ನವದೆಹಲಿ : ಏರುತ್ತಿರುವ ಕೋವಿಡ್ -19 ಪ್ರಕರಣಗಳ ನಡುವೆಯೂ ಏರ್ ಇಂಡಿಯಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಅಲೈಯನ್ಸ್ ಏರ್, ಜುಲೈ 1 ರಿಂದ ಮೈಸೂರು ಮುಖಾಂತರ ಬೆಂಗಳೂರಿನಿಂದ ಗೋವಾಕ್ಕೆ ವಿಮಾನ ಹಾರಾಟ ನಡೆಸಲು ತೀರ್ಮಾನಿಸಿದೆ.
ವಿಮಾನಯಾನ ಸಂಸ್ಥೆಯ ಪ್ರಕಾರ, ಬೆಂಗಳೂರು-ಗೋವಾಕ್ಕೆ ಪ್ರಯಾಣದ ವೆಚ್ಚ 3,283 ರೂ.ನಿಂದ ಆರಂಭವಾಗಲಿದೆ. ವಿಮಾನಯಾನವು ಸರ್ಕಾರದ ಎಲ್ಲಾ ಮಾರ್ಗಸೂಚಿಗಳಿಗೆ ಬದ್ಧವಾಗಿದೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿದ ಎಲ್ಲಾ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನದೊಳಗೆ ಮತ್ತು ಚೆಕ್-ಇನ್, ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಹಾರಾಟದ ನಂತರ ವಿಮಾನವನ್ನು ಸೋಂಕು ರಹಿತಗೊಳಿಸಲಾಗುತ್ತಿದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.