ಹೈದರಾಬಾದ್: ರಾಷ್ಟ್ರವ್ಯಾಪಿ ಲಾಕ್ಡೌನ್ ಪರಿಣಾಮ ಮದ್ಯ ಮಾರಾಟವನ್ನು ಆಯಾ ಸರ್ಕಾರಗಳು ನಿರ್ಬಂಧಿಸಿವೆ. ಈ ಹಿನ್ನೆಲೆಯಲ್ಲಿ ಮದ್ಯವೆಸನಿಗಳು ವಿಪರೀತ ಮತ್ತು ವಿಚಿತ್ರ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂಬ ವರದಿ ಹೊರಬಿದ್ದಿದೆ.
ಮದ್ಯ ಲಭ್ಯವಿಲ್ಲದ ಕಾರಣ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ನಡುವೆಯೇ, ಕೆಲವು ವ್ಯಸನಿಗಳು ಶೇವಿಂಗ್ ಲೋಷನ್ ಮತ್ತು ವಾರ್ನಿಷ್ ನಂತಹ ವಸ್ತುಗಳನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಪರಿಣಾಮ, ಆಲ್ಕೋಹಾಲ್ ಡಿ-ಅಡಿಕ್ಷನ್ ಕೇಂದ್ರಗಳು ಮತ್ತು ಸಹಾಯವಾಣಿಗಳು ಸ್ವೀಕರಿಸುವ ಕರೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಒಂದು ಅಂದಾಜಿನ ಪ್ರಕಾರ, ವಿಶ್ವದಲ್ಲಿ ಉತ್ಪಾದನೆಯಾಗುವ ಐದನೇ ಒಂದು ಭಾಗದಷ್ಟು ಮದ್ಯವನ್ನು ಭಾರತೀಯರೇ ಸೇವಿಸುತ್ತಾರೆ. ಎರಡು ವರ್ಷಗಳ ಹಿಂದೆ ಭಾರತದಲ್ಲಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಯನವು ಮದ್ಯ ಉದ್ಯಮ ವರ್ಷದಿಂದ ವರ್ಷಕ್ಕೆ ಶೇ 30 ರಷ್ಟು ವಿಸ್ತರಿಸುತ್ತಿದೆ ಎಂದು ತಿಳಿಸಿತ್ತು.
ಭಾರತದಲ್ಲಿ ಸೇವಿಸುವ ಸ್ಪಿರಿಟ್ಸ್, ವೈನ್ ಮತ್ತು ಬಿಯರ್‌ನ ಒಟ್ಟು ಮೌಲ್ಯವು 2015 ರಲ್ಲಿ 1.5 ಲಕ್ಷ ಕೋಟಿ ರೂ.ಆಗಿತ್ತು. ವರದಿಗಳ ಪ್ರಕಾರ, ಆರ್ಥಿಕ ಸಮೃದ್ಧಿ, ನಗರೀಕರಣ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ಯುವಜನ ಮದ್ಯದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಲಾಕ್ಡೌನ್ ಆದ ಸಮಯದಲ್ಲಿ ಆದ ಆನಾಹುತಗಳೇನು?
- ಮಾರ್ಚ್ 28 (ಕೇರಳ): ಮದ್ಯ ನಿಷೇಧದ ಬಗ್ಗೆ ಅಸಮಾಧಾನಗೊಂಡ ಇಬ್ಬರು ಕೊಚ್ಚಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- ಮಾರ್ಚ್ 30 (ಕೇರಳ): ಚಂಗನಾಶೇರಿಯಲ್ಲಿ ಎರಡು ಅಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 49 ವರ್ಷದ ಬೆದರಿಕೆ.
- ಮಾರ್ಚ್ 30 (ಕೇರಳ): ಮದ್ಯ ಸೇವಿಸದಿರುವ ಬಗ್ಗೆ ನಿರಾಶೆಗೊಂಡ ಇಬ್ಬರು ವ್ಯಕ್ತಿಗಳು ತ್ರಿಶೂರ್ ಮತ್ತು ಆಲಪ್ಪುಳದಲ್ಲಿ ಆತ್ಮಹತ್ಯೆ.
- ಮಾರ್ಚ್ 30 (ತೆಲಂಗಾಣ): ಹೈದರಾಬಾದ್‌ನಲ್ಲಿ ಐಎಂಎಚ್‌ಗೆ ಭೇಟಿ ನೀಡುವ ವ್ಯಸನಿ ರೋಗಿಗಳ ಸಂಖ್ಯೆ ದಿನಕ್ಕೆ ಗರಿಷ್ಠ ಅಂದರೆ ಐವರು ಇದ್ದರು ಅದರೆ, ದಿಢೀರನೇ 90 ಕ್ಕೆ ಏರಿದೆ.
- ಏಪ್ರಿಲ್ 4 (ತಮಿಳುನಾಡು): ಪುದುಕೋಟೈ ಜಿಲ್ಲೆಯಲ್ಲಿ ಶೇವಿಂಗ್ ಲೋಷನ್ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ.
- ಏಪ್ರಿಲ್ 5 (ತಮಿಳುನಾಡು): ಚೆನ್ನೈನಲ್ಲಿ ಮದ್ಯದ ಬಾಟಲಿಗಳನ್ನು ಕದಿಯಲು ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ.
- ಏಪ್ರಿಲ್ 5 (ತಮಿಳುನಾಡು): ಚೆಂಗಲ್‌ಪೇಟ್‌ನಲ್ಲಿ ವಾರ್ನಿಷ್ ಸೇವಿಸಿ ಮೂವರು ಸಾವನ್ನಪ್ಪಿದ್ದು, ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
- ಏಪ್ರಿಲ್ 5 (ತಮಿಳುನಾಡು): ಅಪರಿಚಿತ ವ್ಯಕ್ತಿಗಳು ದಿಂಡಿಗಲ್‌ನ ಟ್ಯಾಸ್ಮಾಕ್ ಅಂಗಡಿಯಿಂದ 5 ಲಕ್ಷ ರೂ.ಗಳ ಮದ್ಯವನ್ನು ಲೂಟಿ ಮಾಡಿದ್ದಾರೆ.
ವರದಿಗಳ ಪ್ರಕಾರ, ವ್ಯಸನಿಗಳು ಈಗ ತಮ್ಮ ನಿಯಮಿತ ಪ್ರಮಾಣದ ಮದ್ಯಸೇವನೆಯಿಂದ ವಂಚಿತರಾಗಿದ್ದಾರೆ. ಈ ಕಾರಣಕ್ಕೆ ಚಡಪಡಿಕೆ ಮತ್ತು ನಡುಕಗಳಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಿಷ್ಟು ಮದ್ಯವನ್ನು ವ್ಯಸನಿಗಳಿಗೆ ನೀಡಬಹುದು ಎನ್ನುವುದಾದರೆ ಇದು ಸರಿಹೋಗುವುದಿಲ್ಲ. ಅವರ ದೇಹವು ಹೆಚ್ಚಿನ ಮದ್ಯಕ್ಕೆ ಹಾತೊರೆಯುತ್ತದೆ ಎಂದು ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ.