ಆಗ್ರ: ವಾಯು ಮಾಲಿನ್ಯದಿಂದ ಉತ್ತರ ಭಾರತ ತತ್ತರಿಸಿದ್ದು, ವಿಷ ಗಾಳಿಗೆ ಜನ ನಲುಗಿಹೋಗಿದ್ದಾರೆ. ಈ ನಡುವೆ ಐತಿಹಾಸಿಕ ಸ್ಮಾರಕ ತಾಜ್ ಮಹಲ್ಗೂ ವಾಯು ಮಾಲಿನ್ಯದ ಬಿಸಿ ತಟ್ಟಿದೆ.
ತೀವ್ರ ವಾಯುಮಾಲಿನ್ಯದಿಂದ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ ಉಂಟಾಗಬಾರದೆಂದು ತಾಜ್ ಮಹಲ್ ಬಳಿ ಒಂದು ವಾಯು ಶುದ್ಧೀಕರಣ ವಾಹನವನ್ನ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಧ್ಯದ ಪರಿಸ್ಥಿತಿ ಮತ್ತು ಗಾಳಿಯ ಗುಣಮಟ್ಟದಲ್ಲಿನ ಕ್ಷೀಣತೆಯನ್ನು ಗಮನಿಸಿ ತಾಜ್ ಮಹಲ್ನ ಪಶ್ಚಿಮ ದ್ವಾರದಲ್ಲಿ ಮೊಬೈಲ್ ಏರ್ ಪ್ಯೂರಿಫೈಯರ್ ವಾಹನವನ್ನ ನಿಯೋಜಿಸಲಾಗಿದೆ ಎಂದು ಯುಪಿಪಿಸಿಬಿ ಪ್ರಾದೇಶಿಕ ಅಧಿಕಾರಿ ಭುವನ್ ಯಾದವ್ ತಿಳಿಸಿದ್ದಾರೆ.
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ಮಹ್ ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ವಾಯು ಮಾಲಿನ್ಯವು ಬಿಳಿ ಅಮೃತಶಿಲೆಯ ಹಾನಿಗೆ ಕಾರಣವಾಗಲಿದೆ ಹೀಗಾಗಿ ವಾಯು ಶುದ್ಧೀಕರಣ ವಾಹನವನ್ನ ನಿಯೋಜಿಸಲಾಗಿದೆ.