ್ಧಗಳಲ್ಲಿ ಮಾಸ್ಕೋದ ನಿರಂತರ ಪಾಲ್ಗೊಳ್ಳುವಿಕೆ ಮತ್ತು 2016 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಆರೋಪಗಳ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ಸಿಡಿಮಿಯಗೊಂಡಿದ್ದ ಅಮೆರಿಕದ ಸೆನೆಟರ್‌ಗಳ ಗುಂಪು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.

ಕಳೆದ ವರ್ಷ ಜೂನ್‌ನಲ್ಲಿ, ಆಗಿನ ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಪ್ರಧಾನ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಹೌಸ್ ಫಾರಿನ್ ಅಫೇರ್ಸ್ ಉಪಸಮಿತಿಯ ಮುಂದೆ ಅಧಿಕೃತ ಸಾಕ್ಷ್ಯ ಇಟ್ಟು ಎಸ್ -400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದರಿಂದ ಭಾರತ-ಅಮೆರಿಕ ನಡುವಿನ ಮಿಲಿಟರಿ ಸಂಬಂಧಗಳು ಮಿತಿಗೊಳ್ಳಬಹುದು ಎಂದು ಹೇಳಿದ್ದರು.

"ಒಂದು ನಿರ್ದಿಷ್ಟ ಹಂತದಲ್ಲಿ, ಪಾಲುದಾರಿಕೆಗಳ ಬಗ್ಗೆ ಒಂದು ಕಾರ್ಯತಂತ್ರದ ಆಯ್ಕೆಯನ್ನು ಮಾಡಬೇಕಾಗಿದೆ ಮತ್ತು ಒಂದು ದೇಶವು ಯಾವ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ವೇದಿಕೆಗಳನ್ನು ಅಳವಡಿಸಿಕೊಳ್ಳಲಿದೆ ಎಂಬುದರ ಕುರಿತು ಕಾರ್ಯತಂತ್ರದ ಆಯ್ಕೆ ಮಾಡಬೇಕಾಗಿದೆ" ಎಂದು ವೆಲ್ಸ್ ಹೇಳಿದ್ದಾರೆ.

ಈ ಮಧ್ಯೆ, ಅಮೆರಿಕ ದೇಶವು ಭಾರತಕ್ಕೆ ಎಂಐಎಂ -104 ಎಫ್ ಪೇಟ್ರಿಯಾಟ್ (ಪಿಎಸಿ -3) ಮೇಲ್ಮೈಯಿಂದ ಗಾಳಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ವ್ಯವಸ್ಥೆಯನ್ನು ನೀಡುವ ಪ್ರಸ್ತಾಪ ಇಟ್ಟಿತ್ತೆಂಬ ವರದಿಯಾಗಿದ್ದರೂ, ಭಾರತ ರಷ್ಯಾದೊಂದಿಗೆ ಎಸ್ -400 ಸಿಸ್ಟಮ್ ಒಪ್ಪಂದದೊಂದಿಗೆ ಮುಂದುವರಿಯಲು ನಿರ್ಧರಿಸಿತು.

ತಜ್ಞರ ಪ್ರಕಾರ, ಎಸ್ -400 ವಾಯು ರಕ್ಷಣಾ ಕ್ಷಿಪಣಿಯು ವಿಶ್ವದಲ್ಲೇ ಲಭ್ಯವಿರುವ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಬಹುಕ್ರಿಯಾತ್ಮಕ ರಾಡಾರ್, ಸ್ವಾಯತ್ತ ಪತ್ತೆ(autonomous detection) ಮತ್ತು ಗುರಿ ವ್ಯವಸ್ಥೆಗಳು(targeting systems), ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆಗಳು, ಲಾಂಚರ್‌ಗಳು ಮತ್ತು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಸಂಯೋಜಿಸುತ್ತದೆ. ಲೇಯರ್ಡ್ ಡಿಫೆನ್ಸ್ (layered defence)‌ ರಚಿಸಲು ಇದು ಮೂರು ರೀತಿಯ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ.

"ಈ ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ವಿಮಾನ, ಮಾನವರಹಿತ ವೈಮಾನಿಕ ವಾಹನಗಳು (ಯುಎವಿಗಳು), ಮತ್ತು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಸೇರಿದಂತೆ ಎಲ್ಲಾ ರೀತಿಯ ವೈಮಾನಿಕ ಗುರಿಗಳನ್ನು 400 ಕಿ.ಮೀ ವ್ಯಾಪ್ತಿಯಲ್ಲಿ 30 ಕಿ.ಮೀ.ವರೆಗಿನ ಎತ್ತರದಲ್ಲಿ ತೊಡಗಿಸಿಕೊಳ್ಳಬಹುದು. ಸಿಸ್ಟಮ್ ಏಕಕಾಲದಲ್ಲಿ 36 ಗುರಿಗಳನ್ನು ತೊಡಗಿಸಿಕೊಳ್ಳಬಹುದು ”ಎಂದು ಸೈನ್ಯ-ತಂತ್ರಜ್ಞಾನ.ಕಾಮ್(the army-technology.com) ವೆಬ್‌ಸೈಟ್ ವಿವರಿಸುತ್ತದೆ.

"ಎಸ್ - 400 ಹಿಂದಿನ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳಿಗಿಂತ ಎರಡು ಪಟ್ಟು ಪರಿಣಾಮಕಾರಿಯಾಗಿದೆ ಮತ್ತು ಐದು ನಿಮಿಷಗಳಲ್ಲಿ ಇದನ್ನ ನಿಯೋಜನೆ ಮಾಡಬಹುದು. ಇದನ್ನು ವಾಯುಪಡೆ, ಸೇನೆ ಮತ್ತು ನೌಕಾಪಡೆಯ ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ವಾಯು ರಕ್ಷಣಾ ಘಟಕಗಳಿಗೂ ಸಂಯೋಜಿಸಬಹುದು. ”

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾರತ ರಷ್ಯಾದಿಂದ ಎಸ್ - 400 ಖರೀದಿಸುತ್ತಿರುವ ವಿಷಯದ ಬಗ್ಗೆ ಅಮೆರಿಕದೊಂದಿಗೆ ಚರ್ಚಿಸಿದ್ದಾರೆ ಮತ್ತು “ಸಮಂಜಸವಾಗಿ ಮನವರಿಕೆಯಾಗಿದೆ” ಎಂದು ತನ್ನ ಗ್ರಹಿಕಾ ಸಾಮರ್ಥ್ಯಕ್ಕೆ ತಕ್ಕಂತೆ ನಂಬಿದ್ದೇನೆ ಎಂದು ಹೇಳಿದ್ದರು.

"ಈ ನಿರ್ದಿಷ್ಟ ವಹಿವಾಟು ನಮಗೆ ಏಕೆ ಮುಖ್ಯವಾಗಿದೆ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂಬುದು ನನ್ನ ಆಶಯವಾಗಿದೆ, ಆದ್ದರಿಂದ ನಿಮ್ಮ ಪ್ರಶ್ನೆಯು ನನಗೆ ಕಾಲ್ಪನಿಕವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ರಷ್ಯಾದ ಪತ್ರಕರ್ತನ ಪ್ರಶ್ನೆಗೆ ಜೈಶಂಕರ್ ಉತ್ತರಿಸಿದ್ದರು.

ಈ ಮಧ್ಯೆ, ಸಿಎಎಟಿಎಸ್‌ಎ ಅಡಿ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸದಿರುವ ಬಗ್ಗೆ ಅಮೆರಿಕವು ಕಳೆದ ನವೆಂಬರ್‌ ತಿಂಗಳಲ್ಲೇ ಸುಳಿವು ನೀಡಿತು, ಅಮೆರಿಕದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು "ಸಿಎಎಟಿಎಸ್ಎ ನಿರ್ಬಂಧಗಳ ಸಮಯವನ್ನು ನಿಗದಿಪಡಿಸಿಲ್ಲ ಅಥವಾ ಸಂಪೂರ್ಣವಲ್ಲ" ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೂಲಕ ಭಾರತಕ್ಕೆ ರಿಲೀಫ್‌ ಕೊಟ್ಟಿದ್ದರು. ಆದರೂ, ರಷ್ಯಾವು ಸ್ನೂಪ್ ಮಾಡುವುದನ್ನು ತಡೆಯಲು ಭಾರತವು ರಕ್ಷಣಾ ತಂತ್ರಜ್ಞಾನವನ್ನು ಬಿಗಿಗೊಳಿಸಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಇಮ್ಯಾಜಿಂಡಿಯಾ ಇನ್ಸ್ಟಿಟ್ಯೂಟ್ ಅಧ್ಯಕ್ಷ ಮತ್ತು ಅಮೆರಿಕ-ಇಂಡಿಯಾ ಪೊಲಿಟಿಕಲ್ ಆಕ್ಷನ್ ಕಮಿಟಿಯ ಸ್ಥಾಪಕ ಸದಸ್ಯ ಮತ್ತು ನಿರ್ದೇಶಕ ರಾಬಿಂದರ್ ಸಚ್ ದೇವ್ ಅವರ ಪ್ರಕಾರ, ಸಿಎಎಟಿಎಸ್ಎ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಯೋಚಿಸಿ ಅಮೆರಿಕವು ಭಾರತಕ್ಕೆ ಎಸ್ -400 ಒಪ್ಪಂದದ ವಿನಾಯ್ತಿಯನ್ನು ಹೇಳಿದರು ಅಥವಾ ಹೇಳದಿರುವವರಿಗೆ ಮುಂದುವರಿಯಲು ಅವಕಾಶದಂತೆ ನೀಡಿದಂತೆ ಅಥವಾ ಪರೋಕ್ಷ ಸಮ್ಮತಿ ಸೂಚಿಸಿದಂತೆ ಎಂದು ಹೇಳಿದ್ದಾರೆ.

"ಆದರೆ, ಭವಿಷ್ಯದಲ್ಲಿ ಭಾರತವು ಸಿಎಎಟಿಎಸ್ಎಯ ನಿಬಂಧನೆಗಳ ಪ್ರಕಾರ ರಷ್ಯಾದಿಂದ ತನ್ನ ರಕ್ಷಣಾ ಖರೀದಿಗಳನ್ನು ಕಡಿತಗೊಳಿಸಬೇಕು ಎಂಬ ಸಂದೇಶವನ್ನು ನೀಡಲಾಗಿದೆ" ಎಂದು ರಾಜನಾಥ್ ಸಿಂಗ್ ರಷ್ಯಾ ಭೇಟಿಯ ಕುರಿತಂತೆ ಸಚ್ ದೇವ್ ಈಟಿವಿ ಭಾರತ್​ಗೆ ತಿಳಿಸಿದರು.

ಕ್ಷಿಪಣಿ ಕುರಿತಾದ ಮಾತುಕತೆಯ ಸಮಯದಲ್ಲಿ, ಆಗಿನ ಚಾಲ್ತಿಯಲ್ಲಿದ್ದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಸ್ -400 ಒಪ್ಪಂದವನ್ನು ಮುಂದುವರಿಸಲು ಅಮೆರಿಕ ಅನುಮತಿ ನೀಡಿತು ಎಂದು ಸಹ ಅವರು ಹೇಳಿದ್ದಾರೆ. ಆದರೆ ಅವರು (ಅಮೆರಿಕ) ಇರಾನ್ ಮೇಲಿನ ವಾಷಿಂಗ್ಟನ್ ನಿರ್ಬಂಧಗಳನ್ನು ಸಂಪೂರ್ಣವಾಗಿ ಅನುಸರಿಸುತ್ತೇವೆ ಎಂದು ಭಾರತದಿಂದ ಭರವಸೆ ಪಡೆದಿದೆ" ಎಂದು ಸಚ್ ದೇವ್ ಹೇಳಿದ್ದಾರೆ.

2018 ರಲ್ಲಿ, ಅಮೆರಿಕವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರೊಂದಿಗೆ (ಪಿ 5) ಮಾಡಿಕೊಂಡಿದ್ದ ಟೆಹ್ರಾನ್ ಜಂಟಿ ಸಮಗ್ರ ಯೋಜನೆ (ಜೆಸಿಪಿಒಎ) ಒಪ್ಪಂದದಿಂದ ಹೊರಬಂದಿತು. ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟದ ಮತ್ತು ಪರಮಾಣು ಆರೋಪದ ಮೇಲೆ ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿತು. ಇದರ ಬೆನ್ನಲ್ಲೇ, ಭಾರತವು ಕಳೆದ ವರ್ಷದಿಂದ ತನ್ನ ಎರಡನೇ ಅತಿದೊಡ್ಡ ಸರಬರಾಜುದಾರ ಇರಾನ್‌ನಿಂದ ತೈಲ ಆಮದು ಮಾಡುವುದನ್ನು ನಿಲ್ಲಿಸಿತು. ಆದರೂ, ಆಗ್ನೇಯ ಇರಾನ್‌ನ ಚಬಹಾರ್ ಬಂದರಿನ ನವದೆಹಲಿಯ ಅಭಿವೃದ್ಧಿಗೆ ಅಮೆರಿಕವು ಆಕ್ಷೇಪ ವ್ಯಕ್ತಪಡಿಸಿಲ್ಲ. ಭಾರತ, ಅಫ್ಘಾನಿಸ್ತಾನ ಮತ್ತು ಇರಾನ್ ಜೊತೆಗೆ ಜಂಟಿಯಾಗಿ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ಯಲ್ಲಿ ಪ್ರಮುಖ ಕೊಂಡಿಯಾಗಲಿದೆ, ಇದು 7,200 ಕಿ.ಮೀ ಉದ್ದದ ಬಹು-ಮೋಡಲ್ ನೆಟ್‌ವರ್ಕ್, ಹಡಗು, ರೈಲು ಮತ್ತು ರಸ್ತೆ ಮಾರ್ಗಗಳು ಭಾರತ, ಇರಾನ್, ಅಫ್ಘಾನಿಸ್ತಾನ, ಅರ್ಮೇನಿಯಾ, ಅಜೆರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಣೆ ವ್ಯವಸ್ಥೆಯಾಗಲಿದೆ. ಪಾಕಿಸ್ತಾನವನ್ನು ಬೈಪಾಸ್ ಮಾಡಿ, ಅಲ್ಲಿ ಬಂದರು ಮತ್ತು ಆ ದೇಶಕ್ಕೆ ಪ್ರವೇಶವನ್ನು ನೀಡಲು ಅಲ್ಲಿಂದ ಅಫ್ಘಾನಿಸ್ತಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಭಾರತ $ 500 ಮಿಲಿಯನ್ ಹೂಡಿಕೆ ಮಾಡುತ್ತಿದೆ.

ಇದೀಗ, ಜೂನ್ 15-16ರ ಮಧ್ಯರಾತ್ರಿಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿಯ ಸಾವಿಗೆ ಕಾರಣವಾದ ಭಾರತ ಮತ್ತು ಚೀನಾ ನಡುವಿನ ಮಧ್ಯಕಾಲೀನ ಶೈಲಿಯ ಸಂಘರ್ಷದ ಸಂದರ್ಭದಲ್ಲಿ, ರಷ್ಯಾ ಮತ್ತು ಅಮೆರಿಕ ಎರಡೂ ದೇಶಗಳ ಜೊತೆಗಿನ ಭಾರತದ ರಕ್ಷಣಾ ಸಂಬಂಧಗಳು ಭೂ-ಕಾರ್ಯತಂತ್ರದ ಪ್ರಾಮುಖ್ಯತೆಯ ದೃಷ್ಟಿಯಿಂದ ಅತ್ಯಂತ ಕೇಂದ್ರೀಕೃತ ಅಂಶವಾಗಿವೆ.

ರಾಜನಾಥ್​‌ ಸಿಂಗ್‌ ರಷ್ಯಾ ಭೇಟಿಯ ಸಂದರ್ಭದಲ್ಲಿ, ಗುರುವಾರ, ವಿದೇಶಾಂಗ ಅಟ್ಲಾಂಟಿಕ್ ಕಾರ್ಯಸೂಚಿಯನ್ನು ರೂಪಿಸುವ ಪ್ರಮುಖ ವೇದಿಕೆಯಾದ ಬ್ರಸೆಲ್ಸ್ ಫೋರಂನಲ್ಲಿಅಮೆರಿಕ ವಿದೇಶಾಂಗ ಕಾರ್ಯದರ್ಶಿ ಪೊಂಪಿಯೊ, ಮುಕ್ತ ಪ್ರಪಂಚದ ಅಡಿ ಮಾಡಿದ ಎಲ್ಲ ಪ್ರಗತಿಯನ್ನು ರದ್ದುಗೊಳಿಸಲು ಚೀನಾ ಬಯಸಿದೆ. ಅದಕ್ಕಾಗಿಯೇ ಅಮೆರಿಕವು ಯುರೋಪಿನಲ್ಲಿ ನಿಯೋಜಿಸಿದ್ದ ತನ್ನ ಸೈನ್ಯವನ್ನು ಕಡಿಮೆಗೊಳಿಸುತ್ತಿದ್ದು, ಅವರನ್ನು ವಿಶ್ವದ ಇತರ ಭಾಗಗಳಿಗೆ ಮರು ನಿಯೋಜಿಸುತ್ತಿದೆ ಎಂದಿದ್ದಾರೆ.

ಹುತಾತ್ಮರಾದ ಭಾರತೀಯ ಸೈನಿಕರ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅವರು, “ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಚೀನಾ) ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವಾದ ಭಾರತದೊಂದಿಗೆ ಗಡಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದು ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣಗೊಳಿಸುತ್ತಿದೆ ಮತ್ತು ಕಾನೂನುಬಾಹಿರವಾಗಿ ಅಲ್ಲಿ ಹೆಚ್ಚಿನ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳುತ್ತಿದೆ, ಪ್ರಮುಖ ಸಮುದ್ರ ಪಥಗಳಿಗೆ ಬೆದರಿಕೆ ಹಾಕುತ್ತಿದೆ. ” ಎಂದು ಹೇಳಿದ್ದಾರೆ.

ಲಡಾಖ್‌ನಲ್ಲಿ ಚೀನಾದ ಸೈನ್ಯವು ಭಾರತೀಯ ಭೂಪ್ರದೇಶಕ್ಕೆ ನುಸುಳುತ್ತಿರುವುದು ಈ ಪ್ರದೇಶದ ಬೀಜಿಂಗ್‌ನ ಪ್ರಾದೇಶಿಕ ಮಹತ್ವಾಕಾಂಕ್ಷೆಗಳಿಗೆ ಇತ್ತೀಚಿನ ಉದಾಹರಣೆಯಾಗಿದೆ ಎಂದು ಇದು ಎತ್ತಿ ತೋರಿಸುತ್ತದೆ. ವೀಕ್ಷಕರ ಪ್ರಕಾರ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವುಹಾನ್ ನಗರದಿಂದ ಪ್ರಾರಂಭವಾಗಿ ವಿಶ್ವಕ್ಕೆ ವ್ಯಾಪಿಸಿದ ಮಾರಣಾಂತಿಕ ಕೋವಿಡ್ -19 ಸಾಂಕ್ರಾಮಿಕ ರೋಗದ ವೈರಸ್‌ ಬಗ್ಗೆ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸದ ಕಾರಣ ಬೀಜಿಂಗ್‌ ವಿರುದ್ಧ ವಿಶ್ವಾದ್ಯಂತ ಭಾರೀ ಟೀಕೆ ಕೇಳಿಬರುತ್ತಿದೆ. ಈ ಪರಿಸ್ಥಿತಿಯ ದಿಕ್ಕು ತಪ್ಪಿಸುವ ತಂತ್ರವಾಗಿ ಚೀನಾ ಲಡಾಖ್‌ ಗಡಿ ಕ್ಯಾತೆ ಶುರು ಮಾಡಿದೆ.

ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಜಪಾನಿನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ವಾಪಿಸಿಕೊಂಡಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡಲು ಪ್ರಯತ್ನಿಸುವ ಕ್ವಾಡ್​ನ ಭಾಗವಾಗಿವೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹೆಜ್ಜೆಗುರುತು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಆಕ್ರಮಣವನ್ನು ಗಮನಿಸಿದರೆ ಇದು ಮಹತ್ವದ್ದಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿನ ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ದ್ವೀಪಗಳ ಗುಂಪುಗಳ ಕುರಿತು ಚೀನಾ ಈ ಪ್ರದೇಶದ ಇತರ ದೇಶಗಳೊಂದಿಗೆ ವಿವಾದದಲ್ಲಿ ಸಿಲುಕಿದೆ. ಬ್ರೂನಿ, ಮಲೇಷ್ಯಾ, ಫಿಲಿಪೈನ್ಸ್, ತೈವಾನ್ ಮತ್ತು ವಿಯೆಟ್ನಾಂ ರಾಷ್ಟ್ರಗಳು ಸ್ಪ್ರಾಟ್ಲಿ ದ್ವೀಪಗಳ ಮೇಲಿನ ಇತರ ಹಕ್ಕು ಸಾಧಿಸುತ್ತಿರುವ ದೇಶಗಳಾಗಿದ್ದರೆ, ಪ್ಯಾರಾಸೆಲ್ ದ್ವೀಪಗಳನ್ನು ವಿಯೆಟ್ನಾಂ ಮತ್ತು ತೈವಾನ್ ಸಹ ಪ್ರತಿಪಾದಿಸುತ್ತವೆ.

ಇನ್ನು, ವಿಶ್ವದ ಅತ್ಯಂತ ಬ್ಯುಸಿಯಾದ ವಾಣಿಜ್ಯ ಹಡಗು ಮಾರ್ಗಗಳಲ್ಲಿ ಒಂದಾದ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ, ಫಿಲಿಪೈನ್ಸ್ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು 2016 ರಲ್ಲಿ ಹೇಗ್ ಮೂಲದ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ತೀರ್ಪು ನೀಡಿತು.

ಫಿಲಿಪಿನ್ಸ್​​​​​ನ ಮೀನುಗಾರಿಕೆ ಮತ್ತು ಪೆಟ್ರೋಲಿಯಂ ಪರಿಶೋಧನೆಗೆ ಚೀನಾ ಹಸ್ತಕ್ಷೇಪ ಮಾಡುತ್ತಿದೆ, ನೀರಿನಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವುದು ಮತ್ತು ಚೀನಾದ ಮೀನುಗಾರರು ವಲಯದಲ್ಲಿ ಮೀನುಗಾರಿಕೆ ಮಾಡುವುದನ್ನು ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂದು ನ್ಯಾಯಾಲಯ ಆರೋಪಿಸಿದೆ. ಮತ್ತೊಮ್ಮೆ, ಈ ವಾರ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳು, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪುನರಾವರ್ತಿತ ಕಡಲ ಕಾನೂನು ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತು ಮುಳುಗಿದ್ದರೂ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಬೇಜವಾಬ್ದಾರಿ ಕೃತ್ಯಗಳು ಇನ್ನೂ ನಡೆಯುತ್ತಿವೆ, ಇದು ನಮ್ಮ ಪ್ರದೇಶ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಸುರಕ್ಷತೆ ಮತ್ತು ಸ್ಥಿರತೆಗೆ ಪರಿಣಾಮ ಬೀರುತ್ತದೆ" ಎಂದು ವಿಯೆಟ್ನಾಂನ ಪ್ರಧಾನಿ ನ್ಗುಯೇನ್ ಫುವಾನ್ ಫುಕ್, ಅಸೋಸಿಯೇಷನ್ ಆಫ್ ಆಗ್ನೇಯ ಏಷ್ಯನ್ ರಾಷ್ಟ್ರಗಳ (ಆಸಿಯಾನ್) ನಾಯಕರ ವಾಸ್ತವ ಸಭೆಯಲ್ಲಿ ಹೇಳಿದ್ದಾರೆ.

ದಕ್ಷಿಣ ಚೀನಾ ಸಮುದ್ರದ ಹೊರತಾಗಿ, ಚೀನಾ ಇತ್ತೀಚೆಗೆ ಜಪಾನ್ ಮತ್ತು ತೈವಾನ್‌ನೊಂದಿಗಿನ ಪ್ರಾದೇಶಿಕ ವಿವಾದಗಳಲ್ಲಿ ಮತ್ತೆ ಭಾಗಿಯಾಗಿದೆ. ಈ ತಿಂಗಳ ಆರಂಭದಲ್ಲಿ, 67 ಚೀನಾ ಸರ್ಕಾರಿ ಹಡಗುಗಳನ್ನು ಪೂರ್ವ ಚೀನಾ ಸಮುದ್ರದಲ್ಲಿ ಸೆನ್ಕಾಕು ದ್ವೀಪಗಳ ಬಳಿ ನಿಯೋಜಿಸಿತ್ತು ಎಂದು ಜಪಾನ್‌ನ ಕೋಸ್ಟ್‌ಗಾರ್ಡ್ ಆರೋಪಿಸಿತ್ತು-ಈ ದ್ವೀಪವನ್ನ ಚೀನಾದಿಂದ ದಿಯೌ ದ್ವೀಪಗಳು ಎಂದು ಕರೆಯಲಾಗಿದೆ ಎಂದು ವರದಿ ಮಾಡಲಾಗಿದೆ. ಈ ದ್ವೀಪಗಳಲ್ಲಿ ಬೀಜಿಂಗ್ ಮತ್ತು ಟೋಕಿಯೊ ಎರಡೂ ರಾಷ್ಟ್ರಗಳು ಹಕ್ಕು ಸಾಧಿಸಿವೆ.

ಈ ಮಧ್ಯೆ, ಇತ್ತ, ಚೀನಾದ ವಾಯುಪಡೆಯ ವಿಮಾನಗಳು ಈ ತಿಂಗಳಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ತೈವಾನೀಸ್ ವಾಯುಪ್ರದೇಶಕ್ಕೆ ನುಸುಳಿದ್ದು, ಪೂರ್ವ ಏಷ್ಯಾದ ರಾಷ್ಟ್ರವು ತನ್ನ ಜೆಟ್‌ಗಳನ್ನು ಟೇಕ್‌ ಆಫ್ ಸಕ್ರಿಯ ಪ್ರತಿಕ್ರಿಯೆಗಳನ್ನು ನೀಡುವಂತೆ ಮಾಡಿದೆ.

ಚೀನಾ ಸ್ವಯಂ ಆಡಳಿತದ ತೈವಾನ್ ಅನ್ನು ತನ್ನದೇ ಆದ ಭೂಪ್ರದೇಶವಾಗಿ ನೋಡುತ್ತದೆ ಮತ್ತು ತೈಪೆಗೆ ರಾಜತಾಂತ್ರಿಕ ಮಾನ್ಯತೆ ನೀಡದಂತೆ ಇತರ ರಾಷ್ಟ್ರಗಳನ್ನು ಒತ್ತಾಯಿಸುತ್ತದೆ. ಚೀನಾ ರಚಿಸಿದ ಈ ಎಲ್ಲಾ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಪ್ರಮುಖ ಶಕ್ತಿಗಳಾದ ರಷ್ಯಾ ಮತ್ತು ಯುಎಸ್ ಜೊತೆಗಿನ ಭಾರತದ ರಕ್ಷಣಾ ಸಂಬಂಧಗಳು ಈಗ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ.

ಭಾರತವು ರಷ್ಯಾದೊಂದಿಗೆ “ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವ” ವನ್ನು ಹಂಚಿಕೊಂಡರೆ, ಅಮೆರಿಕ ಜೊತೆಗಿನ ತನ್ನ ಸಂಬಂಧವನ್ನು “ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ” ಕ್ಕೆ ಏರಿಸಲಾಗಿದೆ.

2016 ರಲ್ಲಿ, ಅಮೆರಿಕ ದೇಶವು ಭಾರತವನ್ನು "ಪ್ರಮುಖ ರಕ್ಷಣಾ ಪಾಲುದಾರ" ಎಂದು ಗುರುತಿಸಿತು, ಇದು ನವದೆಹಲಿಯನ್ನು ವಾಷಿಂಗ್ಟನ್‌ನ ಹತ್ತಿರದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಸಮನಾಗಿ ತಂದು ನಿಲ್ಲಿಸಿದೆ. ಈ ಮೂಲಕ ಅಮೆರಿಕ ರಕ್ಷಣಾ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳುವ ಬದ್ಧತೆಯನ್ನ ತೋರಿಸಿದೆ.

Last Updated : Jun 29, 2020, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.