ನವದೆಹಲಿ: ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದ ಶ್ರೀನಗರದ ವಾಯುನೆಲೆಯಿಂದ ಟೇಕಾಫ್ ಆದ ವಾಯುಪಡೆಯ 'Mi-17' ಹೆಲಿಕಾಪ್ಟರ್ ಅನ್ನು ವಾಯುಪಡೆಯ ಕ್ಷಿಪಣಿಯೇ ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ವಾಯುಪಡೆ ಮುಖ್ಯಸ್ಥರು ಮಾತನಾಡಿದ್ದಾರೆ.
ನಮ್ಮದೇ Mi-17 ಹೆಲಿಕಾಪ್ಟರ್ಅನ್ನು ನಾವೇ ಹೊಡೆದುರುಳಿಸಿದ್ದು, ಅದರಲ್ಲಿ ನಮ್ಮಿಂದ ದೊಡ್ಡ ತಪ್ಪಾಗಿದೆ ಎಂದಿರುವ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಐಎಎಫ್ ಸಿಬ್ಬಂದಿ ಹಾಗೂ ನಾಗರಿಕ ಸಾವನ್ನಪ್ಪಿದ್ದರು.
ವಾಯುಪಡೆ ದಿನಾಚರಣೆ ನಿಮಿತ್ತ ಮಾತನಾಡಿದ ಅವರು, 27 ಫೆಬ್ರವರಿಯಂದು ಪಾಕ್ ವಿರುದ್ಧ ವಾಯುಸೇನೆ ದಾಳಿ ನಡೆಸಿದ್ದಾಗಿ ನಾವು MiG-21 ಕಳೆದುಕೊಳ್ಳಬೇಕಾಯಿತು. ಇದೇ ವೇಳೆ, ಪಾಕಿಸ್ತಾನದ F-16 ಯುದ್ಧ ವಿಮಾನ ನಾವು ಹೊಡೆದುರಳಿಸಿದ್ದೇವೆ ಎಂದು ತಿಳಿಸಿದರು.
ಪಾಕಿಸ್ತಾನದಿಂದ ವಾಯುದಾಳಿ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಕಾಶ್ಮೀರದ ತುಂಬ ವಾಯು ಪಡೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಈ ವೇಳೆ ತಪ್ಪು ಅಂದಾಜಿನಿಂದ ಕಾಪ್ಟರ್ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು.