ETV Bharat / bharat

ಕೇಂದ್ರ ಬಜೆಟ್​ ದಿನವೇ ರೈತರಿಂದ ಸಂಸತ್​ ಮಾರ್ಚ್​ಗೆ ಕರೆ... ಮತ್ತಷ್ಟು ತೀವ್ರಗೊಳ್ಳಲಿದೆ ಪ್ರೊಟೆಸ್ಟ್!

ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಫೆ. 1ರಂದು ಸಂಸತ್​​ ಮಾರ್ಚ್​ಗೆ ಕರೆ ನೀಡಿವೆ.

Darshan Pal, Krantikari Kisan Union
Darshan Pal, Krantikari Kisan Union
author img

By

Published : Jan 25, 2021, 8:33 PM IST

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದ 60 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರು ಇದೀಗ ಅದನ್ನ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಕೇಂದ್ರ ಬಜೆಟ್​ ದಿನವೇ ಅನ್ನದಾತರಿಂದ ಸಂಸತ್ ಮಾರ್ಚ್​ಗೆ ಕರೆ ನೀಡಲಾಗಿದೆ.

ನಾಳೆ ಟ್ರ್ಯಾಕ್ಟರ್ ರ‍್ಯಾಲಿ‌ ನಡೆಸಲು ಮುಂದಾಗಿರುವ ಅನ್ನದಾತರು ಇದೀಗ ಫೆ.1ರಂದು ಸಂಸತ್​ ಮಾರ್ಚ್​ಗೆ ಕರೆ ನೀಡಿದ್ದಾರೆ. ಫೆ.1ರಂದು ಕೇಂದ್ರ ಬಜೆಟ್​ ಮಂಡನೆಯಾಗಲಿದ್ದು, ಅದೇ ದಿನದಂದು ರೈತರು ಈ ಆಂದೋಲನ ಹಮ್ಮಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ಮುಖಂಡ ದರ್ಶನ್ ಪಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಓದಿ: ಮೋದಿ ನಿಮ್ಮ ಮಾತು ಕೇಳ್ತಾರೆ, ಕೃಷಿ ಕಾನೂನು ರದ್ಧುಪಡಿಸಲು ಹೇಳಿ: ನಮೋ ತಾಯಿಗೆ ಪತ್ರ

ದೇಶದ ವಿವಿಧ ಮೂಲೆಗಳಿಂದ ರೈತರು ಆಗಮಿಸಲಿದ್ದು, ದೆಹಲಿಯ ಸಂಸತ್ ಭವನಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಾಳೆಯ ಪ್ರತಿಭಟನೆಯಲ್ಲಿ ಭಾಗಿಯಾಗಲು ಕರ್ನಾಟಕ ಸೇರಿದಂತೆ ಪಂಜಾಬ್​, ದೆಹಲಿ, ಉತ್ತರಪ್ರದೇಶ ಹಾಗೂ ಹರಿಯಾಣದ ಸಾವಿರಾರು ರೈತರು ತಮ್ಮ ಟ್ರ್ಯಾಕ್ಟರ್​ಗಳೊಂದಿಗೆ ತೆರಳಿದ್ದು, ದೊಡ್ಡ ಮಟ್ಟದಲ್ಲಿ ರ‍್ಯಾಲಿ‌ ನಡೆಸಲುವ ಯೋಜನೆ ಹಾಕಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನು ರದ್ದುಗೊಳಿಸುವವರೆಗೂ ಈ ಪ್ರತಿಭಟನೆ ಮುಂದುವರೆಯಲಿದೆ ಎಂದು ರೈತ ಸಂಘಟನೆಗಳು ತಿಳಿಸಿದ್ದು, ರೈತರ ಬಲ ಏನು ಎಂಬುದು ಸರ್ಕಾರಕ್ಕೆ ಗೊತ್ತಾಗಬೇಕಿದೆ ಎಂದಿದ್ದಾರೆ. ರೈತರ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದೆ ಎಂದು ರೈತ ಸಂಘಟನೆ ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.