ನವದೆಹಲಿ: ಕೃಷಿ ಸುಗ್ರೀವಾಜ್ಞೆ ವಿಧೇಯಕಗಳ ವಿಚಾರದಲ್ಲಿ ಮಿತ್ರಪಕ್ಷಗಳ ಮಾತಿಗೂ ಬೆಲೆ ಕೊಡದೇ ವಿಧೇಯಕ ಅಂಗೀಕಾರಕ್ಕೆ ಮುಂದಾಗಿರುವ ಬಿಜೆಪಿಯ ನಡೆಯನ್ನು ಖಂಡಿಸಿ, ಶಿರೋಮಣಿ ಅಕಾಲಿಕ ದಳದ ಹರ್ಸಿಮ್ರತ್ ಕೌರ್ ಬಾದಲ್ ಕೇಂದ್ರ ಮಂತ್ರಿ ಮಂಡಳಿಗೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯನ್ನು ರಾಷ್ಟ್ರಪತಿಗಳು ಒಪ್ಪಿಕೊಂಡಿದ್ದು, ಕೃಷಿ ಸಚಿವ ನರೇಂದ್ರ ತೋಮರ್‌ಗೆ ಆಹಾರ ಸಂಸ್ಕರಣಾ ಸಚಿವಾಲಯದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ.
ಶಿರೋಮಣಿ ಅಕಾಲಿಕ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಈಟಿವಿ ಭಾರತದೊಂದಿಗೆ ಮಾತನಾಡಿ, "ಈ ಮೈತ್ರಿ ಪಂಜಾಬ್‌ಗೆ ಮುಖ್ಯವಾಗಿದೆ. ಆದರೆ ನಮಗೆ ನಮ್ಮದೇ ಆದ ಸಿದ್ಧಾಂತವಿದೆ. ನಾವು ರೈತರ ಪರವಾಗಿ ನಿಲ್ಲುತ್ತೇವೆ. ಕ್ಯಾಬಿನೆಟ್‌ನಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲ ಎಂದ ಮೇಲೆ ನಾವು ಏಕೆ ಮುಂದುವರಿಯಬೇಕು" ಎಂದರು.
ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಯ ಮೈತ್ರಿಯೂ ಸುಮಾರು 90 ದಶಕದ ಉತ್ತರಾರ್ಧದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಇದ್ದಾಗ ಆಗಿದೆ. ಎನ್‌ಡಿಎಯ ಅತ್ಯಂತ ಹಳೆಯ ಮೈತ್ರಿ ಇದಾಗಿದೆ. ಪಂಜಾಬ್‌ನಲ್ಲಿ ಹಿಂದೂ ಮತ್ತು ಸಿಖ್ ಸಮುದಾಯಗಳನ್ನು ಒಂದುಗೂಡಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿದೆ ಎಂದರು.
ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು ಸುಖ್ಬೀರ್ ಸಿಂಗ್ ಬಾದಲ್ ಅವರಿಗೆ ಪತ್ರ ಬರೆದು ಎಂಎಸ್ಪಿ ಬಗ್ಗೆ ಭರವಸೆ ನೀಡಿದ್ದರು. ಆಶ್ವಾಸನೆಯ ಹೊರತಾಗಿಯೂ ಅಕಾಲಿಕ ದಳ ಕ್ಯಾಬಿನೆಟ್ನಿಂದ ಹೊರಗುಳಿಯಲು ಏಕೆ ನಿರ್ಧರಿಸಿದ್ದಾರೆ ಎಂದು ಕೇಳಿದಾಗ, "ನಾವು ರೈತರಿಗೆ ಪತ್ರವನ್ನು ತೋರಿಸಿದ್ದೇವೆ. ಆದರೆ ಎಂಎಸ್ಪಿ ಭಾಗವನ್ನು ಮಸೂದೆಯಲ್ಲಿ ಸೇರಿಸಬೇಕೆಂದು ಅವರು ಬಯಸಿದ್ದರು. ರೈತರು ಲಿಖಿತ ಭರವಸೆಯಿಂದ ತೃಪ್ತರಾಗಲಿಲ್ಲ. ಆದರೆ ಇದು ಮಸೂದೆಯಲ್ಲಿದೆ. ಇದನ್ನು ಕಾರ್ಯರೂಪಕ್ಕೆ ತರಲಿಲ್ಲ. ಆದ್ದರಿಂದ ನಾವು ತ್ಯಜಿಸಲು ನಿರ್ಧರಿಸಿದೆವು. ಮಸೂದೆಯ ಅಂತಿಮ ಕರಡು ಮೊದಲು ನಮ್ಮನ್ನು ಸಂಪರ್ಕಿಸಲಾಗಿಲ್ಲ. ಆದರೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸಮಿತಿಯ ಭಾಗವಾಗಿದ್ದರು.
ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಕ್ಯಾಪ್ಟನ್ ಅಮೃಂದರ್ ಸಿಂಗ್ ಅವರ ತುಂಬಾ ತಡವಾಗಿ ಹೇಳಿಕೆ ನೀಡಿರುವ ಕುರಿತು ಮಾತನಾಡಿದ, ಸುಖ್ಬೀರ್ ಬಾದಲ್ ನಮಗೆ ಕ್ಯಾಪ್ಟನ್ ಅಮರಿಂದರ್ ಅವರಿಂದ ಯಾವುದೇ ಪ್ರಮಾಣಪತ್ರ ಅಗತ್ಯವಿಲ್ಲ. ಇದೇ ಆದೇಶಗಳನ್ನು ಕ್ಯಾಪ್ಟನ್ ಅಮೃಂದರ್ ಸಿಂಗ್ ಸರ್ಕಾರವು ಮೊದಲೇ ಪರಿಚಯಿಸಿತು ಮತ್ತು ಅವರ ಪ್ರಣಾಳಿಕೆಯ ಭಾಗವಾಗಿತ್ತು. ಸಿಎಎಯಲ್ಲಿ ಮುಸ್ಲಿಮರನ್ನು ಹೊರಗಿಡುವುದನ್ನು ನಾವು ವಿರೋಧಿಸಿದ್ದೇವೆ ಮತ್ತು ಈ ಮಸೂದೆಗಳನ್ನು ನಾವು ವಿರೋಧಿಸುತ್ತೇವೆ ಎಂದರು.