ಗುಜರಾತ್: ಇಲ್ಲಿನ ಎಎಂಸಿ ಜನನ ಮತ್ತು ಮರಣ ನೋಂದಣಿ ಇಲಾಖೆಯು ಕರ್ತವ್ಯ ಲೋಪ ಎದುರಿಸುತ್ತಿದೆ. ಮಗುವಿನ ಜನನ ಪ್ರಮಾಣ ಪತ್ರದಲ್ಲಿ ನಿವಾಸದ ವಿಳಾಸವನ್ನು ಪಾಕಿಸ್ತಾನ ಎಂದು ನಮೂದಿಸಿ ಪ್ರಮಾದ ಎಸಗಿದೆ.
2018ರ ಅಕ್ಟೋಬರ್ 1ರಂದು ಸರ್ಕಾರಿ ವಸತಿಗೃಹದಲ್ಲಿ ಮುಸ್ಲಿಂ ಕುಟುಂಬದಲ್ಲಿ ಮಗುವೊಂದು ಜನಿಸಿತ್ತು. ಆದರೆ, ಆ ಮಗುವಿನ ಜನನ ಪ್ರಮಾಣಪತ್ರದಲ್ಲಿ ಎಎಂಸಿ ಸಿಬ್ಬಂದಿ ಮನೆಯ ವಿಳಾಸವನ್ನು ಪಾಕಿಸ್ತಾನ ಎಂದು ಬರೆಯಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜನನ ಮತ್ತು ಮರಣ ವಿಭಾಗದ ಮುಖ್ಯಸ್ಥ ಡಾ.ಭವಿನ್ ಜೋಶಿ, ಆಸ್ಪತ್ರೆಯಿಂದ ನೀಡಿದ ಪ್ರಮಾಣಪತ್ರದ ಅನ್ವಯ ನಾವು ಜನನ ಪ್ರಮಾಣ ಪತ್ರ ನೀಡುತ್ತೇವೆ. ಆದರೆ, ತಪ್ಪು ನಡೆದು ವರುಷಗಳೇ ಕಳೆದಿವೆ. ಈವರೆಗೂ ಮಗುವಿನ ಪೋಷಕರು ತಿಳಿಸಿರಲಿಲ್ಲ ಎಂದರು.