ನವದೆಹಲಿ: ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ವಿಮಾನಗಳ ಹಾರಾಟ ಕಾರ್ಯಾಚರಣೆಯು ಮೇ 25ರಿಂದ ಪುನರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಇದರ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳ ಬಗೆಗಿನ ಮಾರ್ಗಸೂಚಿಯನ್ನು ಪ್ರಕಟಿಸಿದೆ.
- ಪ್ರಯಾಣಿಕರು ವಿಮಾಣ ನಿಲ್ದಾಣ ಟರ್ಮಿನಲ್ ಕಟ್ಟಡಕ್ಕೆ ಪ್ರವೇಶ ಮುನ್ನ ಥರ್ಮಲ್ ಸ್ಕ್ರೀನಿಂಗ್ ವಲಯದಲ್ಲಿ ಕಡ್ಡಾಯವಾಗಿ ಬರಬೇಕು
- ಎಲ್ಲ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದಿರುವುದು ಕಡ್ಡಾಯ 14 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯಿಸಲ್ಲ)
- ವಿಮಾನ ಹೊರಡುವ 2 ಗಂಟೆಗೂ ಮುನ್ನ ವಿಮಾನ ನಿಲ್ದಾಣ ತಲುಪಿರಬೇಕು
- ವಿಮಾನ ಹೊರಡುವ ಸಮಯ 4 ಗಂಟೆಗಿಂತಲೂ ಕಡಿಮೆ ಇದ್ದರೆ ಮಾತ್ರ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ವಲಯದೊಳಗೆ ಪ್ರವೇಶ
- ಮುಖಗವಸು ಮತ್ತು ಕೈಗವಸು ಧರಿಸುವುದು ಕಡ್ಡಾಯ
- ಎಲ್ಲರೂ ಥರ್ಮಲ್ ಸ್ಕ್ರೀನ್ ಮೂಲಕ ತಪಾಸಣೆಗೆ ಒಳಗಾಗಬೇಕು
- ವಿಶೇಷ ಪರಿಸ್ಥಿತಿಗಳು ಹೊರತು ಪಡಿಸಿ, ಟ್ರಾಲಿಗಳ ಬಳಕೆಗೆ ಅವಕಾಶವಿಲ್ಲ
- ವಿಮಾನ ನಿಲ್ದಾಣಗಳಿಗೆ ತಲುಪಲು ಪ್ರಯಾಣಿಕರು ಮತ್ತು ವಿಮಾನಯಾನ ಸಿಬ್ಬಂದಿಗೆ ರಾಜ್ಯ ಸರ್ಕಾರಗಳು ಹಾಗೂ ಆಡಳಿತ ಸಾರ್ವಜನಿಕ ಸಾರಿಗೆ, ಖಾಸಗಿ ಟ್ಯಾಕ್ಸಿಗಳ ವ್ಯವಸ್ಥೆ ಕಲ್ಪಿಸಬೇಕು
- ಖಾಸಗಿ ವಾಹನಗಳು ಅಥವಾ ಆಯ್ಕೆ ಮಾಡಿದ ಕ್ಯಾಬ್ ಸೇವೆಗಳ ಮೂಲಕ ಮಾತ್ರವೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗಲು ಅವಕಾಶ
- ಕನಿಷ್ಠ ಒಂದು ಮೀಟರ್ ಅಂತರದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
- ಹಾರಾಟದುದ್ದಕ್ಕೂ ಪ್ರಯಾಣಿಕರು ನೈರ್ಮಲ್ಯ ನಿಯಮಗಳನ್ನು ಪಾಲನೆ ಮಾಡಬೇಕು
- ಪ್ರಯಾಣಿಕರು ಮುಖಾಮುಖಿ ಸಂವಹನ ಕಡಿಮೆಗೊಳಿಸಬೇಕು
- ಪ್ರಯಾಣಿಕರಿಗೆ ಶೌಚಾಲಯದ ಬಳಕೆ ಕಡಿಮೆ ಮತ್ತು ಅನಾವಶ್ಯಕ ಓಡಾಟಕ್ಕೆ ನಿರ್ಬಂಧ
- ಶೌಚಾಲಯದಲ್ಲಿ ಕ್ಯೂಯಿಂಗ್ ಇಲ್ಲ. ಮಕ್ಕಳು ಮತ್ತು ವೃದ್ಧರಿಗೆ ಅವಕಾಶವಿಲ್ಲ
- ವಿಮಾನದಲ್ಲಿ ಯಾವುದೇ ಊಟದ ಸೇವೆಗಳ ಲಭ್ಯವಿರುವುದಿಲ್ಲ
- ಗ್ಯಾಲರಿ ಪ್ರದೇಶದಲ್ಲಿ ಅಥವಾ ಆಸನಗಳಲ್ಲಿ ನೀರಿನ ಬಾಟಲಿಯನ್ನು ಲಭ್ಯವಿರಬೇಕು
- ಹಾರಾಟದ ಸಮಯದಲ್ಲಿ ಪ್ರಯಾಣಿಕರು ವಿಮಾನದೊಳಗೆ ಯಾವುದೇ ತಿನ್ನಬಹುದಾದ ವಸ್ತುಗಳನ್ನು ಸೇವಿಸುವಂತಿಲ್ಲ