ಕನೌಜ್(ಉತ್ತರಪ್ರದೇಶ): ಮದುವೆ ಅನ್ನೋದು ಜೀವನದಲ್ಲಿ ಒಂದು ಸುಮಧುರವಾದ ಘಳಿಗೆ. ಆ ಸಮಯಕ್ಕಾಗಿ ಎಷ್ಟೋ ಮಂದಿ ಕನಸು ಕಾಣ್ತಾರೆ. ಮದುವೆ ನಿಶ್ಚಯವಾಗಿದ್ದರೆ ಆ ಅಪರೂಪದ ಕ್ಷಣ ಯಾವಾಗ ಬರುತ್ತೆ ಅಂತ ಎದುರು ನೋಡ್ತಾರೆ ದಾಂಪತ್ಯ ಜೀವನಕ್ಕೆ ಕಾಡಲಿರುವ ವಧು- ವರರು. ಈ ಮೊದಲು ನಿಶ್ಚಯವಾಗಿದ್ದ ವಿವಾಹಕ್ಕೆ ಕೊರೊನಾ ವೈರಸ್ ಅಡ್ಡವಾಗಿ ನಿಂತಿದೆ. ಇದಕ್ಕೆ ಲಾಕ್‌ಡೌನ್ ಇನ್ನಷ್ಟು ದಿನ ಕಾಯುವ ಶಿಕ್ಷೆಯನ್ನು ನೀಡಿದೆ.
ನಿಗದಿಯಾಗಿದ್ದ ದಿನದಂದೇ ತನ್ನ ಮದುವೆಯಾಗಬೇಕೆಂದು ಒಬ್ಬಂಟಿಯಾಗಿ 80 ಕಿಲೋ ಮೀಟರ್ ನಡೆದು ಬಂದು ವರನ ಮನೆ ಸೇರಿ ಯುವತಿ ಅಚ್ಚರಿ ಮೂಡಿಸಿದ್ದಾಳೆ. ಬಳಿಕ ತಮ್ಮ ಅತ್ತೆ-ಮಾವನ ಸಮ್ಮುಖದಲ್ಲಿ ವಿವಾಹವಾಗಿದ್ದಾಳೆ ಉತ್ತರಪ್ರದೇಶದ 19 ವರ್ಷದ ಗೊಲ್ಡಿ...
ಆಗಿದ್ದಿಷ್ಟು...
ಕಾನ್ಪುರ್ ಸಮೀಪದ ದಹಾತ್ ಜಿಲ್ಲಾ ಡೆರಾ ಲಕ್ಷ್ಮಣ್ ತಿಲಕ್ ಗ್ರಾಮಕ್ಕೆ ಸೇರಿದ ಯುವತಿ ಗೊಲ್ಡಿ. ಕನೌಜ್ ಜಿಲ್ಲಾ ಬೈಸಾಪುರ ಗ್ರಾಮಕ್ಕೆ ಸೇರಿದ ವೀರೇಂದ್ರ ಕುಮಾರ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗದಿದ್ದರೆ ಮೇ 4 ರಂದು ಇವರ ವಿವಾಹ ನೆರವೇರಬೇಕಿತ್ತು. ಆದ್ರೆ, ಪ್ರಧಾನಿ ಮೋದಿ ಲಾಕ್‌ಡೌನ್ 4.0 ಮುಂದುವರಿದಿದ್ದರಿಂದ ಇವರ ಮದುವೆಯ ಕನಸು ಮತ್ತಷ್ಟು ಮುಂದಕ್ಕೆ ಹೋಗಿದೆ. ಲಾಕ್‌ಡೌನ್ ನಡುವೆಯೂ ತನ್ನ ಸಾಹಸವನ್ನು ಪ್ರದರ್ಶಿಸಿದ ಯುವತಿ ಗೊಲ್ಡಿ, ಹೇಗಾದ್ರೂ ಮಾಡಿ ಈಗಾಗಲೇ ನಿಗದಿಯಾಗಿರುವ ದಿನಾಂಕದಂದೇ ಮದುವೆ ಮಾಡಿಕೊಳ್ಳಬೇಕೆಂದು ನಿರ್ಣಯಿಸಿದ್ದಾಳೆ. ಒಂದು ದಿನ ಬೆಳಗ್ಗೆ ಮನೆಯಿಂದ ಹೊರಟು ಬರೋಬ್ಬರಿ 80 ಕಿಲೋ ಮೀಟರ್ ನಡೆದು ಮದುವೆಯಾಗಬೇಕಿದ್ದ ವರನ ಮನೆ ಸೇರಿದ್ದಾಳೆ.
ಯಾವುದೇ ಆಡಂಬರ, ಬಂಧು-ಬಳಗ ಇಲ್ಲದೆಯೇ ಆಕಸ್ಮಿಕವಾಗಿ ಯುವತಿ ಮನೆಗೆ ಬರುತ್ತಿದ್ದಂತೆ ಯುವಕನ ಕುಟುಂಬ ಕೆಲಕಾಲ ಅಚ್ಚರಿಗೊಳಗಾಗಿದೆ. ತಮ್ಮ ಪುತ್ರಿಗಾಗಿ ಹುಡುಕಾಟ ನಡೆಸುತ್ತಿದ್ದ ಗೊಲ್ಡಿ ತಂದೆಗೆ ಸುದ್ದಿ ಮುಟ್ಟಿಸಿದ್ದಾರೆ. ಸರಿಯಾದ ಮುಹೂರ್ತದಲ್ಲಿ ಭರತ್‌ನೊಂದಿಗೆ ಮದುವೆ ಮಾಡೋದಾಗಿ ಹೇಳಿ ಇನ್ನಷ್ಟು ದಿನ ಕಾಯುವಂತೆ ಹೇಳಿದ್ದಾರೆ. 80 ಕಿ.ಮೀ ನಡೆದು ಬಂದಿದ್ದ ಯುವತಿ, ನಿಗದಿಯಾಗಿರುವ ದಿನಾಂಕದಲ್ಲೇ ಮದುವೆ ಮಾಡಿ ಅಂತ ಪಟ್ಟು ಹಿಡಿದಿದ್ದಾಳೆ. ಬಳಿಕ ಕುಟುಂಬದವರು, ಬಂಧು ಬಳಗ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾಳೆ.