ಶ್ರೀನಗರ: ಕಳೆದ ನಾಲ್ಕು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಉಂಟಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಳಿಸಿದೆ. ಕಾಶ್ಮೀರಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಎಲ್ಲ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿ ಮುಚ್ಚಿದ ಕಾರಣ ಮತ್ತು ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನ ರದ್ದತಿಯಿಂದಾಗಿ ಅನೇಕ ತೊಂದರೆಗೀಡಾದ ಪ್ರವಾಸಿಗರು ಕಾಶ್ಮೀರದಲ್ಲಿ ಸಿಲುಕಿಕೊಂಡರು. ಆದರೆ, ಸ್ಥಳೀಯ ಹೋಟೆಲಿಗರು ಮತ್ತು ಹೌಸ್‌ಬೋಟ್ ಮಾಲೀಕರು ದಾಲ್ ಸರೋವರದ ಹೌಸ್ಬೋಟ್ಗಳು ಹಾಗೂ ಶ್ರೀನಗರದ ಹೋಟೆಲ್‌ಗಳಲ್ಲಿ ತಂಗಿದ್ದ ಈ ಪ್ರವಾಸಿಗರನ್ನು ರಕ್ಷಿಸಲು ಬಂದಿದ್ದಾರೆ.
2019ರಲ್ಲಿ ಆರ್ಟಿಕಲ್ 370 ತಿದ್ದುಪಡಿ ಮತ್ತು ನಂತರ ಕಳೆದ ಮಾರ್ಚ್‌ನಲ್ಲಿ ಕೋವಿಡ್ -19 ಲಾಕ್‌ಡೌನ್ ಮಾಡಿದ ನಂತರ, ಕಾಶ್ಮೀರದಲ್ಲಿ ಒಂದೂವರೆ ವರ್ಷಗಳ ಕಾಲ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಹೊಸ ವರ್ಷದ ಮುನ್ನಾದಿನದಂದು ಜನ ಕಣಿವೆ ರಾಜ್ಯವನ್ನು ಭೇಟಿ ಮಾಡಲು ಪ್ರಾರಂಭಿಸಿದರು.
ಹೊಸ ವರ್ಷದ ಮುನ್ನಾದಿನದಂದು ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದ್ದಂತೆ, ಹಿಮ ಪರ್ವತಗಳು ಮತ್ತು ಬಯಲು ಪ್ರದೇಶಗಳ ದರ್ಶನ ಪಡೆಯಲು ಬಹಳಷ್ಟು ಪ್ರವಾಸಿಗರು ಕಣಿವೆಗೆ ಇಳಿದಿದ್ದರು. ಆದರೆ ಭಾರೀ ಹಿಮಪಾತ ಎಲ್ಲಾ ಸಂಪರ್ಕಗಳನ್ನು ಮುಚ್ಚಿರುವುದರಿಂದ ಕೆಲವು ಪ್ರವಾಸಿಗರು ಹಿಮಪಾತದಲ್ಲಿ ಸಿಲುಕಿಕೊಂಡಿದ್ದಾರೆ.
ಅಂಥವರಿಗೆ ಸಹಾಯ ಮಾಡಲು ಸ್ಥಳೀಯ ಹೋಟೆಲ್‌ಗಳು ಮತ್ತು ಹೌಸ್‌ಬೋಟ್‌ಗಳ ಮಾಲೀಕರು ಈಗ ಹವಾಮಾನ ಸುಧಾರಿಸುವವರೆಗೆ ಪ್ರವಾಸಿಗರಿಗೆ ಉಚಿತ ವಸತಿ ಒದಗಿಸುತ್ತಿದ್ದಾರೆ.