ಕೊಯಂಬತ್ತೂರ್: ಭಾರತೀಯ ವಾಯುಪಡೆ ವಿಮಾನವೊಂದು ಎಂದಿನ ಹಾರಾಟ ನಡೆಸುತ್ತಿದ್ದಾಗ ಕೊಯಂಬತ್ತೂರು ಬಳಿ ಆಕಸ್ಮಿಕವಾಗಿ ಇಂಧನ ಟ್ಯಾಂಕ್ ಕೆಳಗುರುಳಿ, ಸ್ಫೋಟಗೊಂಡಿದೆ.
ತೇಜಸ್ ಲೈಟ್ ಕಂಬಾಟ್ ವಿಮಾನವು ಕೊಯಂಬತ್ತೂರ್ ಬಳಿಯ ಇರೊಕ್ಕೂರ್ ಬಳಿ ಎಂದಿನ ಹಾರಾಟದಲ್ಲಿ ತೊಡಗಿದ್ದ ವೇಳೆ ಇಂಧನ ಟ್ಯಾಂಕ್ ಕೆಳಗುರುಳಿದೆ. 1,200 ಲೀಟರ್ ಸಾಮರ್ಥ್ಯದ ಟ್ಯಾಂಕ್ ಕೃಷಿ ಭೂಮಿಯಲ್ಲಿ ಬೀಳುತ್ತಿದ್ದಂತೆ ಸ್ಫೋಟಗೊಂಡಿದೆ.
ಇಂಧನ ಟ್ಯಾಂಕ್ ಸ್ಫೋಟದಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಿದೆ. ಅವಶೇಷಗಳು ಬಿದ್ದ ಮೂರು ಜಾಗಗಳಲ್ಲಿ ಆಳವಾದ ಗುಂಜನರಲ್ಲಿದ್ದ ಆತಂಕ ದೂರವಾಗಿದೆ.
ತೇಜಸ್ ವಿಮಾನವು ಸೂಲೂರು ಏರ್ಕ್ರಾಫ್ಟ್ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.