ನವದೆಹಲಿ: ದೇಶಾದ್ಯಂತ ಲಾಕ್ಡೌನ್ನಿಂದಾಗಿ ತಮ್ಮ ಮನೆಗಳಿಗೆ ತೆರಳಲಾಗದೆ ಹಲವು ನಗರ ಹಾಗೂ ವಿದೇಶಗಳಲ್ಲಿ ಮಕ್ಕಳು ಸಿಲುಕಿದ್ದಾರೆ. ಮಕ್ಕಳ ಪಾಲನೆ ಮಾಡದೆ ದೂರ ಉಳಿದಿರುವ ಪೋಷಕರು ಹಾಗೂ ಮಕ್ಕಳ ನಡುವೆ ಸಂಪರ್ಕ ಸಾಧಿಸಲು ಟೆಲಿ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಹಲವು ಕಾರಣಗಳಿಂದ ಮಕ್ಕಳನ್ನು ಪಾಲನೆ ಮಾಡದೆ ದೂರು ಉಳಿದಿರುವ ಪೋಷಕರಿಗೆ ಮಕ್ಕಳೊಂದಿಗೆ ಮಾತನಾಡಲು ಮುಕ್ತ ಅವಕಾಶ ನೀಡಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕುಮಾರ್ ಶೆಯೋಧ್ವಿ ರತ್ನ ಎಂಬುವವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಲಾಕ್ಡೌನ್, ಪೋಷಕರಿಂದ ದೂರಾಗಿರುವ ಮಕ್ಕಳಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಲು ಉತ್ತಮ ಅವಕಾಶವಾಗಿದೆ. ಇದು ಒಬ್ಬರನೊಬ್ಬರು ಸರಿಯಾಗಿ ಅರಿಯುವ ಸಮಯ. ಅಲ್ಲದೆ, ಮಕ್ಕಳ ಭೇಟಿಯ ಹಕ್ಕಿನಡಿಯಲ್ಲಿ ಪೋಷಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ದೂರಸಂಪರ್ಕ ಸಾಧನದ ಮೂಲಕ ಮಕ್ಕಳು ಹಾಗೂ ಪೋಷಕರ ನಡುವೆ ನಿರಂತರ ಸಂಪರ್ಕ ಸಾಧಿಸುವುದರಿಂದ ಮಕ್ಕಳಲ್ಲಿ ಕಂಡುಬರುವ ಪೋಷಕರ ಪರಕೀಯತೆ ಮನೋವ್ಯಾದಿ ನಿವಾರಿಸಬಹುದು. ಪೋಷಕರಿಂದ ಅಗಲಿಕೆ ಮಕ್ಕಳಲ್ಲಿ ಖಿನ್ನತೆಯಂತಹ ಸಮಸ್ಯೆ ಸೃಷ್ಟಿಸಬಹುದು ಎಂದಿದ್ದಾರೆ.