ಇಂದೋರ್ (ಮಧ್ಯಪ್ರದೇಶ): ಮದರಸಾಗಳು ಭಯೋತ್ಪಾದಕರ ಮೂಲವಾಗಿದ್ದು, ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲೇ ಬೆಳೆದಿದ್ದಾರೆ. ಅವರು ಜಮ್ಮು ಕಾಶ್ಮೀರವನ್ನು ಉಗ್ರರನ್ನು ತಯರಿಸುವ ಕಾರ್ಖಾನೆಯನ್ನಾಗಿ ಮಾಡಿದ್ದಾರೆ ಎಂದು ಮಧ್ಯಪ್ರದೇಶದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದೋರ್ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯತೆಯನ್ನು ಮದರಸಾಗಳು ಒಪ್ಪುವುದಿಲ್ಲ. ಅವುಗಳನ್ನು ಪ್ರಸ್ತುತವಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಲೀನಗೊಳಿಸಬೇಕು. ಹೀಗಾದಾಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ ಎಂದಿದ್ದಾರೆ.
ಇದರ ಜೊತೆಗೆ ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲೇ ಓದಿದ್ದು, ಮದರಸಾಗಳು ಮಕ್ಕಳಿಗೆ ರಾಷ್ಟ್ರೀಯತೆಯ ಪಾಠ ಹೇಳಿಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದ್ದಾರೆ.